ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಪ್ರವಾಸಿಗರಿಗೆ ಹೆಲಿಕಾಪ್ಟರ್‌ ಸುತ್ತಾಟ

Last Updated 16 ಸೆಪ್ಟೆಂಬರ್ 2017, 7:28 IST
ಅಕ್ಷರ ಗಾತ್ರ

ಮೈಸೂರು: ದಸರೆಗೆ ಬರುವ ಪ್ರವಾಸಿಗರು ಹೆಲಿಕಾಪ್ಟರ್‌ನಲ್ಲಿ ಮೈಸೂರು ನಗರದ ಸೌಂದರ್ಯ ಸವಿಯಬಹುದಾಗಿದೆ. ‘ಹೆಲಿರೈಡ್ಸ್‌’ ಮತ್ತು ‘ಪ್ಯಾಲೇಸ್‌ ಆನ್‌ ವೀಲ್ಸ್‌’ ಮೂಲಕ ಪ್ರವಾಸಿಗಳನ್ನು ಸೆಳೆಯುವ ಪ್ರಯತ್ನ ನಡೆದಿದೆ.

ಸೆ. 16ರಿಂದ ಅ. 5ರ ವರೆಗೆ ಹೆಲಿಕಾಪ್ಟರ್‌ನಲ್ಲಿ ಸುತ್ತಾಡಬಹುದು. ಇದಕ್ಕಾಗಿ ಎರಡು ಹೆಲಿಕಾಫ್ಟರ್ ತರಿಸಲಾಗಿದ್ದು, ಹತ್ತು ನಿಮಿಷಗಳ ಕಾಲ ಹಾರಾಡುತ್ತ ಪಾರಂಪರಿಕ ನಗರದ ವಿಹಂಗಮ ನೋಟ ಕಣ್ಣುತುಂಬಿಕೊಳ್ಳಬಹುದು. ಒಂದು ರೈಡ್‌ನಲ್ಲಿ 6 ಮಂದಿ ಏಕಕಾಲಕ್ಕೆ ಸಂಚರಿಸಬಹುದು. ತಲಾ ₹ 2,300 ಟಿಕೆಟ್‌ ದರ.

‘ಪ್ಯಾಲೇಸ್‌ ಆನ್‌ ವೀಲ್ಸ್‌’ಗಾಗಿ (ಗಾಲಿಗಳ ಮೇಲೆ ಅರಮನೆ) ಎರಡು ವೋಲ್ವೊ ಬಸ್‌ ಸಿದ್ಧಗೊಂಡಿವೆ. ಇಲ್ಲಿನ ವಿವಿಧ ಅರಮನೆಗಳು, ವಸ್ತುಸಂಗ್ರಹಾಲಯಗಳು, ಪಾರಂಪರಿಕ ಕಟ್ಟಡಗಳು, ಪ್ರಕೃತಿ ಸೌಂದರ್ಯ ಸೇರಿದಂತೆ ನಗರ ಪ್ರದಕ್ಷಿಣೆ ಮಾಡಬಹುದು. ಸೆ. 22ರಿಂದ ಅ. 2ರ ವರೆಗೆ ಈ ಬಸ್‌ಗಳು ಸಂಚರಿಸಲಿದ್ದು, ತಲಾ ₹ 999 ಟಿಕೆಟ್‌ ದರ ಇದೆ.

ಸೆ. 21ರಿಂದ ರಾಜ್ಯಮಟ್ಟದ ದಸರಾ ಕ್ರೀಡಾಕೂಟ, ದೇಹದಾಢ್ಯ ಸ್ಪರ್ಧೆ, 24ರಂದು ಮ್ಯಾರಥಾನ್‌, ಸೈಕ್ಲೊಥಾನ್‌ ನಡೆಯಲಿವೆ. ಸೈಕಲ್‌ ಮೇಲೆ ನಗರ ಸುತ್ತಲು ಬಯಸುವವರಿಗೆ ‘ಟ್ರಿಣ್‌ ಟ್ರಿಣ್‌’ ಸೌಲಭ್ಯವನ್ನೂ ವಿಶೇವಾಗಿ ನೀಡಲಾಗಿದೆ. ಮಾಹಿತಿಗೆ: ಹೆಲಿರೈಡ್ಸ್‌– www.mysoredasara.gov.in ಮೊ. 8375914948, 8828122245.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT