ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನದಿಪಾತ್ರದಲ್ಲಿ ಬೀಜದುಂಡೆಗಳ ಬಿತ್ತನೆ

Last Updated 3 ಸೆಪ್ಟೆಂಬರ್ 2017, 8:20 IST
ಅಕ್ಷರ ಗಾತ್ರ

ಕುಶಾಲನಗರ: ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಮತ್ತು ಅರಣ್ಯ ಇಲಾಖೆ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿ ಆಶ್ರಯದಲ್ಲಿ ಹಸಿರು ಕರ್ನಾಟಕ ಅಭಿಯಾನದಡಿ ಇಲ್ಲಿ ಕಾವೇರಿ ನದಿಪಾತ್ರದಲ್ಲಿ ಶನಿವಾರ ಅರಣ್ಯ ಸಸಿಗಳ ಬೀಜದುಂಡೆಗಳ ಬಿತ್ತನೆ ಅಭಿಯಾನ ನಡೆಯಿತು.

ವಿವಿಧ ಜಾತಿ ಮರಗಳ 100 ಬೀಜದ ಉಂಡೆಗಳನ್ನು ಸ್ವಯಂ ಸೇವಕರು ಬಿತ್ತನೆ ಮಾಡಿ, ‘ನಿೀರಿಗಾಗಿ -ಗಿಡನೆಟ್ಟು ಅರಣ್ಯಬೆಳೆಸೋಣ’ಎಂದು ಜಾಗೃತಿ ಮೂಡಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಪ್ರಮೋದ್ ಮುತ್ತಪ್ಪ, ಬೇವಿನ ಸಸಿನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಯೋಜಕ ಟಿ.ಜಿ.ಪ್ರೇಮಕುಮಾರ್, ನದಿಪಾತ್ರದಲ್ಲಿ ಬೀಜದುಂಡೆಗಳ ಬಿತ್ತನೆ ಮೂಲಕ ಗಿಡಗಳನ್ನು ನೆಟ್ಟು ಬೆಳೆಸಬೇಕು. ಇದರಿಂದ ಅಂತರ್ಜಲ ವೃದ್ಧಿಯಾಗಲಿದೆ ಎಂದು ಹೇಳಿದರು.

ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಫಿಲಿಪ್‌ ವ್ಯಾಸ್‌ ಅವರು, ಸಂಘಟಿತರಾಗಿ ಅರಣ್ಯ, ವನ್ಯಜೀವಿ ಹಾಗೂ ನೀರಿನ ರಕ್ಷಣೆಗೆ ಜನಾಂದೋಲನ ರೂಪಿಸಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಪ.ಪಂ.ಮುಖ್ಯಾಧಿಕಾರಿ ಶ್ರೀಧರ್, ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಇ.ಮೊಹಿದ್ದೀನ್, ನೆಲ್ಯಹುದಿಕೇರಿ ಪಿಯೂ ಕಾಲೇಜಿನ ಪ್ರಾಂಶುಪಾಲ ಕೆಂಚಪ್ಪ, ಉಪನ್ಯಾಸಕರಾದ ಎಚ್.ಎಸ್.ಗುರುಸ್ವಾಮಿ, ಹಂಡ್ರಂಗಿ ನಾಗರಾಜ್, ಉಪ ಅರಣ್ಯ ವಲಯಾಧಿಕಾರಿ ಸುಬ್ರಹ್ಮಣ್ಯ, ಅರಣ್ಯ ರಕ್ಷಕ ಮಂಜೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT