ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ಛಾಯಾಗ್ರಹಣದ ದೈತ್ಯಲೋಕ

Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಯೂತ್ ಫೋಟೊಗ್ರಫಿಕ್‌ ಸೊಸೈಟಿಯು (ವೈಪಿಎಸ್‌) ವಿಶ್ವ ಛಾಯಾಗ್ರಹಣ ದಿನದ ನಿಮಿತ್ತ ಶನಿವಾರ (ಸಂಜೆ 5.30ಕ್ಕೆ) ಹಿರಿಯ ಛಾಯಾಗ್ರಾಹಕರಿಗೆ ಗೌರವ ಪ್ರದಾನ ಮತ್ತು ಸೇವಾ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ.

ಇದೇ ಸಂದರ್ಭದಲ್ಲಿ ವೈಪಿಎಸ್‌ ಆಯೋಜಿಸಿರುವ ಅಂತರರಾಷ್ಟ್ರೀಯ ಮಟ್ಟದ ಮೊದಲ ಡಿಜಿಟಲ್ ಛಾಯಾಗ್ರಹಣ ಸ್ಪರ್ಧೆ ಪ್ರದರ್ಶನವೂ ನಡೆಯಲಿದೆ. ಮೊನೊಕ್ರೋಮ್ (ಕಪ್ಪು–ಬಿಳುಪು) ವಿಭಾಗದಲ್ಲಿ ಕೋಲ್ಕತ್ತಾದ ಎಸ್‌.ಪಿ. ಮುಖರ್ಜಿ ದ್ವಿತೀಯ ಬಹುಮಾನ ಪಡೆದಿದ್ದಾರೆ.

ಕಾರ್ಯಕ್ರಮದಲ್ಲಿ ಸಿನಿಮಾ ನಿರ್ದೇಶಕ ಬಿ. ಸುರೇಶ್ ಮತ್ತು ಸಿನಿಮಾಟೊಗ್ರಾಫರ್ ಶೇಖರ್ ಚಂದ್ರು ಅತಿಥಿಗಳಾಗಿ ಭಾಗವಹಿಸುವರು. ಸಲಾನ್ ಪ್ರಶಸ್ತಿ ಪಡೆದ ವೈವಿಧ್ಯಮಯ ಛಾಯಾಚಿತ್ರಗಳು, ಹನಿಕೂಂಬ್ ಕ್ರಿಯೇಟಿವ್ ಸಪೋರ್ಟ್ ಸಂಸ್ಥೆಯಿಂದ ವಿಶೇಷವಾಗಿ ಆರ್ಕಿವಾಲ್ ತಂತ್ರಜ್ಞಾನದಲ್ಲಿ ಮುದ್ರಿತವಾಗಿರುವ ಛಾಯಾಚಿತ್ರಗಳ ಪ್ರದರ್ಶನ, ಸಲಾನ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ 281 ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆ.

ಛಾಯಾಚಿತ್ರ ಪ್ರದರ್ಶನ ಆಗಸ್ಟ್ 21ರವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಹೆಚ್ಚಿನ ಮಾಹಿತಿಗೆ 94486 87595, 98459 31306.

**

ವರ್ಣವಿಭಾಗ: ಪ್ರಥಮ ಬಹುಮಾನ ಎಫ್‌ಐಎಪಿ ಗೋಲ್ಡ್‌– ಅರ್ನಾಲ್ಡೋ ಪೌಲ್ ಚೆ (ಹಾಂಕಾಂಗ್‌)

*

ವರ್ಣವಿಭಾಗ: ದ್ವಿತೀಯ ಬಹುಮಾನ ಪಿಎಸ್ಎ ಗೋಲ್ಡ್‌– ಲಾನ್‌ಫೆಂಗ್ ಚೆನ್ (ಚೀನಾ)

*

ವರ್ಣ ವಿಭಾಗ: ತೃತೀಯ ಬಹುಮಾನ ಎಫ್‌ಐಪಿಎ ಸಿಲ್ವರ್– ಚುನ್‌ಲಿಂಗ್ ಲಿ (ಚೀನಾ)

*

ಮೊನೋಕ್ರೋಮ್ (ಕಪ್ಪು–ಬಿಳುಪು) ವಿಭಾಗ: ಪ್ರಥಮ ಬಹುಮಾನ ಎಫ್‌ಐಎಪಿ ಗೋಲ್ಡ್‌– ಅರ್ನಾಲ್ಡೋ ಪೌಲ್ ಚೆ (ಹಾಂಗ್‌ಕಾಂಗ್‌)

*

ಮೊನೋಕ್ರೋಮ್ (ಕಪ್ಪು–ಬಿಳುಪು) ವಿಭಾಗ: ದ್ವಿತೀಯ ಬಹುಮಾನ ಪಿಎಸ್ಎ ಗೋಲ್ಡ್‌– ಎಸ್‌.ಪಿ. ಮುಖರ್ಜಿ (ಕೋಲ್ಕತ್ತಾ, ಭಾರತ)

*

ಮೊನೋಕ್ರೋಮ್ (ಕಪ್ಪು–ಬಿಳುಪು) ವಿಭಾಗ: ತೃತೀಯ ಬಹುಮಾನ ಎಫ್‌ಐಪಿಎ ಸಿಲ್ವರ್– ಕಾಮ್ ಚು ಟಾಮ್ (ಕೆನಡಾ)

*

ಪ್ರಕೃತಿ ಮತ್ತು ವನ್ಯಜೀವಿ ವಿಭಾಗ:ಪ್ರಥಮ ಬಹುಮಾನ ಎಫ್‌ಐಎಪಿ ಗೋಲ್ಡ್‌–ಫಹಾದ್ ಅಲೆನ್ಜಿ (ಕುವೈತ್)

*

ಪ್ರಕೃತಿ ಮತ್ತು ವನ್ಯಜೀವಿ ವಿಭಾಗ: ದ್ವಿತೀಯ ಬಹುಮಾನ ಪಿಎಸ್ಎ ಗೋಲ್ಡ್‌ ಅರ್ನಾಲ್ಡೋ ಪೌಲ್ ಚೆ (ಹಾಂಗ್‌ಕಾಂಗ್‌)

*

ಪಯಣ ವಿಭಾಗ: ಪ್ರಥಮ ಬಹುಮಾನ ಎಫ್‌ಐಎಪಿ ಗೋಲ್ಡ್‌–ಅಲೆಕ್ಸೆ ಸುಲೊವ್ (ರಷ್ಯಾ)

*

ಪಯಣ ವಿಭಾಗ: ದ್ವಿತೀಯ ಬಹುಮಾನ ಪಿಎಸ್ಎ ಗೋಲ್ಡ್‌–ಹು ವಾಂಗ್‌ (ಚೀನಾ)

*

ಪಯಣ ವಿಭಾಗ:ತೃತೀಯ ಬಹುಮಾನ ಎಫ್‌ಐಪಿಎ ಸಿಲ್ವರ್–ಚುನ್‌ಲಿಂಗ್ ಲಿ (ಚೀನಾ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT