ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ರೋಚಕ ಹೋರಾಟ

ನಿತ್ಯಶ್ರೀಗೆ ಸಬ್‌ ಜೂನಿಯರ್‌ ಪ್ರಶಸ್ತಿ

ಆರಂಭದ ಮೊದಲ ಮೂರು ಸೆಟ್‌ಗಳಲ್ಲಿ ಹಿನ್ನಡೆಯಲ್ಲಿದ್ದ ತಮಿಳುನಾಡಿನ ನಿತ್ಯಶ್ರೀ ಮಣಿ ಇನ್ನೇನು ಸೋಲು ಖಚಿತವೆಂದುಕೊಂಡಿದ್ದರು. ಆದರೆ ಕೊನೆಯ ನಾಲ್ಕು ಸೆಟ್‌ಗಳಲ್ಲಿ ಆಕ್ರಮಣಕಾರಿ ಆಟವಾಡಿದ ಅವರು ರಾಷ್ಟ್ರೀಯ (ದಕ್ಷಿಣ ವಲಯ) ಟೇಬಲ್‌ ಟೆನಿಸ್ ಚಾಂಪಿಯನ್‌ಷಿಪ್‌ನ ಸಬ್‌ ಜೂನಿಯರ್‌ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.

ಧಾರವಾಡದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ (ದಕ್ಷಿಣ ವಲಯ) ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಬಾಲಕಿಯರ ಸಬ್‌ ಜೂನಿಯರ್‌ ವಿಭಾಗದಲ್ಲಿ ರೋಚಕ ಗೆಲುವು ಪಡೆದ ಬಳಿಕ ಭಾವುಕರಾಗಿ ಕಣ್ಣೀರು ಸುರಿಸಿದ ತಮಿಳುನಾಡಿನ ನಿತ್ಯಶ್ರೀ ಮಣಿ

ಧಾರವಾಡ: ಆರಂಭದ ಮೊದಲ ಮೂರು ಸೆಟ್‌ಗಳಲ್ಲಿ ಹಿನ್ನಡೆಯಲ್ಲಿದ್ದ ತಮಿಳುನಾಡಿನ ನಿತ್ಯಶ್ರೀ ಮಣಿ ಇನ್ನೇನು ಸೋಲು ಖಚಿತವೆಂದುಕೊಂಡಿದ್ದರು. ಆದರೆ ಕೊನೆಯ ನಾಲ್ಕು ಸೆಟ್‌ಗಳಲ್ಲಿ ಆಕ್ರಮಣಕಾರಿ ಆಟವಾಡಿದ ಅವರು ರಾಷ್ಟ್ರೀಯ (ದಕ್ಷಿಣ ವಲಯ) ಟೇಬಲ್‌ ಟೆನಿಸ್ ಚಾಂಪಿಯನ್‌ಷಿಪ್‌ನ ಸಬ್‌ ಜೂನಿಯರ್‌ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.

ಧಾರವಾಡ ಜಿಲ್ಲಾ ಟೇಬಲ್‌ ಟೆನಿಸ್‌ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿನ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಏಳು ದಿನ ಟೂರ್ನಿ ನಡೆಯಿತು. ಟೂರ್ನಿಯಲ್ಲಿ ಪ್ರೇಕ್ಷಕರನ್ನು ಹೆಚ್ಚು ಸೆಳೆದ ಪಂದ್ಯ ಇದಾಗಿತ್ತು. ಮಂಗಳವಾರ ನಡೆದ ಫೈನಲ್‌ನಲ್ಲಿ ನಿತ್ಯಶ್ರೀ 4–11, 2–11, 8–11, 12–10, 11–8, 12–10, 15–13ರಲ್ಲಿ ಪಶ್ಚಿಮ ಬಂಗಾಳದ ಮನ್ಮನ್‌ ಕುಂದು ಎದುರು ಗೆಲುವು ಪಡೆದರು.

ಇಂದೋರ್‌ನಲ್ಲಿ ನಡೆದಿದ್ದ ಕೇಂದ್ರ ವಲಯದ ಟೂರ್ನಿಯಲ್ಲಿ ನಿತ್ಯಶ್ರೀ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿದ್ದರು. ಹಿಂದಿನ ಯಾವ ರಾಷ್ಟ್ರೀಯ ಟೂರ್ನಿಯಲ್ಲಿ ಫೈನಲ್‌ ತಲುಪಿರಲಿಲ್ಲ. ಅವರ ಚೊಚ್ಚಲ ಪ್ರಶಸ್ತಿಯ ಕನಸು ಧಾರವಾಡದಲ್ಲಿ ಈಡೇರಿತು.

‘ಮೊದಲ ಮೂರೂ ಸೆಟ್‌ಗಳಲ್ಲಿ ಹಿನ್ನಡೆಯಲ್ಲಿದ್ದರಿಂದ ಸೋಲು ಖಚಿತ ಅಂದುಕೊಂಡಿದ್ದೆ. ಆದ್ದರಿಂದ ಸೋತರೂ ಚಿಂತೆಯಿಲ್ಲ, ಅಂತಿಮ ಪಾಯಿಂಟ್‌ವರೆಗೂ ಹೋರಾಡಬೇಕು ಎಂದು ನಿರ್ಧರಿಸಿದ್ದೆ. ಎದುರಾಳಿ ಆಟಗಾರ್ತಿ ಪ್ರತಿ ಪಾಯಿಂಟ್‌ ಪಡೆದಾಗಲೂ ಆಕ್ರಮಣಕಾರಿಯಾಗುತ್ತಿದ್ದಳು. ಅದಕ್ಕೆ ರ್‍ಯಾಕೆಟ್‌ ಮೂಲಕವೇ ಉತ್ತರ ನೀಡಿದೆ’ ಎಂದರು.

ಕುತೂಹಲದ ಹೋರಾಟ: ಆರು ಸೆಟ್‌ಗಳು ಮುಗಿದಾಗ ಇಬ್ಬರೂ ತಲಾ ಮೂರು ಸೆಟ್‌ ಜಯಿಸಿದ್ದರು. ಆದ್ದರಿಂದ ಕೊನೆಯ ಸೆಟ್‌ ನಿರ್ಣಾಯಕವಾಗಿತ್ತು.

ಮನ್ಮನ್‌ ಕೊನೆಯ ಸೆಟ್‌ನ ಆರಂಭದಲ್ಲಿ 2–1 ಪಾಯಿಂಟ್ಸ್‌ನಿಂದ ಮುನ್ನಡೆಯಲ್ಲಿದ್ದರು. ನಂತರ 4–4 ಸಮಬಲವಾಯಿತು. ಕೆಲವೇ ನಿಮಿಷಗಳಲ್ಲಿ ಅವರು 8–4ರಲ್ಲಿ ಮುನ್ನಡೆ ಪಡೆದರು. ಆಗ ತಿರುಗೇಟು ನೀಡಿದ ನಿತ್ಯಶ್ರೀ ಸತತ ನಾಲ್ಕು ಪಾಯಿಂಟ್ಸ್ ಗಳಿಸಿ ಸಮಬಲ ಸಾಧಿಸಿದರು. ತಮಿಳುನಾಡಿನ ಆಟಗಾರ್ತಿ ಮತ್ತೆ ಎರಡು ಪಾಯಿಂಟ್ಸ್‌ ಗಳಿಸಿದ್ದರಿಂದ ಪಂದ್ಯ ಗೆಲ್ಲಲು ಒಂದು ಪಾಯಿಂಟ್ಸ್‌ ಮಾತ್ರ ಅಗತ್ಯವಿತ್ತು. ಮರು ಹೋರಾಟ ತೋರಿದ ಮನ್ಮನ್‌ 10–10, 12–12, 13–13 ಪಾಯಿಂಟ್ಸ್‌ನಿಂದ ಸಮಬಲ ಸಾಧಿಸಿದರು. ಕೊನೆಯಲ್ಲಿ ಸತತ ಎರಡು ಪಾಯಿಂಟ್ಸ್ ಗಳಿಸಿದ ನಿತ್ಯಶ್ರೀ ರೋಚಕ ಗೆಲುವು ಪಡೆದು ಭಾವುಕರಾಗಿ ಕಣ್ಣೀರು ಸುರಿಸಿದರು.

ಸಬ್‌ ಜೂನಿಯರ್‌ನ ಬಾಲಕರ ವಿಭಾಗದ ಫೈನಲ್‌ನಲ್ಲಿ ಪಿಎಸ್‌ಪಿಬಿಯ ಎಚ್‌. ಜೆಹೊ 9–11, 11–9, 9–11, 11–9, 9–11, 11–8, 11–4ರಲ್ಲಿ ದೆಹಲಿಯ ಪಾಯಸ್‌ ಜೈನ್‌ ಎದುರು ಗೆಲುವು ಸಾಧಿಸಿದರು.

ಕೆಡೆಟ್‌ ಬಾಲಕರ ಸಿಂಗಲ್ಸ್‌ನಲ್ಲಿ ತಮಿಳುನಾಡಿನ ಎಸ್‌. ಪ್ರಿಯೇಶ್‌ ರಾಜ್‌ 11–4, 9–11, 11–6, 11–2, 11–5ರಲ್ಲಿ ಗೋವಾದ ಎಂ. ಶಾಂತೇಶ್‌ ಮೇಲೂ, ಬಾಲಕಿಯರ ವಿಭಾಗದಲ್ಲಿ ಹರಿಯಾಣದ ಸುಹಾನಾ ಸೈನಿ 11–5, 11–6, 11–1, 11–8ರಲ್ಲಿ ತಮಿಳುನಾಡಿನ ನೇಹಲ್‌ ವೆಂಕಟಸ್ವಾಮಿ ವಿರುದ್ಧವೂ ಗೆಲುವು ಸಾಧಿಸಿ ಪ್ರಶಸ್ತಿ ಪಡೆದರು.

Comments
ಈ ವಿಭಾಗದಿಂದ ಇನ್ನಷ್ಟು

ಬೆಂಗಳೂರು
‘ಯುವ ಆಟಗಾರರಿಗೆ ಸಂತೋಷ್‌ ಟ್ರೋಫಿ ಉತ್ತಮ ವೇದಿಕೆ’

‘ತಮ್ಮೊಳಗಿನ ಪ್ರತಿಭೆಯನ್ನು ಸಾಬೀತು ಮಾಡಲು ಯುವ ಆಟಗಾರರಿಗೆ ಸಂತೋಷ್‌ ಟ್ರೋಫಿ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ಉತ್ತಮ ವೇದಿಕೆ’ ಎಂದು ಭಾರತ ತಂಡದ ನಾಯಕ ಸುನಿಲ್‌ ಚೆಟ್ರಿ...

17 Jan, 2018
ಪವನ್, ಸುಜಲ್ ನಾಲ್ಕನೇ ಸುತ್ತಿಗೆ

ಕ್ರೀಡೆ
ಪವನ್, ಸುಜಲ್ ನಾಲ್ಕನೇ ಸುತ್ತಿಗೆ

17 Jan, 2018

ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ
ಫೆಡರರ್‌, ನೊವಾಕ್‌ ಶುಭಾರಂಭ

ಹಾಲಿ ಚಾಂಪಿ ಯನ್‌ ರೋಜರ್‌ ಫೆಡರರ್‌ ಮತ್ತು ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಗೆಲುವಿನ ಮುನ್ನುಡಿ ಬರೆದಿದ್ದಾರೆ.

17 Jan, 2018
ಅರ್ಹತಾ ಸುತ್ತಿನಲ್ಲಿ ಸೋತ ಕಶ್ಯಪ್‌

ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ
ಅರ್ಹತಾ ಸುತ್ತಿನಲ್ಲಿ ಸೋತ ಕಶ್ಯಪ್‌

17 Jan, 2018

ಬೆಂಗಳೂರು
ಕ್ರಿಕೆಟ್: ಫೈನಲ್‌ಗೆ ಸೇಂಟ್ ಪಾಲ್ಸ್ ಶಾಲೆ

ರಿಶಿಲ್‌ (105) ಅವರ ಶತಕದ ನೆರವಿನಿಂದ ಸೇಂಟ್ ಪಾಲ್ಸ್ ಇಂಗ್ಲಿಷ್ ಶಾಲೆ ತಂಡ ಬಿಟಿಆರ್ ಕಪ್‌ಗಾಗಿ ಇಲ್ಲಿ ನಡೆಯುತ್ತಿರುವ 14 ವರ್ಷದೊಳಗಿನವರ ಗುಂಪು1ರ ಕೆಎಸ್‌ಸಿಎ...

17 Jan, 2018