ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

53 ಬೃಹತ್‌ ಕಟ್ಟಡಗಳ ಸಮೀಕ್ಷೆ ಪೂರ್ಣ

Last Updated 19 ಸೆಪ್ಟೆಂಬರ್ 2017, 20:05 IST
ಅಕ್ಷರ ಗಾತ್ರ

ಬೆಂಗಳೂರು: ‘ಪಾಲಿಕೆ ವ್ಯಾಪ್ತಿಯಲ್ಲಿ 53 ಬೃಹತ್‌ ಕಟ್ಟಡಗಳ ಟೋಟಲ್‌ ಸ್ಟೇಷನ್‌ ಸರ್ವೆ ಕಾರ್ಯ ಮುಗಿದಿದೆ’ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ಕೆ.ಗುಣಶೇಖರ್‌ ತಿಳಿಸಿದರು.

‘ಈ ಸರ್ವೆ ಪೂರ್ಣಗೊಳಿಸಿ ವರದಿ ನೀಡಿರುವ ಕಟ್ಟಡಗಳಿಗೆ ವ್ಯತ್ಯಾಸದ ವಿಸ್ತೀರ್ಣಕ್ಕೆ ಆಸ್ತಿ ತೆರಿಗೆ ನಿಗದಿಪಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ, ಕೆಲ ಅಧಿಕಾರಿಗಳ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಸಂಬಂಧ ಪಾಲಿಕೆ ಸಭಾಂಗಣದಲ್ಲಿ ವಲಯ ಜಂಟಿ ಆಯುಕ್ತರೊಂದಿಗೆ ಬುಧವಾರ ಸಭೆ ಕರೆಯಲಾಗಿದೆ. ಸರ್ವೆ ವರದಿಗೂ, ಮಾಲೀಕರು ಘೋಷಣೆ ಮಾಡಿರುವ ಅಳತೆಗೂ ತಾಳೆ ಆಗುತ್ತದೆಯೇ ಎಂಬುದನ್ನು ಪರಿಶೀಲಿಸುತ್ತೇವೆ. ವ್ಯತ್ಯಾಸ ಕಂಡುಬಂದರೆ ಅಂತಹ ಮಾಲೀಕರಿಗೆ ದಂಡ ಹಾಗೂ ತೆರಿಗೆ ವಿಧಿಸುತ್ತೇವೆ. ಆದಾಯ ಸೋರಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT