ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿಗೆ ನಿಮ್ಮದೇ ಸೂತ್ರ: ರಾಜಮೌಳಿ

Last Updated 23 ಸೆಪ್ಟೆಂಬರ್ 2017, 9:18 IST
ಅಕ್ಷರ ಗಾತ್ರ

ಉಡುಪಿ: ‘ಯಶಸ್ಸಿಗೆ ಸಿದ್ಧ ಸೂತ್ರ ಇರು ವುದಿಲ್ಲ, ಪ್ರತಿಯೊಬ್ಬರೂ ತಮ್ಮದೇ ಆದ ಸೂತ್ರವನ್ನು ರೂಪಿಸಿಕೊಳ್ಳಬೇಕು’ ಎಂದು ತೆಲುಗು ಚಲನಚಿತ್ರ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಹೇಳಿದರು.

ಮಣಿಪಾಲ್ ತಾಂತ್ರಿಕ ಸಂಸ್ಥೆಗೆ ಶುಕ್ರವಾರ ಭೇಟಿ ನೀಡಿದ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ದರು. ‘ನನಗೆ ಯಶಸ್ಸು ಹೇಗೆ ಬಂತು ಎಂದು ಯೋಚಿಸಿದರೆ ನೂರಾರು ಕಾರಣಗಳು ಎದುರಿಗೆ ಬರುತ್ತವೆ. ನನಗಿಂತ ಪ್ರತಿಭಾವಂತರು, ಕಠಿಣ ಪರಿ ಶ್ರಮಿಗಳು ಇದ್ದಾರೆ. ಆದರೂ ನಾನು ಒಳ್ಳೆಯ ಅವಕಾಶ ಪಡೆದೆ.

ನೀವು ಸಹ ಎಲ್ಲವನ್ನೂ ಸೂಕ್ಷ್ಮವಾಗಿ ಗಮಿಸಿ, ನಿಮ್ಮದೇ ಒಂದು ಸೂತ್ರ ತಯಾರು ಮಾಡಿ ಅದನ್ನು ಜಾರಿಗೊಳಿಸಿ. ಈಗಿರು ವುದು ‘ಅರ್ಜುನ್ ರೆಡ್ಡಿ’ (ತೆಲುಗಿನಲ್ಲಿ ಭಾರಿ ಯಶಸ್ಸು ಕಂಡಿರುವ ಚಿತ್ರ) ಸೂತ್ರ’ ಎಂದರು.

‘ಜೀವನದಲ್ಲಿ ಯಾವುದೇ ಕಾರ ಣಕ್ಕೂ ತಾಳ್ಮೆ ಕಳೆದುಬಾರದು. ಅವಕಾಶ ಕ್ಕಾಗಿ ಅಥವಾ ನೀವಂದುಕೊಂಡಿದ್ದನ್ನು ಸಾಧಿಸಲು ಕಾಯಿರಿ. ನಾನು ಸಹ ತಿರ ಸ್ಕಾರದ ಕ್ಷಣಗಳನ್ನು ಎದುರಿಸಿದ್ದೇನೆ. ಆದರೆ ತಾಳ್ಮೆ ಕಳೆದುಕೊಳ್ಳಲಿಲ್ಲ’ ಎಂದು ತಮ್ಮದೇ ಜೀವನದ ಕೆಲವು ಉದಾಹರಣೆ ನೀಡಿದರು.

‘ಯಾವುದೇ ಚಿತ್ರ ಇರಲಿ ಅದಕ್ಕೆ ಕತೆ ಮತ್ತು ಚಿತ್ರಕತೆ ತುಂಬಾ ಮುಖ್ಯ. ಛಾಯಾಗ್ರಹಣ ಮುಂತಾದ ವಿಷ ಯಗಳು ಆ ನಂತರ ಬರುವುದು. ಚಿತ್ರ ಕತೆ ಚೆನ್ನಾಗಿರಬೇಕು ಹಾಗೂ ಅದನ್ನು ಪ್ರೇಕ್ಷಕರು ಒಪ್ಪುವಂತೆ ದೃಶ್ಯ ವೈಭವದ ಮೂಲಕ ನೀಡಬೇಕು. ‘ಬಾಹುಬಲಿ’ ಚಿತ್ರದ ಕತೆಯನ್ನು 45 ದಿನಗಳ ಒಳಗೆ ಬರೆದು ಮುಗಿಸಿದೆ. ಚಿತ್ರೀಕರಣ ಮಾಡಲು ಐದು ವರ್ಷ ಬೇಕಾಯಿತು’ ಎಂದರು.

‘ಕಮರ್ಷಿಯಲ್ ಅಥವಾ ಕಲಾತ್ಮಕ ಯಾವುದೇ ಬಗೆಯ ಚಿತ್ರವನ್ನಾದರೂ ಮಾಡಿ, ಆದರೆ ನಿಮ್ಮ ಪ್ರೇಕ್ಷಕರು ಯಾರು, ಅವರು ಏನು ಬಯಸುತ್ತಾರೆ ಎಂಬುದು ಮನಸ್ಸಿನಲ್ಲಿರಲಿ. ದುಡ್ಡು ಕೊಟ್ಟು ನೋಡುವ ಪ್ರೇಕ್ಷನಿಗೆ ಖುಷಿ ಪಡಿಸುವುದು ಮುಖ್ಯ.

‘ಚಿಕ್ಕ ವಯಸ್ಸಿನಿಂದಲೂ ಪುರಾಣದ ಬಗ್ಗೆ ಹಾಗೂ ಕಾಮಿಕ್ ಪಾತ್ರಗಳ ಬಗ್ಗೆ ತುಂಬಾ ಆಸಕ್ತಿ. ಸಾಮಾನ್ಯ ಮನುಷ್ಯ ನೊಬ್ಬ ಮಾಡಲಾಗದ ಕೆಲಸವನ್ನು ಆ ಪಾತ್ರಗಳು ಮಾಡುತ್ತವೆ. ಕರ್ಣನ ಪಾತ್ರ ನನ್ನನ್ನು ತುಂಬ ಕಾಡಿದ ಪಾತ್ರವಾ ಗಿದೆ. ಹಲವಾರು ಪುಸ್ತಕಗಳಲ್ಲಿ ಆ ಪಾತ್ರವನ್ನು ಓದಿದಾಗಲೂ ಅಷ್ಟೇ ಭಾವುಕ ನಾಗಿದ್ದೇನೆ. ಕರ್ಣ ನನ್ನ ಮೆಚ್ಚಿನ ಪಾತ್ರ’ ಎಂದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಂಜೀವ್ ಎಂ ಪಾಟೀಲ್, ಎಂಐಟಿ ನಿರ್ದೇಶಕ ಡಾ. ಜಿ.ಕೆ. ಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT