ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕ ಜಯಂತಿ ಮೆರವಣಿಗೆ

Last Updated 11 ನವೆಂಬರ್ 2017, 4:51 IST
ಅಕ್ಷರ ಗಾತ್ರ

ಕೆರೂರ: ಇಲ್ಲಿನ ಕನಕದಾಸ ಕುರುಬರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘಗಳ ವತಿಯಿಂದ ಈಚೆಗೆ ಕನಕದಾಸರ ಜಯಂತಿ ನಡೆಯಿತು. ಪ್ರಮುಖ ರಸ್ತೆಗಳಲ್ಲಿ ಡೊಳ್ಳುಮೇಳಗಳ ವೈವಿಧ್ಯಮಯ ಪ್ರದರ್ಶನಗಳು ನಡೆದವು. ಬಸರಿಗಿಡಪೇಟೆ ಬಡಾವಣೆಯ ಲಕ್ಷ್ಮೀ ದೇಗುಲದಿಂದ ಆರಂಭವಾದ ಭಕ್ತ ಕನಕದಾಸರ ಭಾವಚಿತ್ರದ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ತರಕಾರಿ ಮಾರ್ಕೆಟ್, ಹಳಪೇಟೆ, ರಾಚೊಟೇಶ್ವರ ದೇಗುಲದ ಮೂಲಕ ಬಸ್ ನಿಲ್ದಾಣ ಹಾಗೂ ಕಿಲ್ಲಾಪೇಟೆ, ಮ್ಯಾಗಾಡಿ, ಹೊಸಪೇಟೆ ಪ್ರದೇಶಗಳಲ್ಲಿ ಮೆರವಣಿಗೆ ಸಂಚರಿಸಿತು.

ತೆಂಗಿನ ಗರಿ, ಬಾಳೆ, ಹೂವುಗಳಿಂದ ಸಿಂಗರಿಸಿದ್ದ ವಾಹನದಲ್ಲಿ ಭಾವಚಿತ್ರದ ಮೆರವಣಿಗೆಯಲ್ಲಿ ಹಾಲುಮತ ಸಮಾಜದ ಯುವ ಸಮೂಹ ಸಂಭ್ರಮಕ್ಕೆ ಮೆರುಗು ತುಂಬಿತು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಡಾ.ಎಂ.ಜಿ. ಕಿತ್ತಲಿ, ಸುರೇಶ ಪೂಜೇರಿ, ಮಲ್ಲಪ್ಪ ಅಜ್ಜೋಡಿ, ರಂಗಪ್ಪ ಹಳಕಟ್ಟಿ, ಪ್ರಮುಖರಾದ ಮಹ್ಮದ್‌ ರಫೀಕ ಪೀರಖಾನ್, ಸೈದುಸಾಬ್‌ ಚೌಧರಿ, ವೆಂಕಪ್ಪ ಹಳಕಟ್ಟಿ, ಹನಮಂತ ಕಟಗಿ, ಈಶ್ವರಪ್ಪ ಹಾಗೂ ಯಲ್ಲಪ್ಪ ಹಳಕಟ್ಟಿ, ಪರಶುರಾಮ ಲಖಮಾಪೂರ, ಹನಮಂತ ಅಜ್ಜೋಡಿ, ಪಟ್ಟಣದ ಹಾಲುಮತ ಸಮಾಜದ ಹಿರಿಯರು, ಕನಕದಾಸ ಕುರುಬರ ಕ್ಷೇಮಾಭಿವೃದ್ಧಿ ಸಂಘ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT