ಮನ್‌ ಕಿ ಬಾತ್‌ @ 3

ಖಾದಿ ಆಂದೋಲನವಾಗಲಿ; ಖಾದಿ ಉದ್ಯಮ ಬೆಳಗಲಿ: ಪ್ರಧಾನಿ ಮೋದಿ

ಖಾದಿ ಉದ್ಯಮದಲ್ಲಿ ತೊಡಗಿರುವವರ ಮನೆಮನೆಗಳಲ್ಲಿ ಈ ದೀಪಾವಳಿ ಬೆಳಕು ನೀಡುವಂತೆ ಆಗಬೇಕು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ ಕಿ ಬಾತ್‌ ತಿಂಗಳ ರೇಡಿಯೊ ಕಾರ್ಯಕ್ರಮ ಮೂರು ವರ್ಷ ಪೂರೈಸಿದೆ. ಜನರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಪಯಣ ಎಂದು ಈ ಕಾರ್ಯಕ್ರಮದ ಕುರಿತು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

ಖಾದಿ ಕೇವಲ ಬಟ್ಟೆಯಲ್ಲ, ಅದೊಂದು ಆಂದೋಲನ. ಖಾದಿ ಅಭಿಯಾನದಂತೆ ಸಾಗಬೇಕಿದೆ. ಜನರಲ್ಲಿ ಖಾದಿ ಕುರಿತು ಆಸಕ್ತಿ ಹೆಚ್ಚಿದ್ದು, ಖಾದಿ ಬಟ್ಟೆಗಳ ಮಾರಾಟ ಹೆಚ್ಚಿರುವುದರಿಂದ ಬಡ ಜನತೆಗೆ ಉದ್ಯೋಗ ನೀಡಿದಂತಾಗಿದೆ. ಖಾದಿ ಉದ್ಯಮದಲ್ಲಿ ತೊಡಗಿರುವವರ ಮನೆಮನೆಗಳಲ್ಲಿ ಈ ದೀಪಾವಳಿ ಬೆಳಕು ನೀಡುವಂತೆ ಆಗಬೇಕು ಎಂದು ಹೇಳಿದರು.

ದೇಶದ ಪ್ರವಾಸೋದ್ಯಮ ಭಾರತೀಯರಿಂದಲೇ ಅಂತರರಾಷ್ಟ್ರೀಯಗೊಳ್ಳಬೇಕು. ಭಾರತವನ್ನು ಪ್ರವಾಸಿಯಾಗಿ ಮಾತ್ರ ನೋಡದೆ ವಿದ್ಯಾರ್ಥಿಯಾಗಿ ಕಾಣಬೇಕು. ದಾಲ್ ಸರೋವರದಿಂದ ವರ್ಷದಲ್ಲಿ 12 ಸಾವಿರ ಕೆ.ಜಿ. ತ್ಯಾಜ್ಯವನ್ನು ಹೊರತಂದು, ನೀರು ಸ್ವಚ್ಛಗೊಳಿಸಿರುವ ಶ್ರೀನಗರದ 18 ವರ್ಷದ ಬಿಲಾಲ್‌ ದಾರ್‌ಗೆ ಅಭಿನಂದಿಸಿದರು. ಸ್ವಚ್ಛತೆಯ ರಾಯಭಾರಿಯಾಗಿ ಈತನನ್ನು ಶ್ರೀನಗರದ ಮುನ್ಸಿಪಲ್‌ ಕಾರ್ಪೊರೇಷನ್‌ ಆಯ್ಕೆ ಮಾಡಿದೆ.

ಗಾಂಧಿ ಜಯಂತಿ ಹಾಗೂ ಸ್ವಚ್ಛ ಭಾರತ ಅಭಿಯಾನದ ವಾರ್ಷಿಕೋತ್ಸವ ಸಮೀಪಿಸುತ್ತಿರುವ ಸಂದರ್ಭದಲ್ಲಿ ‘ಸ್ವಚ್ಛತೆಯೇ ಸೇವೆ’ ಅಭಿಯಾನದ ಕುರಿತು ಮಾತನಾಡಿದ್ದಾರೆ. 36ನೇ ಮನ್‌ ಕಿ ಬಾತ್‌ನಲ್ಲಿ ಮಹಾತ್ಮ ಗಾಂಧೀಜಿ ಹಾಗೂ ದೀನ್‌ದಯಾಳ್‌ ಉಪಾಧ್ಯಾಯ ಅವರನ್ನು ನೆನಪಿಸಿಕೊಂಡು, ದೇಶಕ್ಕಾಗಿ ಸೇವೆ ಮಾಡಬೇಕೆಂದು ಸದಾ ತುಡಿಯುತ್ತಿದ್ದವರು ಎಂದರು.

ಈ ಕಾರ್ಯಕ್ರಮದ ಮುಖೇನ ನನ್ನ ಅಭಿಪ್ರಾಯ ವ್ಯಕ್ತಪಡಿಸುವುದಕ್ಕಿಂತಲೂ ‌ಜನರ ಆಲೋಚನೆ ಹಾಗೂ ಮಹಾತ್ವಾಕಾಂಕ್ಷೆಯನ್ನು ಮುಂದಿಟ್ಟಿದ್ದೇನೆ. ಇಲ್ಲಿ ರಾಜಕೀಯ ದೂರವಿಟ್ಟು ಜನರೊಂದಿಗೆ ಬೆರೆಯಲು ಪ್ರಯತ್ನಿಸಿದ್ದೇನೆ ಹಾಗೂ ದೇಶದ ಸಕಾರಾತ್ಮ ಶಕ್ತಿಯನ್ನು ಬಿಂಬಿತವಾಗಿದೆ. ಜನರೊಂದಿಗೆ ಬೆರೆತು ಅವರದೇ ಮಾತುಗಳನ್ನು ವ್ಯಕ್ತಪಡಿಸುವ ಈ ಕಾರ್ಯಕ್ರಮವನ್ನು ’ನನ್ನ ಮನದ ಮಾತು’ ಎಂದು ನಾನೆಂದಿಗೂ ಹೇಳಿಲ್ಲ.

ಇ–ಮೇಲ್‌, ಫೋನ್‌, ಮೈಗೌಹಾಗೂ ನರೇಂದ್ರಮೋದಿ ಆ್ಯಪ್‌ಗಳ ಮೂಲಕ ಜನರು ನೀಡಿರುವ ಅಭಿಪ್ರಾಯವನ್ನು ಇಲ್ಲಿ ಪ್ರಸ್ತುತ ಪಡಿಸಿದ್ದೇನೆ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು
ಡೊಕ್ಲಾಂನಲ್ಲಿ ಚೀನಾ ಮೂಲಸೌಕರ್ಯ ಅಭಿವೃದ್ಧಿ ತಾತ್ಕಾಲಿಕ: ಬಿಪಿನ್ ರಾವತ್

ಸೇನಾ ಮುಖ್ಯಸ್ಥರಿಂದ ಸ್ಪಷ್ಟನೆ
ಡೊಕ್ಲಾಂನಲ್ಲಿ ಚೀನಾ ಮೂಲಸೌಕರ್ಯ ಅಭಿವೃದ್ಧಿ ತಾತ್ಕಾಲಿಕ: ಬಿಪಿನ್ ರಾವತ್

17 Jan, 2018
ಪದ್ಮಾವತ್ ನಿಷೇಧ ಪ್ರಶ್ನಿಸಿ ಅರ್ಜಿ: ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

25ರಂದು ಬಿಡುಗಡೆಯಾಗಲಿರುವ ಸಿನಿಮಾ
ಪದ್ಮಾವತ್ ನಿಷೇಧ ಪ್ರಶ್ನಿಸಿ ಅರ್ಜಿ: ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

17 Jan, 2018
ಮಹಾತ್ಮಗಾಂಧಿ ಮಾನವೀಯತೆಯ ಮಹಾನ್ ಪ್ರವಾದಿ:  ಬೆಂಜಾಮಿನ್‌ ನೆತನ್ಯಾಹು

ಸ್ಫೂರ್ತಿದಾಯಕ ಭೇಟಿ
ಮಹಾತ್ಮಗಾಂಧಿ ಮಾನವೀಯತೆಯ ಮಹಾನ್ ಪ್ರವಾದಿ: ಬೆಂಜಾಮಿನ್‌ ನೆತನ್ಯಾಹು

17 Jan, 2018
‘ಸುಖೋಯ್–30’ ಎಂಕೆಐ ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ ರಕ್ಷಣಾ ಸಚಿವೆ

ಸಾಮರ್ಥ್ಯದ ಪರಿಶೀಲನೆ
‘ಸುಖೋಯ್–30’ ಎಂಕೆಐ ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ ರಕ್ಷಣಾ ಸಚಿವೆ

17 Jan, 2018
ಉತ್ತರ ಪ್ರದೇಶ: ₹ 100 ಕೋಟಿ ಮೌಲ್ಯದ ರದ್ದಾದ ನೋಟುಗಳು ಪತ್ತೆ

ಎನ್‌ಐಎ, ಆರ್‌ಬಿಐ, ಐಟಿ ಅಧಿಕಾರಿಗಳಿಂದ ದಾಳಿ
ಉತ್ತರ ಪ್ರದೇಶ: ₹ 100 ಕೋಟಿ ಮೌಲ್ಯದ ರದ್ದಾದ ನೋಟುಗಳು ಪತ್ತೆ

17 Jan, 2018