ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಬಾರಿನ ಮಂಟಪದಲ್ಲಿ ಗಣೇಶ

Last Updated 24 ಆಗಸ್ಟ್ 2017, 20:01 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರಣ್ಯ ಯುವಕ ಸಂಘವು ಆಗಸ್ಟ್‌ 25 ರಿಂದ ಸೆಪ್ಟೆಂಬರ್‌ 4ರವರೆಗೆ ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ 55ನೇ ವರ್ಷದ ಗಣೇಶ ಉತ್ಸವದಲ್ಲಿ ಮೈಸೂರು ಅರಮನೆಯ ದರ್ಬಾರ್‌ ಹಾಲ್‌ನ ಪ್ರತಿರೂಪದ ಆಕರ್ಷಕ ಮಂಟಪದಲ್ಲಿ ಗಣೇಶನನ್ನು ವೀಕ್ಷಿಸಬಹುದು.

‘ಸಂಘವು ಪರಿಸರ ರಕ್ಷಣೆಯ ಕಾಳಜಿ ಹೊಂದಿದ್ದು, ಉತ್ಸವ ನಡೆಯುವ 11 ದಿನಗಳೂ ಮೈದಾನವು ಪ್ಲಾಸ್ಟಿಕ್‌ ಮುಕ್ತ ವಲಯವಾಗಿರುತ್ತದೆ. ಮಾತ್ರವಲ್ಲದೆ ಮಂಟಪದ ಅಲಂಕಾರಕ್ಕೆ ಕಳೆದ ವರ್ಷ ಬಳಸಿದ ಅಲಂಕಾರಿಕ ವಸ್ತುಗಳನ್ನೆ ಈ ಬಾರಿಯು ಮರುಬಳಕೆ ಮಾಡಿದ್ದೇವೆ’ ಎನ್ನುತ್ತಾರೆ ಕಾರ್ಯಕ್ರಮ ಆಯೋಜಕರು.

‘ಮಂಟಪವು 80X60 ಅಡಿ ವಿಸ್ತೀರ್ಣ ಹೊಂದಿದ್ದು, 100 ಕಲಾವಿದರ 90 ದಿನಗಳ ನಿರಂತರ ಶ್ರಮದಿಂದ ನಿರ್ಮಾಣವಾಗಿದೆ. ಈ ಮೈದಾನದಲ್ಲಿ ಮಂಟಪವನ್ನು ನೆಲೆಗೊಳಿಸಲು 10 ದಿನಗಳು ಹಿಡಿಯಿತು’ ಎಂದು ಮಂಟಪದ ವಿನ್ಯಾಸಕ, ಕಲಾ ನಿರ್ದೇಶಕ ಬಿ. ವಿಠ್ಠಲ್‌ ತಿಳಿಸಿದರು.

ಉತ್ಸವಕ್ಕೆ ಸಾಂಸ್ಕೃತಿಕ ಮೆರಗು ತರುವ ಉದ್ದೇಶದಿಂದ ವಿಶ್ವದ ಶ್ರೇಷ್ಠ ಸಂಗೀತಗಾರರು ಮತ್ತು ಸ್ಥಳೀಯ ಜನಪದ ಕಲಾವಿದರ ಕಲಾ ಪ್ರದರ್ಶನ ಏರ್ಪಡಿಸಿದ್ದಾರೆ. ಸೆಪ್ಟೆಂಬರ್ 4ರವರೆಗೆ ಪ್ರತಿದಿನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಗೀತ, ನೃತ್ಯ ಪ್ರಿಯರಿಗೆ ಮುಕ್ತ ಅವಕಾಶವಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT