ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಟಿಯಾಗೊ ವಿಝ್ ಲಿಮಿಟೆಡ್ ಎಡಿಷನ್ ಬಿಡುಗಡೆ

Last Updated 13 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಟಾಟಾ ಕಂಪೆನಿ ಇದೀಗ ಟಾಟಾ ಟಿಯಾಗೊ ವಿಝ್ ಲಿಮಿಟೆಡ್ ಎಡಿಷನ್ ಬಿಡುಗಡೆಯ ಸಿದ್ಧತೆಯಲ್ಲಿದೆ. ಇದೇ ತಿಂಗಳಿನಲ್ಲಿ ಹೊರಬರುವ ಎಲ್ಲಾ ಸೂಚನೆಯನ್ನೂ ನೀಡಿದೆ.

ಕಾರಿನ ಒಳಾಂಗಣ, ಹೊರಾಂಗಣ ಎರಡನ್ನೂ ಪರಿಷ್ಕೃತಗೊಳಿಸಲಾಗಿದೆ. ಎಕ್ಸ್‌ಟಿ ಟ್ರಿಮ್ ಆಧಾರದ ಮೇಲೆ ರೂಪಿತಗೊಂಡಿರುವ ಈ ಕಾರು ಬೆರ್ರಿ ರೆಡ್ ಹಾಗೂ ಪರ್ಲ್‌ಸೆಂಟ್ ವೈಟ್ ಎರಡು ಬಣ್ಣಗಳಲ್ಲಿ ಲಭ್ಯ.

ಬ್ಲಾಕ್‌ ರೂಫ್, ರಿಯರ್ ವ್ಯೂ ಮಿರರ್‌, ರೂಫ್ ರೇಲ್‌ಗಳು, ಚಕ್ರಗಳಿಗೆ ಕೆಂಪು ಅಕ್ಸೆಂಟ್‌ಗಳು, ಗ್ರಿಲ್ ಮತ್ತು ಎ.ಸಿ.ವೆಂಟ್‌ಗಳಿಗೆ ರೆಡ್‌ ಹೈಲೈಟ್‌ಗಳಿವೆ. ಎಕ್ಸ್‌ಟಿ ಟ್ರಿಮ್‌ನ ಕೆಲವು ಲಕ್ಷಣಗಳನ್ನೇ ಈ ಕಾರೂ ಹೋಲುತ್ತದೆ.

ತಾಂತ್ರಿಕತೆಯಲ್ಲಿ ಹೆಚ್ಚೇನೂ ಬದಲಾವಣೆಗಳಾಗಿಲ್ಲ. ಹರ್ಮಾನ್ ಇನ್ಫೊಟೇನ್ಮೆಂಟ್ ಸಿಸ್ಟಂ, ನೇವಿಗೇಷನ್ ಸಿಸ್ಟಂ, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಇವೆ.

1.2 ಲೀಟರಿನ ರೆವಟ್ರಾನ್ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ರೆವಟಾರ್ಕ್ ಡೀಸೆಲ್ ಎಂಜಿನ್ ಇದ್ದು, ಪೆಟ್ರೋಲ್ ಎಂಜಿನ್ 84ಬಿಎಚ್‌ಪಿ ಹಾಗೂ 114 ಎನ್‌ ಎಂ ಟಾರ್ಕ್ ಶಕ್ತಿ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ 69 ಬಿಎಚ್‌ಪಿ ಹಾಗೂ 140 ಎನ್ ಎಂ ಟಾರ್ಕ್
ಶಕ್ತಿ ಉತ್ಪಾದಿಸುತ್ತದೆ. ಎಕೊ ಹಾಗೂ ಸಿಟಿ ಮಲ್ಟಿ ಡ್ರೈವ್ ಮೋಡ್‌ಗಳೊಂದಿಗೆ ಸ್ಪೀಡ್ ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್ ಇರಲಿದೆ. ಬೆಲೆ ಕುರಿತು ಮಾಹಿತಿ ಲಭ್ಯವಾಗಿಲ್ಲ.

*


ಹೊಸ ಶೈಲಿಯ ಟಿವಿಎಸ್ ಸಿಟಿ+
ಸರಣಿ ಹಬ್ಬಗಳ ಸಮಯ ಹತ್ತಿರವಾಗುತ್ತಿದೆ. ಅದಕ್ಕೆಂದೇ ಟಿವಿಎಸ್ ಕೂಡ ಸಿದ್ಧತೆ ನಡೆಸಿದೆ. ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಬೈಕ್ ಒಂದನ್ನು ಬಿಡುಗಡೆಗೊಳಿಸುವ ಹಾದಿಯಲ್ಲಿದೆ. ಹೊಸ ಡ್ಯುಯಲ್ ಟೋನ್‌ ಶೈಲಿಯ ಟಿವಿಎಸ್ ಸ್ಟಾರ್ ಸಿಟಿ+ ಪರಿಚಯಿಸುವುದಾಗಿ ಘೋಷಿಸಿದೆ.

ಟಿವಿಎಸ್‌ ಸ್ಟಾರ್‌ ಸಿಟಿ 110 ಸಿಸಿ ಮೋಟಾರು ಸೈಕಲ್, ತನ್ನ ಶೈಲಿಯಿಂದಲೇ ಗುರುತಿಸಿಕೊಂಡಿತ್ತು. ಇದೀಗ ಈ ಸ್ಟಾರ್ ಸಿಟಿ ಪ್ಲಸ್ ಮತ್ತಷ್ಟು ವಿನ್ಯಾಸಗಳನ್ನು ಒಳಗೊಂಡು ಟಿವಿಎಸ್‌ ಕ್ರೋಮ್ 3ಡಿ ಲೇಬಲ್‌ನೊಂದಿಗೆ ಕಾಣಿಸಿಕೊಳ್ಳಲಿದೆ.

ಸ್ಟಾರ್ ಸಿಟಿ + ಶೈಲಿಯಲ್ಲಿ ರಾಜಿ ಮಾಡಿಕೊಂಡಿಲ್ಲ. ಶಕ್ತಿ ಹಾಗೂ ಮೈಲೇಜ್ ವಿಷಯದಲ್ಲೂ ಹಿಂದೆ ಬಿದ್ದಿಲ್ಲ. ಇದು 86 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಈ ಡ್ಯುಯಲ್ ಟೋನ್‌ನ ಸ್ಟಾರ್ ಸಿಟಿ + ಈ ಎಲ್ಲಾ ಅಂಶಗಳ ಮಿಶ್ರಣವಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಇದರಲ್ಲಿ 4 ಸ್ಪೀಡ್ ಗಿಯರ್ ಬಾಕ್ಸ್ ‘ಎಕೊಥ್ರಸ್ಟ್’ ಎಂಜಿನ್ ಇದ್ದು, 4 ಸ್ಟ್ರೋಕ್ ಪರ್ಫಾರ್ಮೆನ್ಸ್ ನೀಡುತ್ತದೆ. ಇದು ಸುಲಭ ಚಾಲನೆಗೆ ಅನುವು ಮಾಡಿಕೊಡಲಿದೆ.

ಆಟೊಮೆಟಿಕ್ ಹೆಡ್‌ಲೈಟ್ ಆನ್, ಹನಿಕಾಂಬ್ ಟೆಕ್ಸ್‌ಚರ್‌ನ ಸೈಡ್ ಪ್ಯಾನೆಲ್ ಗ್ರಿಲ್‌ಗಳು, ಕಪ್ಪು ಅಲಾಯ್ ವೀಲ್‌ಗಳು, ಪ್ರೀಮಿಯಂ 3ಡಿ ಎಂಬ್ಲಮ್, ಫ್ಲಾಷ್‌ ಟೇಲ್ ಲ್ಯಾಂಪ್‌ಗಳು ಶೈಲಿಯನ್ನು ಉತ್ಕೃಷ್ಟಗೊಳಿಸಿವೆ.

ಸುರಕ್ಷಿತ ಚಾಲನೆಗೆಂದೇ ಟೆಲಿಸ್ಕೋಪಿಕ್ ಫ್ರಂಟ್ ಶಾಕ್ ಅಬ್ಸರ್ವರ್, 5 ಸ್ಟೆಪ್ ಅಡ್ಜಸ್ಟಬಲ್ ರಿಯರ್ ಶಾಕ್ ಅಬ್ಸರ್ವರ್ ಕೂಡ ಇದೆ. ಹೈ ಗ್ರಿಪ್, ಬಟನ್ ಟೈಪ್, ಟ್ಯೂಬ್‌ಲೆಸ್ ಟೈರ್‌ಗಳು ಬೈಕ್‌ ಜಾರದಂತೆ ತಡೆಯಲಿವೆ. ಡಿಜಿಟಲ್ ಡ್ಯಾಷ್‌ಬೋರ್ಡ್, ಅನಲಾಗ್ ಸ್ಪೀಡೊಮೀಟರ್, ಡಿಜಿಟಲ್ ಫ್ಯುಯೆಲ್ ಗಾಜ್, ಡಿಜಿಟಲ್ ಓಡೋ ಮೀಟರ್‌ಗಳು ಸೌಲಭ್ಯಗಳಿಗೆ ಸೇರ್ಪಡೆ. ಬೆಲೆ ₹ 50, 534 (ಎಕ್ಸ್‌ ಷೋ ರೂಂ ದೆಹಲಿ).

*


ಮೈ ರೆನೊ ಆ್ಯಪ್
ರೆನೊ ಕಂಪೆನಿಯು ತನ್ನ ‘ಮಾರಾಟ ನಂತರದ ಸೇವೆ’ಯ ಭಾಗವಾಗಿ ಗ್ರಾಹಕ ಕೇಂದ್ರಿತ ಆ್ಯಪ್‌ ಒಂದನ್ನು ಪರಿಚಯಿಸಿದೆ.

ಈ ‘ಮೈ ರೆನೊ’ ಮೊಬೈಲ್ ಆ್ಯಪ್‌ ಸುಮಾರು 60 ಹ್ಯಾಂಡಿ ಫೀಚರ್‌ ಗಳನ್ನು ಒಳಗೊಂಡಿದೆ. ಆನ್‌ಲೈನ್ ಸರ್ವೀಸ್ ಅಪಾಯಿಂಟ್‌ಮೆಂಟ್, ಪರ್ಸನಲೈಸ್ಡ್ ರಿಮೈಂಡರ್, ಡಿಜಿಟಲ್ ವಾಲ್ಟ್‌ ಹೀಗೆ ಕೆಲಸಗಳನ್ನು ಸುಲಭಗೊಳಿಸುವ ಸಾಕಷ್ಟು ಅನುಕೂಲಗಳಿವೆ ಎಂದು ಕಂಪೆನಿ ಹೇಳಿಕೊಂಡಿದೆ.

ಆಂಡ್ರಾಯ್ಡ್ ಹಾಗೂ ಐಒಎಸ್ ಪ್ಲಾಟ್‌ಫಾರ್ಮ್‌ನಲ್ಲಿ ಈ ಆ್ಯಪ್ ಕಾರ್ಯನಿರ್ವಹಿಸಲಿದೆ. ಈ ಮೂಲಕ ಇ– ಕಾಮರ್ಸ್‌ ಸೌಲಭ್ಯ ನೀಡಿದ ಮೊದಲ ಆಟೊಮೇಕರ್ ಎಂದೂ ರೆನೊ ಕರೆಸಿಕೊಂಡಿದೆ.

ವಾಹನದ ಸರ್ವೀಸ್ ಹಿನ್ನೆಲೆ, ಪರ್ಸನಲೈಸ್ಡ್ ರಿಮೈಂಡರ್ ಹಾಗೂ ನೋಟಿಫಿಕೇಷನ್, ಆನ್‌ಲೈನ್ ಸರ್ವೀಸ್ ಅಪಾಯಿಂಟ್‌ಮೆಂಟ್‌ಗಳು, ಇಂಟೆರಾಕ್ಟಿವ್ ಯೂಸರ್ ಮಾನ್ಯುಯಲ್, ಡೀಲರ್‌ಶಿಪ್ ಹಾಗೂ ಕಸ್ಟಮರ್ ಕೇರ್‌ ಸುಲಭ ನಿರ್ವಹಣೆ, ರೋಡ್‌ಸೈಡ್ ಅಸಿಸ್ಟನ್ಸ್, ಪೇಮೆಂಟ್ ಗೇಟ್‌ವೇ ಹೀಗೆ ಹಲವು ಸೌಲಭ್ಯಗಳನ್ನು ಆ್ಯಪ್ ಮೂಲಕ ಗ್ರಾಹಕರಿಗೆ ತಲುಪಿಸುವ ಯೋಜನೆ ರೆನೊದ್ದಾಗಿದೆ.

ರೆನೊಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಆ್ಯಪ್ ಮೂಲಕ ಲಭ್ಯ. ‘ರೆನೊ ಕನೆಕ್ಟ್’–ಕಂಪೆನಿಯ ಡೀಲರ್ ಮ್ಯಾನೇಜ್‌ಮೆಂಟ್‌ ಸಿಸ್ಟಂಗೆ ಸಂಪರ್ಕ ಕಲ್ಪಿಸಲಾಗಿದೆ. ಈ ಆ್ಯಪ್‌ಗೆ ಹಣ ತೆರುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT