ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದ ದಾಖಲೆ ಮಳೆ

Last Updated 10 ಸೆಪ್ಟೆಂಬರ್ 2017, 9:11 IST
ಅಕ್ಷರ ಗಾತ್ರ

ಹರಪನಹಳ್ಳಿ: ಶುಕ್ರವಾರ ರಾತ್ರಿ ಎರಡು ಗಂಟೆಗಳ ಕಾಲ ಸುರಿದ ಕುಂಭದ್ರೋಣ ಮಳೆಗೆ ಸರ್ಕಾರಿ ಗ್ರಂಥಾಲಯ ಕಟ್ಟಡ ಜಲಾವೃತಗೊಂಡಿದೆ. ಓದುಗರು ಗ್ರಂಥಾಲಯ ಕಟ್ಟಡಕ್ಕೆ ಹೋಗಲು ಸಾಧ್ಯವಾಗದೆ ಮನೆಗೆ ಮರಳಿದರು. ಮಿನಿ ವಿಧಾನಸೌಧ ಆವರಣದಲ್ಲಿರುವ ಹೊಂಡ ಕೂಡ ಭರ್ತಿಯಾಗಿದೆ.

ಚರಂಡಿಗಳು ಉಕ್ಕಿ ಹರಿದಿದ್ದು ಸ್ವಚ್ಛಗೊಂಡಿವೆ. ಐಯ್ಯನ ಕೆರೆ ಭರ್ತಿಯಾಗಿದ್ದು, ಕೋಡಿ ಬೀಳುವ ಹಂತ ತಲುಪಿದೆ. ಹರಪನಹಳ್ಳಿ ಪಟ್ಟಣದಲ್ಲಿ 129.2ಮಿ.ಮೀ. ದಾಖಲೆ ಮಳೆಯಾಗಿದೆ.

ಚಿಗಟೇರಿ ಹೋಬಳಿಯಲ್ಲಿ 5ಮಿ.ಮೀ ತೆಲಿಗಿ.19.4, ಉಚ್ಚಂಗಿದುರ್ಗ 6.6 ಮಿ.ಮೀ, ಹಲವಾಗಲು 5.2ಮೀ.ಮೀ ಮಳೆಯಾಗಿದ್ದು ಯಾವುದೆ ಜೀವ ಹಾನಿ ಸಂಭವಿಸಿಲ್ಲ ಎಂದು ತಹಶೀಲ್ದಾರ್‌ ಕೆ.ಗುರುಬಸವರಾಜ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT