ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ 296 ಕೋಮು ಗಲಭೆ ಪ್ರಕರಣಗಳು ದಾಖಲು: ಮೊದಲ ಸ್ಥಾನದಲ್ಲಿ ಯುಪಿ ಮತ್ತು ಕರ್ನಾಟಕ

Last Updated 8 ಆಗಸ್ಟ್ 2017, 14:10 IST
ಅಕ್ಷರ ಗಾತ್ರ

ನವದೆಹಲಿ: ಈ ವರ್ಷದ ಮೊದಲ 5 ತಿಂಗಳಲ್ಲಿ ದೇಶದಾದ್ಯಂತ 296 ಕೋಮು ಗಲಭೆ ಪ್ರಕರಣಗಳು ದಾಖಲಾಗಿದ್ದು,  ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ಮೊದಲ ಸ್ಥಾನದಲ್ಲಿವೆ.

ಕೋಮು ಗಲಭೆ ಪ್ರಕರಣಗಳಲ್ಲಿ ಒಟ್ಟು 44 ಜನರು ಪ್ರಾಣ ಕಳೆದುಕೊಂಡಿದ್ದು  892 ಜನರು ಗಾಯಗೊಂಡಿದ್ದಾರೆ. ಅತಿ ಹೆಚ್ಚು ಪ್ರಕರಣಗಳು ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ನಡೆದಿವೆ. ಉತ್ತರ ಪ್ರದೇಶದಲ್ಲಿ 60 ಪ್ರರಣಗಳು ದಾಖಲಾಗಿದ್ದು  16 ಜನರು ಮೃತಪಟ್ಟು  151 ಜನರು ಗಾಯಗೊಂಡಿದ್ದಾರೆ. ಕರ್ನಾಟಕದಲ್ಲಿ 36 ಪ್ರಕರಣಗಳು ವರದಿಯಾಗಿದ್ದು ಮೂವರು  ಪ್ರಾಣ ಕಳೆದುಕೊಂಡಿದ್ದು,  93 ಜನರು ಗಾಯಗೊಂಡಿದ್ದಾರೆ ಎಂದು ಲೋಕಸಭೆಯು ಲಿಖಿತ ಉತ್ತರದಲ್ಲಿ ತಿಳಿಸಿದೆ.

ಮಧ್ಯಪ್ರದೇಶದಲ್ಲಿ 29,  ರಾಜಸ್ಥಾನ 27,  ಬಿಹಾರ್ 23, ಗುಜರಾತ್ ಮತ್ತು  ಮಹಾರಾಷ್ಟ್ರ ರಾಜ್ಯಗಳಲ್ಲಿ 20 ಕೋಮು ಗಲಭೆ ನಡೆದಿರುವ ಬಗ್ಗೆ ವರದಿಯಾಗಿದೆ. ಕಳೆದ 2014ರಲ್ಲಿ 644, 2015ರಲ್ಲಿ 751, 2016 ರಲ್ಲಿ 703   ಪ್ರಕರಣಗಳು ದಾಖಲಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT