ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್ ಮೆಟ್ಟಿಲೇರಿದ ಶ್ರೀಶಾಂತ್

ಸ್ಕಾಟ್ಲೆಂಡ್‌ನಲ್ಲಿ ಆಡಲು ಅನುಮತಿ ನೀಡಲು ಬಿಸಿಸಿಐಗೆ ಆಗ್ರಹ
Last Updated 18 ಆಗಸ್ಟ್ 2017, 19:44 IST
ಅಕ್ಷರ ಗಾತ್ರ

ಕೊಚ್ಚಿ (ಪಿಟಿಐ): ಸ್ಕಾಟ್ಲೆಂಡ್‌ನಲ್ಲಿ ಕ್ರಿಕೆಟ್ ಆಡಲು ನಿರಾ ಕ್ಷೇಪಣ ಪತ್ರ (ಎನ್‌ಒಸಿ) ನೀಡು ವಂತೆ ಬಿಸಿಸಿಐಗೆ ನಿರ್ದೇಶನ ನೀಡ ಬೇಕೆಂದು ಕ್ರಿಕೆಟಿಗ ಎಸ್‌. ಶ್ರೀಶಾಂತ್ ಅವರು ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

‘ಮುಂದಿನ ತಿಂಗಳು ಸ್ಕಾಟ್ಲೆಂಡ್‌ನಲ್ಲಿ ನಡೆಯಲಿರುವ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಲು ಬಿಸಿಸಿಐ ಅನುಮತಿಪತ್ರ ನೀಡಬೇಕು. ಆಲ್ಲಿಯ ಟೂರ್ನಿಗೆ ಪ್ರವೇಶ ಕಳಿಸಲು ನಿಗದಿಯಾಗಿರುವ ಅವಧಿಯ ಮುನ್ನವೇ ಬಿಸಿಸಿಐ ಅನುಮತಿ ನೀಡುವಂತೆ ನ್ಯಾಯಾಲಯವು ನಿರ್ದೇಶನ ನೀಡಬೇಕು’ ಎಂದು ಶ್ರೀಶಾಂತ್ ಕೋರಿದ್ದಾರೆ.

2013ರ ಐಪಿಎಲ್ ಸ್ಪಾಟ್‌ ಫೀಕ್ಡಿಂಗ್‌ ಹಗರಣದಲ್ಲಿ ಭಾಗಿ ಯಾದ ಆರೋಪವನ್ನು ಶ್ರೀಶಾಂತ್ ಎದುರಿಸಿದ್ದರು. ಆಗ ಬಿಸಿಸಿಐ ಅವರ ಮೇಲೆ ಆಜೀವ ನಿಷೇಧ ಹೇರಿತ್ತು. ನಂತರ ಅವರು ಆರೋಪ ಮುಕ್ತರಾಗಿದ್ದರು.

ಆದರೂ ಅವರ ಮೇಲಿನ ನಿಷೇಧವನ್ನು ಬಿಸಿಸಿಐ ತೆರವುಗೊಳಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT