ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿಪ್ರೀತ್‌ಗಾಗಿ ಭಾರತ–ನೇಪಾಳ ಗಡಿಯಲ್ಲಿ ಹುಡುಕಾಟ

Last Updated 19 ಸೆಪ್ಟೆಂಬರ್ 2017, 13:23 IST
ಅಕ್ಷರ ಗಾತ್ರ

ಲಖನೌ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ನ ದತ್ತು ಪುತ್ರಿ ಎಂದು ಹೇಳಲಾದ ಹನಿಪ್ರೀತ್ ಸಿಂಗ್‌ ಇನ್ಸಾನ್‌ ನೇಪಾಳಲ್ಲಿದ್ದಾಳೆ ಎಂಬ ವರದಿಗಳ ಆಧಾರದಲ್ಲಿ ಭದ್ರತಾ ಪಡೆಗಳು ಭಾರತ–ನೇಪಾಳ ಗಡಿ ಭಾಗದಲ್ಲಿ ತೀವ್ರ ಹುಡುಕಾಟ ಆರಂಭಿಸಿವೆ.

ಉತ್ತರ ಪ್ರದೇಶದ ಗೋರಖಪುರ, ಮಹಾರಾಜ್‌ಗಂಜ್‌ ಸೇರಿದಂತೆ ಇತರ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಗಡಿ ದಾಟುವ ಪ್ರತಿಯೊಂದು ವಾಹನಗಳು ಮತ್ತು ಪ್ರತಿಯೊಬ್ಬರನ್ನು ಭದ್ರತಾ ಸಿಬ್ಬಂದಿ ತಪಾಸಣೆಗೆ ಒಳಪಡಿಸುತ್ತಿದ್ದಾರೆ.

ಡೇರಾದ ಇತರ ಅನುಯಾಯಿಗಳು ಕೂಡ ನೇಪಾಳಕ್ಕೆ ಪಲಾಯಾನ ಮಾಡಲು ಯತ್ನಿಸುವ ಸಾಧ್ಯತೆ ಇದೆ ಎಂದು ಮಹಾರಾಜ್‌ಗಂಜ್‌ ಜಿಲ್ಲೆಯ ಪೊಲೀಸರು ಹೇಳಿದ್ದಾರೆ.

ಹರಿಯಾಣ ಪೊಲೀಸರು ಬಿಡುಗಡೆ ಮಾಡಿರುವ ಕುಖ್ಯಾತ ಆರೋ‍ಪಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಹನಿಪ್ರೀತ್‌ ಸಿಂಗ್‌ ನೇ‍ಪಾಳದಲ್ಲಿ ಇರುವುದು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT