ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡು, ನುಡಿ ರಕ್ಷಣೆ ಎಲ್ಲರ ಹೊಣೆ

Last Updated 17 ನವೆಂಬರ್ 2017, 6:56 IST
ಅಕ್ಷರ ಗಾತ್ರ

ಹುಣಸಗಿ: ನಾಡು, ನುಡಿಯ ರಕ್ಷಣೆಗೆ ಎಲ್ಲರೂ ಒಂದಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಹೇಳಿದರು. ಪಟ್ಟಣದಲ್ಲಿ ಕರವೇ ವಲಯ ಘಟಕದಿಂದ ಬುಧವಾರ ಜರುಗಿದ 'ಕಲ್ಯಾಣ ಕೊಡೇಕಲ್ ಉತ್ಸವ’ದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ನಾಡಿಗೆ ಭವ್ಯ ಇತಿಹಾಸ ಇದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇಲ್ಲಿನ ಅಮೂಲ್ಯ ನೆಲ, ಜಲ, ಸಂಸ್ಕೃತಿ ಹಾಗೂ ಗಡಿಗೆ ಧಕ್ಕೆ ತರುವ ಕೆಲಸ ಮಾಡುತ್ತಿವೆ. ಇದರ ವಿರುದ್ಧ ಹೋರಾಟ ನಡೆಸಬೇಕು’ ಎಂದರು.

ಶ್ರೀಗುರು ದುರದುಂಡೇಶ್ವರ ವಿರಕ್ತ ಮಠದ ಪೀಠಾಧಿಪತಿ ಶಿವಕುಮಾರ ದೇವರು ಮಾತನಾಡಿ, ‘ನಾಡಿನ ಪ್ರತಿಯೊಂದು ಸಮಸ್ಯೆಗೆ ಮುಂಚೂಣಿಯಾಗಿ ಹೋರಾಟಕ್ಕೆ ನಿಲ್ಲುವ ಕರವೇ ಕಾರ್ಯವೈಖರಿ ಮಾದರಿ.

ಭಾವೈಕ್ಯತೆ ಕೇಂದ್ರವಾಗಿರುವ ಕೊಡೇಕಲ್‌ ಅನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವುದು, ನಾರಾಯಣಪುರ– ಬಸವಸಾಗರ ಜಲಾಶಯದ ಉದ್ಯಾನವನ್ನು ವಿಸ್ತರಿಸಿ ಲೋಕಾರ್ಪಣೆ ಗೊಳಿಸುವುದು ಹಾಗೂ ಬೋನಾಳ ಕೆರೆ ಪಕ್ಷಿಧಾಮಕ್ಕೆ ಉತ್ತೇಜನ ನೀಡಲು ಕರವೇ ಸರ್ಕಾರಕ್ಕೆ ಒತ್ತಾಯ ಮಾಡಬೇಕು’ ಎಂದು ಸಲಹೆ ನೀಡಿದರು.

ವೃಷಬೇಂದ್ರಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಮುಖಂಡ ರಾಜಾ ವೆಂಕಟಪ್ಪನಾಯಕ ಜಹಾಗೀರದಾರ ಕಾರ್ಯಕ್ರಮ ಉದ್ಘಾಟಿಸಿದರು. ಹೇಮರಾಜ ಶಾಸ್ತ್ರೀ, ತಾಲ್ಲೂಕು ಪಂಚಾಯಿತಿ ಸದಸ್ಯ ಮೋಹನ ಪಾಟೀಲ, ಡಾ.ಬಿ.ಬಿ.ಬಿರಾದಾರ, ರವೀಂದ್ರ ಅಂಗಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಿಮಪ್ಪ ಸೊನ್ನಾಪುರ, ಹಣಮೇಶಪ್ಪ ಪತ್ತಾರ, ಸಂಗನಗೌಡ ಚಿಮ್ಮಲಗಿ, ಸುರೇಶ ದೇವೂರು, ಅಯ್ಯಣ್ಣ ಪಡಶೆಟ್ಟಿ, ನಿಂಗಣ್ಣ ಹುಂಡೇಕಾರ್, ವೆಂಕನಗೌಡ, ಮಲ್ಲು ಬಿರಾದಾರ ಭಾಗವಹಿಸಿದ್ದರು.

ಕರವೇ (ಪ್ರವೀಣ ಶೆಟ್ಟಿ ಬಣ) ವಲಯ ಘಟಕದ ಅಧ್ಯಕ್ಷ ರಮೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುರಾಜ ಜೋಶಿ ಸ್ವಾಗತಿಸಿದರು. ಕೆ.ಬಿ.ಗಡ್ಡದ್ ನಿರೂಪಿಸಿ, ಶಿವರಾಜ ಹೊಕ್ರಾಣಿ ವಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT