ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಯಾರಿಕಾ ವಲಯದ ಪ್ರಗತಿ ಶೇ 3 ರಷ್ಟು ಇಳಿಕೆ

Last Updated 16 ಸೆಪ್ಟೆಂಬರ್ 2017, 19:04 IST
ಅಕ್ಷರ ಗಾತ್ರ

ನವದೆಹಲಿ: ತಯಾರಿಕಾ ವಲಯದ ಪ್ರಗತಿ ಜುಲೈನಲ್ಲಿ ಶೇ 1.2 ರಷ್ಟಿದೆ. ಕಳೆದ ವರ್ಷ ಇದೇ ತಿಂಗಳಿನಲ್ಲಿ ಇದ್ದ ಶೇ 4.2 ಕ್ಕೆ ಹೋಲಿಸಿದರೆ ಶೇ 3 ರಷ್ಟು ಇಳಿಕೆ ಕಂಡಿದೆ ಎಂದು ಕೇಂದ್ರ ಸಾಂಖಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಮಾಹಿತಿ ನೀಡಿದೆ.

ಕೈಗಾರಿಕಾ ಪ್ರಗತಿ ಸೂಚ್ಯಂಕದ (ಐಐಪಿ) ಆಧಾರದ ಮೇಲೆ ತಯಾರಿಕಾ ವಲಯದ ಪ್ರಗತಿ ಲೆಕ್ಕ ಹಾಕಲಾಗುತ್ತದೆ.

ಬಂಡವಾಳ ಸರಕುಗಳು ವಲಯದ ತಯಾರಿಕೆ ಕಳೆದ ವರ್ಷ ಜುಲೈನಲ್ಲಿ ಶೇ 8.8 ರಷ್ಟಿತ್ತು. ಅದು 2017ರ ಜುಲೈನಲ್ಲಿ ಶೇ 1ಕ್ಕೆ ಕುಸಿದಿದೆ. ಇದರಿಂದಾಗಿ ತಯಾರಿಕಾ ವಲಯದ ಒಟ್ಟಾರೆ ಪ್ರಗತಿ ಕುಂಠಿತವಾಗಿದೆ. ಗ್ರಾಹಕ ಬಳಕೆ ವಸ್ತುಗಳ ತಯಾರಿಕೆಯೂ ಶೇ 1.3 ರಷ್ಟು ಪ್ರಗತಿ ಕಂಡಿದೆ. ಆದರೆ, ಇಂಧನ ವಲಯದ ಪ್ರಗತಿ ಶೇ 2.1 ರಿಂದ ಶೇ 6.5ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT