ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣವೇ ಶಕ್ತಿ, ಶಿಕ್ಷಣವೇ ಆಸ್ತಿ

Last Updated 6 ಸೆಪ್ಟೆಂಬರ್ 2017, 7:03 IST
ಅಕ್ಷರ ಗಾತ್ರ

ಕುಣಿಗಲ್: ‘ದೇಶದ ಸತ್ ಪ್ರಜೆಗಳನ್ನು ನಿರ್ಮಾಣ ಮಾಡುವ ಕಾಯಕ ಮಾಡುತ್ತಿರುವ ಶಿಕ್ಷಕರು ತಮ್ಮ ವೃತ್ತಿ ಪಾವಿತ್ರತೆಗೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಬೇಕಾಗಿದೆ’ ಎಂದು ಶಾಸಕ ಡಿ.ನಾಗರಾಜಯ್ಯ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 130 ಜನ್ಮದಿನಾಚರಣೆ, ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಗುಣ ಮಟ್ಟದ ಶಿಕ್ಷಣಕ್ಕೆ ಮಾದರಿಯಾಗಿರುವ ಸರ್ಕಾರಿ ಶಾಲೆಗಳ ದಾಖಲಾತಿ ಕಡಿಮೆಯಾಗುತ್ತಿದೆ. ಪೋಷಕರ ಪ್ರತಿಷ್ಠೆ ಒಂದು ಕಾರಣವಾದರೆ ಶಿಕ್ಷಕರ ಬದ್ಧತೆಯ ಕೊರತೆ ಮತ್ತೊಂದು ಕಾರಣವಾಗಿದೆ. ಶಿಕ್ಷಕರ ವರ್ಗ ಎಚ್ಚೆತ್ತು ಕಾರ್ಯನಿರ್ವಹಿಸದಿದ್ದರೆ ಗುರುವಿನ ಮೇಲಿನ ಭಯ, ಭಕ್ತಿ, ನಿಷ್ಠೆ ಮತ್ತು ಗೌರವಗಳು ಕಡಿಮೆಯಾಗಿ ಪವಿತ್ರವಾದ ವೃತ್ತಿಯ ಘನತೆಗೆ ಕುಂದುಂಟಾಗುತ್ತದೆ’ ಎಂದರು.

ಸಾಹಿತಿ ಬಿ.ಆರ್.ಲಕ್ಮಣರಾವ್ ಪ್ರಧಾನ ಭಾಷಣ ಮಾಡಿದರು. ಕಳೆದ ಸಾಲಿನಲ್ಲಿ ನಿವೃತ್ತರಾದ 35 ಶಿಕ್ಷಕರನ್ನು ಸನ್ಮಾನಿಸಲಾಯಿತು. ಅಕ್ಷರದಾಸೋಹ ಅಧಿಕಾರಿ ಡಿ.ಕೃಷ್ಣ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಶಿವಕುಮಾರ್, ಅಧ್ಯಕ್ಷ ಗೋಪಾಲ್, ಪದಾಧಿಕಾರಿಗಳಾದ ಎಚ್.ಬಿ.ರವಿಕುಮಾರ್, ರಮೇಶ್, ರವಿಕುಮಾರ್, ಕಾಳೇಗೌಡ, ಫ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಮಮತಾ ಮಣಿ, ಕಾರ್ಯದರ್ಶಿ ನರಸಿಂಹಮೂರ್ತಿ, ವಿದ್ಯಾ ಇಲಾಖೆ ನೌಕರರ ಸಂಘದ ಅಧ್ಯಕ್ಷ ಬೋರೇಗೌಡ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣಪ್ಪ ಇದ್ದರು.

ದೂರ ಉಳಿದರು: ತಾಲ್ಲೂಕಿನ 11 ಅನುದಾನಿತ ಫ್ರೌಢಶಾಲೆಯ 75 ಶಿಕ್ಷಕರು ಕಳೆದ ಮೂರು ತಿಂಗಳಿಂದ ವೇತನ ಮಂಜೂರು ಮಾಡದ ಕಾರಣ ಬೇಸತ್ತು ಶಿಕ್ಷಕರ ದಿನಾಚರಣೆಯಿಂದ ದೂರ ಉಳಿದರು.

‘ವೇತನ ಮಣಜೂರು ಮಾಡುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಜಿಲ್ಲಾ ಉಪನಿರ್ದೇಶಕರಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ವೇತನ ದೊರೆಯದೆ ಸಂಸಾರ ನಿರ್ವಹಣೆ ಮಾಡಲು ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ ವಾಗುತ್ತದೆ’ ಎಂದು ಶಿಕ್ಷಕರು ತಿಳಿಸಿದ್ದಾರ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT