ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ವತ್‌ಪೂರ್ಣ ಲೇಖನ

Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅಕ್ಟೋಬರ್‌ 15ರಂದು ಮುಕ್ತಛಂದ ಪುರವಣಿಯಲ್ಲಿ ಪ್ರಕಟವಾದ ಆರ್‌. ರಾಘವನ್‌ ಅವರ ‘ಪದ ಪದ ಸೇರಿ ಪದಹತಿಯ ನೋವಾಗಿ’ ಎಂಬ ಶೀರ್ಷಿಕೆಯ ಲೇಖನ ತುಂಬ ಚೆನ್ನಾಗಿತ್ತು. ಕಾವ್ಯದ ಕುರಿತಾದ ಈ ಲೇಖನ ಕಾವ್ಯಾಸಕ್ತರಿಗೆ ಮಾರ್ಗದರ್ಶಕವಾಗಿ, ಕವಿತೆಯನ್ನು ವ್ಯಾಖ್ಯಾನಿಸುವವರಿಗೆ ಮತ್ತು ಕವಿ ಹೃದಯದವರಿಗೆ ಉಪಯುಕ್ತ ಲೇಖನ.

ಕವಿಯ ಹೃದಯದಲ್ಲಿ ಹುಟ್ಟುವ ಒಂದು ಭಾವದ ಎಳೆ ಪದ ಪದಗಳಲ್ಲಿ ಸೇರಿ ಕವಿತೆಯಾಗಿ ಹೊರಹೊಮ್ಮುವ ಕ್ರಿಯೆಯ ಸುಂದರ ಅನಾವರಣ. ವಿದ್ವತ್‌ಪೂರ್ಣ ಮತ್ತು ಹೊಸ ಹೊಸ ಅರ್ಥಗಳ ಹೊಳಹುಗಳನ್ನು ನೀಡುವ ಮಾರ್ಮಿಕ ಲೇಖನ ಇದು. ಕಾವ್ಯದ ಕುರಿತು ಚಿಂತನಪರ ಲೇಖನ ನೀಡಿದ ಲೇಖಕರಿಗೂ, ಪ್ರಕಟಿಸಿದ ಪ್ರಜಾವಾಣಿಗೂ ಧನ್ಯವಾದಗಳು.
– ಕೆ.ಪಿ. ರಾಮಗುಂಡಿ, ಬೈಲಹೊಂಗಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT