ದಿನದ ವಿಶೇಷ

ಸೋಮವಾರ, 13–11–1967

ಫರೀದಾಬಾದ್‌ ಜಿಲ್ಲೆಯ ಗ್ರಾಮವೊಂದರಲ್ಲಿ ಮಹಿಳೆಯೊಬ್ಬಳು ಆರು ಗಂಡುಮಕ್ಕಳನ್ನು ಹೆತ್ತಿರುವಳೆಂದು ಇಲ್ಲಿ ವರದಿಯಾಗಿದೆ.

ಸಂತಾನ ವೈಭವ

ಡಾಕ್ಕಾ, ನ. 12– ಫರೀದಾಬಾದ್‌ ಜಿಲ್ಲೆಯ ಗ್ರಾಮವೊಂದರಲ್ಲಿ ಮಹಿಳೆಯೊಬ್ಬಳು ಆರು ಗಂಡುಮಕ್ಕಳನ್ನು ಹೆತ್ತಿರುವಳೆಂದು ಇಲ್ಲಿ ವರದಿಯಾಗಿದೆ.

ಕೋಷಿ ಎಂಬ ಗ್ರಾಮದಲ್ಲಿ ನ. 1 ರಂದು ಈ ವಿಸ್ಮಯಕಾರಕ ಪ್ರಕರಣ ವರದಿಯಾಯಿತೆಂದು ‘ಸಿಂಗಬಾದ್‌’ ಪತ್ರಿಕೆ ಪ್ರಕಟಿಸಿ ಎಲ್ಲ ಮಕ್ಕಳು ಜೀವಂತವಾಗಿವೆಯೆಂದು ತಿಳಿಸಿದೆ.

**

ಕಾಸರಗೋಡಿನ ಕತೆ: ನಡೆದು ಬಂದ ದಾರಿ

ನವದೆಹಲಿ, ನ. 12– ಕಾಸರಗೋಡು ಮೈಸೂರಿಗೆ ಸೇರಬೇಕು ಎಂಬುದು ಈಗ ಮಹಾಜನ್‌ ಆಯೋಗವು ಮಾಡಿರುವ ಶಿಫಾರಸು. ಆದರೆ 1956 ರಲ್ಲಿಯೇ ಅದು ಮೈಸೂರಿಗೆ ಸೇರಬೇಕಾಗಿತ್ತು ಎಂಬುದು ಈಗ ಬೆಳಕಿಗೆ ಬಂದಿದೆ.

ಮಹಾಜನ್‌ ಶಿಫಾರಸನ್ನು ತಾನು ಒಪ್ಪುವುದಿಲ್ಲ ಎಂದು ಕೇರಳ ಹೇಳುತ್ತಿದೆಯಾದರೂ, ಕಾಸರಗೋಡು ಮೈಸೂರಿಗೇ ಸೇರಬೇಕೆಂದು ಸಮರ್ಥಿಸುವುದಕ್ಕೆ ಇದೀಗ ಅನೇಕ ಅಂಶಗಳು ದೊರತಿವೆ.

ಈ ಅಂಶಗಳನ್ನೇ ಎತ್ತಿಹಿಡಿದು, ಮೈಸೂರು ತನ್ನ ವಾದವನ್ನೂ, ಮಹಾಜನ್‌ ಆಯೋಗದ ವರದಿಯನ್ನೂ ಕೇಂದ್ರವು ಒಪ್ಪುವಂತೆ ಮಾಡುವುದು ಸಾಧ್ಯವಿದೆಯೆಂದು ಅಭಿಪ್ರಾಯಪಡಲಾಗಿದೆ. ಹನ್ನೊಂದು ವರ್ಷಗಳ ಹಿಂದೆಯೇ ಮೈಸೂರಿಗೆ ಸೇರಬೇಕಾಗಿದ್ದ ಕಾಸರಗೋಡಿಗೆ ಅಡ್ಡಿಯುಂಟು ಮಾಡಿದುದು ಮದ್ರಾಸಿನ ಗುಡಲೂರು.

ಕೇಂದ್ರದ ನಿರ್ಧಾರ: 1956 ರಲ್ಲಿ ರಾಜ್ಯಗಳ ಮರುವಿಂಗಡಣೆ ಮಾಡಿದಾಗ, ಕಾಸರಗೋಡನ್ನು ಮೈಸೂರಿಗೂ, ಗುಡಲೂರನ್ನು ಕೇರಳಕ್ಕೂ ಸೇರಿಸಬೇಕೆಂದು ಕೇಂದ್ರ ಸಂಪುಟವು ನಿರ್ಧರಿಸಿತ್ತೆಂದು ಗೊತ್ತಾಗಿದೆ. ಆಗ ಮದ್ರಾಸಿನ ಮುಖ್ಯಮಂತ್ರಿಯಾಗಿದ್ದ ಶ್ರೀ ಕೆ. ಕಾಮರಾಜರು, ನೀಲಗಿರಿ ಜಿಲ್ಲೆಯ ಗುಡಲೂರನ್ನು ಕೇರಳಕ್ಕೆ ಸೇರಿಸಿದರೆ ತಾವು ರಾಜೀನಾಮೆ ಕೊಡುವುದಾಗಿ ಬೆದರಿಕೆ ಹಾಕಿದರಂತೆ.

**

ಸಾಧ್ಯವಾದಷ್ಟು ಅಕ್ಕಿ ಕೊಡಲು ಆಂಧ್ರದ ಭರವಸೆ

ನವದೆಹಲಿ, ನ. 12– ತನಗೆ ಕಷ್ಟಗಳಿದ್ದರೂ ಸಾಧ್ಯವಾಗುವಷ್ಟು ಅಕ್ಕಿಯನ್ನು ಒದಗಿಸಲು ಆಂದ್ರ ಸರಕಾರ ಭರವಸೆ ನೀಡಿದೆ. ಆಂಧ್ರ ಸರಕಾರದ ಈ ಭರವ
ಸೆಯನ್ನು ಅರ್ಥಸಚಿವ ಶ್ರೀ ರಾಮಕೃಷ್ಣ ಹೆಗ್ಗಡೆ ಅವರು ಇಂದು ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

50 ವರ್ಷಗಳ ಹಿಂದೆ
ಭಾನುವಾರ, 24–3–1968

ಬಿದರೆ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹಾಗೂ ಹೊನ್ನಾವರ ತಾಲ್ಲೂಕುಗಳಲ್ಲಿ ಮುಂದಿನ ಜುಲೈ ತಿಂಗಳ ಒಂದರಿಂದ ಮದ್ಯಪಾನಕ್ಕೆ ನಿಷೇಧವಿಲ್ಲ.

24 Mar, 2018

50 ವರ್ಷಗಳ ಹಿಂದೆ
ಶನಿವಾರ, 23-3-1968

ನವದೆಹಲಿ, ಮಾ. 22– ಗಡಿ ವಿವಾದದಲ್ಲಿ ಈಗಲೇ ಮಹಾರಾಷ್ಟ್ರ ಮತ್ತು ಮೈಸೂರು ರಾಜ್ಯ ಮುಖ್ಯಮಂತ್ರಿಗಳ ಸಭೆ ಕರೆಯುವ ಯಾವುದೇ ಸಲಹೆ ಇಲ್ಲ ಎಂದು ಗೃಹಶಾಖೆ...

23 Mar, 2018

50 ವರ್ಷಗಳ ಹಿಂದೆ
ಶುಕ್ರವಾರ, 22–3–1968

ಬೆಂಗಳೂರು, ಮಾ. 21– ಕೃಷ್ಣಾ ಜಲ ವಿವಾದ ಇತ್ಯರ್ಥಕ್ಕಾಗಿ ಕಾನೂನಿನ ಪ್ರಕಾರ ಮುಂದುವರಿಯಲು ರಾಜ್ಯದ ಅಡ್ವೊಕೇಟ್ ಜನರಲ್‌ರವರಿಗೆ ಸಂಪೂರ್ಣ ಅಧಿಕಾರ ನೀಡಿ, ವಿವಾದಕ್ಕೆ ಸಂಬಂಧಿಸಿದ...

22 Mar, 2018

ದಿನದ ನೆನಪು
ಗುರುವಾರ, 21–3–1968

ಯಲವಿಗಿ ರೈಲು ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ದಕ್ಷಿಣ ರೈಲ್ವೆ ಇತಿಹಾಸದಲ್ಲಿಯೇ ಅತಿ ದಾರುಣವಾದ ರೈಲು ದುರಂತದಲ್ಲಿ 53 ಜನ ಸತ್ತು, 41 ಜನ...

21 Mar, 2018

50 ವರ್ಷಗಳ ಹಿಂದೆ
ಬುಧವಾರ, 20–3–1968

ಹುಬ್ಬಳ್ಳಿಗೆ 45 ಕಿಲೋ ಮೀಟರ್ ದೂರದಲ್ಲಿರುವ ಯಳವಿಗಿ ರೈಲ್ವೆ ನಿಲ್ದಾಣದಲ್ಲಿ ಇಂದು ರಾತ್ರಿ 10.35ರ ಸಮಯದಲ್ಲಿ ಎರಡು ರೈಲುಗಳು ಡಿಕ್ಕಿ ಹೊಡೆದು ಅನೇಕ ಜನರು...

20 Mar, 2018