ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕ ಪದ್ಧತಿ, ಹೆಚ್ಚಿನ ಇಳುವರಿಗೆ ಸಲಹೆ

Last Updated 4 ಸೆಪ್ಟೆಂಬರ್ 2017, 10:03 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ಮಲ್ಲೋಹಳ್ಳಿ ರೈ ತಾಂತ್ರಿಕ ವಿಶ್ವವಿದ್ಯಾನಿಲಯದ ಬಿ.ಎಸ್ಸಿ (ಕೃಷಿ) ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ತಾಲ್ಲೂಕಿನ ರಾಮೇಶ್ವರದಲ್ಲಿ ಗ್ರಾಮಾಂತರ ಅನುಭವ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಗ್ರಾಮೀಣ ಭಾಗದ ರೈತರ ವ್ಯವಸಾಯ ಪದ್ಧತಿಗಳನ್ನು ತಿಳಿಯುವ ಹಾಗೂ ಆಧುನಿಕ ವಿಧಾನಗಳನ್ನು ರೈತರಿಗೆ ತಿಳಿಸುವ ಕೆಲಸವನ್ನು ರೈ ಸಂಸ್ಥೆಯ ವಿದ್ಯಾರ್ಥಿಗಳು ಕೈಗೊಂಡಿದ್ದಾರೆ. ಈ ಕಾರ್ಯಾಗಾರದಲ್ಲಿ ರೈತರಿಗೆ ಅನುಕೂಲವಾಗುವ ಸಾಕಷ್ಟು ಪ್ರಯೋಗಗಳನ್ನು ಮಾಡಿ, ಸಾಕಷ್ಟು ಉಪಯುಕ್ತ ವಿಧಾನಗಳನ್ನು ರೈತರಿಗೆ ತಿಳಿಸುವ ಕೆಲಸವಾಗುತ್ತಿದೆ ಎಂದು ಸಂಸ್ಥೆಯ ಉಪನ್ಯಾಸಕರು ತಿಳಿಸಿದರು.

ಆ ಮೂಲಕ ಗ್ರಾಮಾಂತರ ಭಾಗದ ರೈತರ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗಿದೆ. ಈ ವಿಧಾನಗಳಿಂದ ರೈತರ ಮನೆಗಳಲ್ಲಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು, ಆರ್ಥಿಕವಾಗಿ ಸದೃಢವಾಗುವಂತ ಅವಕಾಶವನ್ನು ಸೃಷ್ಟಿಸಬಹುದಾಗಿದೆ ಎಂದರು.

ಹೈನುಗಾರಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ರೈತರಿಗೆ ಹಸುಗಳ ಆರೈಕೆ ಅತ್ಯಂತ ಪ್ರಮುಖವಾಗಿರುತ್ತವೆ. ಹಸುಗಳ ಪಾಲನೆ ಸರಿಯಾಗಿಲ್ಲದಿದ್ದರೆ ಹಸುವಿನಿಂದ ಲಭಿಸುವ ಹಾಲಿನ ಪ್ರಮಾಣದಲ್ಲಿ ಇಳಿಕೆಯಾಗಬಹುದು ಎಂದರು.

ಹಸುಗಳಿಗೆ ರಾಸಾಯನಿಕ ಅಥವಾ ವಿದೇಶಿ ಔಷಧಿಗಳನ್ನು ನೀಡುವ ಬದಲಾಗಿ ರೈತರು ತಾವೇ ಔಷಧವನ್ನು ತಯಾರಿಸಿಕೊಳ್ಳಬಹುದಾಗಿದೆ. ಮುಖ್ಯವಾಗಿ ಅಜೊಲ್ಲಾ ಉತ್ಪಾದನೆ ಲಾಭದಾಯಕವಾಗಿದ್ದು, ಅಜೊಲ್ಲಾ ಹಸಿರು ಎಲೆ ಪದಾರ್ಥವನ್ನು ಮೀನು, ಮೇಕೆ, ಕುರಿ, ಕೋಳಿಗಳಿಗೆ ಇದನ್ನು ನೀಡಬಹುದು ಎಂದು ಕೃಷಿ ಬಿಎಸ್ಸಿ ವಿದ್ಯಾರ್ಥಿಗಳಾದ ಎಂ.ಎಸ್‌. ನವ್ಯಶ್ರೀ, ಎನ್‌. ನಂದಿನಿ ಹೇಳಿದರು.

ವ್ಯವಸಾಯಕ್ಕೆಂದು ಕುಂಟೆಗಳನ್ನು ನಿರ್ಮಾಣ ಮಾಡಿಕೊಳ್ಳುವುದು ಸಾಮಾನ್ಯ. ಅದಕ್ಕೆಂದು ಸರ್ಕಾರ ಇದೀಗ ಕೃಷಿ ಹೊಂಡ ನಿರ್ಮಾಣಕ್ಕೂ ಸಹ ಸಾಕಷ್ಟು ಸಹಕಾರ ನೀಡುತ್ತಿದೆ. ಇಂತಹ ಕೃಷಿ ಹೊಂಡಗಳನ್ನು ಅಥವಾ ಸಾಮಾನ್ಯ ಕುಂಟೆಗಳನ್ನು ನಿರ್ಮಿಸಿಕೊಂಡಿರುವ ರೈತರು ಅದರ ಜೊತೆಗೆ ಸ್ವಲ್ಪ ಆಧುನಿಕತೆಯನ್ನು ಅಳವಡಿಸಿಕೊಂಡರೆ ಆರ್ಥಿಕವಾಗಿ ಹೆಚ್ಚು ಉಪಯೋಗವಾಗುತ್ತದೆ.

ಕೃಷಿಯೊಂದಿಗೆ ಕೋಳಿ ಸಾಕಾಣಿಕೆಯನ್ನು ಮಾಡಿ, ಕೋಳಿಗಳಿಂದ ಲಭ್ಯವಾಗುವ ಹಿಕ್ಕೆಯನ್ನು ಕುಂಟೆಯ ನೀರಿಗೆ ಬೆರೆಸಬೇಕು. ಆ ನೀರಿನಲ್ಲಿ ಮೀನುಗಳ ಸಾಕಾಣಿಕೆಯನ್ನು ಮಾಡಬಹುದು.

ಕೋಳಿ ಹಿಕ್ಕೆಯು ಮೀನುಗಳಿಗೆ ಆಹಾರವಾಗುವುದರಿಂದ ಮೀನು ಸಾಕಾಣಿಕೆಯಲ್ಲಿಯೂ ಸಹ ಲಾಭ ಪಡೆಯಬಹುದು. ಆ ಕುಂಟೆಯ ನೀರನ್ನು ಕೃಷಿಗೆ ಬಳಸಿದರೆ ಹೆಚ್ಚಿನ ಇಳುವರಿ ಲಭಿಸುತ್ತದೆ ಎಂದು ಪ್ರಯೋಗಗಳು ತಿಳಿಸುತ್ತವೆ.

ರೈ ತಾತ್ರಿಕ ವಿಶ್ವ ವಿದ್ಯಾಲಯದ ಡೀನ್‌ ಡಾ.ರಾಮಸ್ವಾಮಿ, ಕೀಟ ಶಾಸ್ತ್ರದ ವಿಜ್ಞಾನಿ ಡಾ.ಶಿವರಾಂ, ರಾಮೇಶ್ವರ ಗ್ರಾಮದ ಮುಖಂಡ ಆರ್‌.ಎಂ.ವೆಂಕಟರಮಯ್ಯ, ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT