ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಫೋನ್‌ ಬಳಸುವ ಮುನ್ನ

Last Updated 20 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಹೊಸ ಮೊಬೈಲ್‌ಫೋನ್‌ ಖರೀದಿಸಿದ ಸಂಭ್ರಮದಲ್ಲಿ ಕೂಡಲೇ ಸಿಮ್‌ ಹಾಕಿ ಬಳಸುವ ಮುನ್ನ ಎಚ್ಚರ ಇರಲಿ. ಮಾರುಕಟ್ಟೆಗೆ ಬರುತ್ತಿರುವ ಬಹುತೇಕ ಮೊಬೈಲ್‌ ಫೋನ್‌ಗಳಲ್ಲಿ ಆಂಡ್ರಾಯ್ಡ್‌ ತಂತ್ರಾಂಶ ಯಥಾವತ್ತಾಗಿ ಇರುವುದಿಲ್ಲ. ಮೊಬೈಲ್ ಫೋನ್‌ ತಯಾರಿಸುವ ಕಂಪನಿಗಳು ತಮ್ಮ ಮೊಬೈಲ್‌ಫೋನ್‌ಗೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಮಾಡಿರುತ್ತಾರೆ. ಹೀಗಾಗಿ ಬಳಸುವ ಮುನ್ನ ಸೆಟ್ಟಿಂಗ್ಸ್‌ ಬಗ್ಗೆ ಸ್ವಲ್ಪ ಗಮನ ಕೊಡಬೇಕು.

ಮೊಬೈಲ್‌ಫೋನ್‌ ಬಾಕ್ಸ್‌ ತೆರೆದ ಕೂಡಲೇ ಬಾಕ್ಸ್‌ ಮೇಲೆ ಸೂಚಿಸಿರುವ ಎಲ್ಲ ವಸ್ತುಗಳು ಇವೆಯೇ ಎಂಬುದನ್ನು ಮೊದಲು ಪರೀಕ್ಷಿಸಿ. ಸಿಮ್‌ ಅಳವಡಿಸಲು ನೆರವಾಗುವ ಪಿನ್‌, ಬ್ಯಾಟರಿ, ಇಯರ್‌ಫೋನ್‌, ಫೋನ್ ಬಳಸಲು ಸೂಚಿಸುವ ಕೈಪಿಡಿ ಹೀಗೆ...

ಹೊಸ ಮತ್ತು ಅಗತ್ಯ ತಂತ್ರಾಂಶಗಳನ್ನು ಅಳವಡಿಸಿಕೊಳ್ಳಲು ವೈ–ಫೈ ಸಂಪರ್ಕ ಪಡೆಯಿರಿ. ಇಲ್ಲದಿದ್ದರೆ ಹೈಸ್ಪೀಡ್‌ ಡೇಟಾ ಇದೆಯೇ ಎಂಬುದನ್ನು ಗಮನಿಸಿ. ಮೊಬೈಲ್‌ ಪೂರ್ತಿ ಚಾರ್ಜ್‌ ಆಗಿದೆಯೇ ಎಂಬುದನ್ನೂ ಪರಿಶೀಲಿಸಿ.

ಗೂಗಲ್‌ ಜತೆ ಸೇರಿಸಿ
ಹೊಸ ಮೊಬೈಲ್‌ಫೋನ್‌ ಬ್ಯಾಕಪ್‌ಗಾಗಿ ಪ್ರತ್ಯೇಕವಾದ ಒಂದು ಜಿ–ಮೇಲ್‌ ಖಾತೆ ತೆರೆಯುವುದು ಒಳ್ಳೆಯದು. ಇದರಿಂದ ನಿಮ್ಮ ಕಾಂಟ್ಯಾಕ್ಟ್‌, ಇಮೇಜ್‌, ಡಾಕ್ಯುಮೆಂಟ್ಸ್‌ ಇನ್ನಿತರ ಅಗತ್ಯ ಮಾಹಿತಿ ಸುರಕ್ಷಿತವಾಗಿ ಇಡಬಹುದು.

ಒಂದೇ ತಂತ್ರಾಂಶವಿರಲಿ
ಹೊಸ ಮೊಬೈಲ್‌ಫೋನ್‌ಗಳಲ್ಲಿ ಸಂಸ್ಥೆಯವರೇ ಕೆಲವು ಡಿಫಾಲ್ಟ್‌ ಬ್ರೌಸರ್ ಅಳವಡಿಸಿರುತ್ತಾರೆ. ಇದಲ್ಲದೆ ಕ್ರೋಮ್‌, ಯುಸಿ ಬ್ರೌಸರ್‌ನಂತಹ ತಂತ್ರಾಂಶಗಳು ಇದ್ದರೆ, ನೀವು ಹೆಚ್ಚು ಉಪಯೋಗಿಸುವ ಮತ್ತು ಉತ್ತಮವಾದ ಬ್ರೌಸರ್‌ ಅನ್ನು ಉಳಿಸಿಕೊಂಡು ಉಳಿದವನ್ನು ತೆಗೆದುಹಾಕಿ, ಇದೇ ರೀತಿ ಕ್ಯಾಮರಾ, ಕೀ ಬೋರ್ಡ್‌ ತಂತ್ರಾಂಶಗಳ ಮೇಲೂ ಕಣ್ಣಾಡಿಸಿ. ಇದರಿಂದ ಮೊಬೈಲ್‌ ರ‍್ಯಾಂ ಮೇಲೆ ಭಾರ ಕಡಿಮೆಯಾಗುತ್ತದೆ. ಇತರ ತಂತ್ರಾಂಶಗಳನ್ನು ಅಳವಡಿಸಲು ಸ್ಥಳವೂ ಸಿಗುತ್ತದೆ.

ರಕ್ಷಣೆ ಕಡ್ಡಾಯ
ಹೊಸ ಮೊಬೈಲ್‌ ಫೋನ್‌ ಖರೀದಿಸಿದ ನಂತರ ಉದಾಸೀನ ತೋರದೆ ಕಡ್ಡಾಯವಾಗಿ ಪಾಸ್‌ವರ್ಡ್‌, ಪ್ಯಾಟರ್ನ್‌, ಫಿಂಗರ್‌ಪ್ರಿಂಟ್ ಮೂಲಕ ನಿಮ್ಮ ಖಾಸಗಿತನವನ್ನು ರಕ್ಷಿಸಿಕೊಳ್ಳಿ.

ಈ ಸೌಲಭ್ಯಗಳು ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲೂ ಲಭ್ಯವಿವೆ. ಅಲ್ಲದೆ ಗುಣಮಟ್ಟದ ಆ್ಯಂಟಿವೈರಸ್‌ ತಂತ್ರಾಂಶ ಅಳವಡಿಸಿಕೊಳ್ಳುವುದು ಉತ್ತಮ.
ಇವೆಲ್ಲದರ ಜತೆಗೆ ಡಿಸ್‌ಪ್ಲೇ ಸೆಟ್ಟಿಂಗ್‌, ಕಾಲ್‌ಸೆಟ್ಟಿಂಗ್, ಸಿಮ್‌ಸೆಟ್ಟಿಂಗ್‌, ರಿಂಗ್‌ಟೋನ್‌ ಸೆಟ್ಟಿಂಗ್ ಹೀಗೆ ಎಲ್ಲವುಗಳ ಮೇಲೆ ಒಮ್ಮೆ ಕಣ್ಣಾಡಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT