ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಂಬೆ ಮೈಯಲ್ಲಿ ದೇಶಭಕ್ತಿಯ ಜೀವಸಂಚಾರ

Last Updated 17 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

‘ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ..’ ಹಾಡು ಮೂಡಿಬರುತ್ತಿದ್ದ ಹಾಗೆಯೇ ಪುನೀತ್‌ ರಾಜಕುಮಾರ ಅವರ ಚಿತ್ರವನ್ನು ತೆರೆಯ ಮೇಲೆ ನಿರೀಕ್ಷಿಸುತ್ತಿದ್ದವರಿಗೆ ಅಚ್ಚರಿ ಕಾದಿತ್ತು. ತೆರೆಯ ಮೇಲೆ ಕಾಣಿಸಿಕೊಂಡಿದ್ದು ದೇಶ ಕಾಯುವ ಯೋಧ. ಅವನ ಕಂಗಳಲ್ಲಿ ದೇಶಭಕ್ತಿಯ ಹೊಳಪು. ಎಳೆ ಮುಖದಲ್ಲಿ ಮುಖದಲ್ಲಿ ದೃಢತೆ.

‘ರಾಜ್‌ಕುಮಾರ’ ಚಿತ್ರದ ಜನಪ್ರಿಯ ಹಾಡು ‘ಬೊಂಬೆ ಹೇಳುತೈತೆ’ಯನ್ನು ದೇಶಭಕ್ತಿಯ ಕಥನದ ಎಳೆಯೊಂದಿಗೆ ಸೇರಿಸಿ ಕವರ್‌ ಸಾಂಗ್‌ ಮಾಡಿದ್ದಾರೆ ಲೋಹಿತ್‌ ಜೆ. ಮತ್ತು ಅವರ ತಂಡ. ಸಿನಿಮಾದಲ್ಲಿ ಪೋಷಕರ ಸಾವಿನ ನೆನಪಿನ ಭಾವದಲ್ಲಿ ರೂಪುಗೊಂಡಿದ್ದ ಈ ಹಾಡಿಗೆ ಈಗ ಯೋಧನನೊಬ್ಬನ ಬದುಕಿನ ಕಥನವನ್ನು ತಳುಕು ಹಾಕಿ ಮರುರೂಪಿಸಲಾಗಿದೆ.  ಈ ಹಾಡನ್ನು ಸ್ವಾತಂತ್ರ್ಯೋತ್ಸವದಂದು ದೇಶದ ಯೋಧರಿಗೆ ಅರ್ಪಿಸಲಾಯಿತು.

ಹಾಡನ್ನು ಬಿಡುಗಡೆ ಮಾಡಲು ‘ರಾಜ್‌ಕುಮಾರ’ ಸಿನಿಮಾದ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಅವರೇ ಹಾಜರಿದ್ದರು.

ಗುರುಚರಣ್‌ ಈ ಹಾಡಿನ ನಿರ್ಮಾಣದ ಜಬಾಬ್ದಾರಿ ಹೊತ್ತಿದ್ದಾರೆ. ಡಿ ಬಿಟ್ಸ್‌ನ ಪರವಾಗಿ ಶೈಲಜಾ ನಾಗ್‌ ಈ ಸಂದರ್ಭದಲ್ಲಿ ಹಾಜರಿದ್ದರು.

ನಿತಿನ್‌ ಆಂಜನಪ್ಪ ಅವರ ಛಾಯಾಗ್ರಹಣ, ವಿಜೇತ್‌ ಚಂದ್ರ ಸಂಕಲನ ಇರುವ ಈ ಹಾಡಿನಲ್ಲಿ ನಂದನ್‌ ಗೌಡ, ಶಶಾಂಕ ಶರ್ಮ, ಚೈತ್ರಾ ಜೆ. ಆಚಾರ್‌, ಅನುಷ್ಕಾ ಕಪೂರ್‌ , ರೂಪೇಶ್‌ ಶೆಟ್ಟಿ, ರಕ್ಷಿತ್‌ ಸೋಮಶೇಖರ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT