ಬಳ್ಳಾರಿ

ಸಂಘಟಿತರಾದರೆ ಮಾತ್ರ ಅಧಿಕಾರ ಕೈವಶ

‘ಪರಿಶಿಷ್ಟ ಸಮುದಾಯದ ಬೋವಿಗಳು, ಲಂಬಾಣಿಗಳು ಸಂಘಟಿತರಾಗಿ ಸಮಾವೇಶ ಮಾಡುತ್ತಿದ್ದಾರೆ.

ಬಳ್ಳಾರಿ:‘ಛಲವಾದಿಗಳು ಸಂಘಟಿತರಾದರೆ ಮಾತ್ರ ಗ್ರಾಮ ಪಂಚಾಯಿತಿಯಿಂದ ಉನ್ನತ ಹಂತದವರೆಗೆ ಅಧಿಕಾರ ಪಡೆಯಲು ಸಾಧ್ಯ. ಹೀಗಾಗಿ ಒಡಕುಗಳನ್ನು ಮರೆತು ಒಗ್ಗಟ್ಟಿನ ಕಡೆಗೆ ಗಮನ ಹರಿಸಬೇಕು’ ಎಂದ ಛಲವಾದಿ ಮಹಾಸಭಾದ ಸ್ಥಾಪಕ ಕೆ.ಶಿವರಾಮು ಸಲಹೆ ನೀಡಿದರು.

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾನುವಾರ ಜಿಲ್ಲಾ ಘಟಕ ಏರ್ಪಡಿಸಿದ್ದ  ಒನಕೆ ಓಬವ್ವ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಒಕ್ಕಲಿಗರು, ಲಿಂಗಾಯತರು, ವಿಶ್ವಕರ್ಮರು, ಕುರುಬರು, ಸವಿತಾ ಸಮಾಜ, ರೆಡ್ಡಿ ಸಮಾಜದವರು ಸಂಘಟಿರಾಗಿದ್ದಾರೆ. ಅವರ ಸಮಾವೇಶಗಳು ಬೃಹತ್ತಾಗಿ ನಡೆಯುತ್ತಿವೆ. ಆದರೆ ಛಲವಾದಿಗಳು ಮಾತ್ರ ಏಕೆ ಸಂಘಟಿತರಾಗಿಲ್ಲ’ ಎಂದು ಪ್ರಶ್ನಿಸಿದರು.

‘ಪರಿಶಿಷ್ಟ ಸಮುದಾಯದ ಬೋವಿಗಳು, ಲಂಬಾಣಿಗಳು ಸಂಘಟಿತರಾಗಿ ಸಮಾವೇಶ ಮಾಡುತ್ತಿದ್ದಾರೆ. ಆದರೆ, ಛಲವಾದಿಗಳು ಸಮಾವೇಶ ಏಕೆ ಹಮ್ಮಿಕೊಳ್ಳಬಾರದು? ಇನ್ನಾದರೂ ಒಗ್ಗಟ್ಟಾಗದಿದ್ದರೆ ಬೇರೆ ಜಾತಿಗಳ ಅಬ್ಬರದಲ್ಲಿ ಮುಚ್ಚಿ ಹೋಗುತ್ತೀರಿ’ ಎಂದು ಎಚ್ಚರಿಸಿದ ಅವರು, ‘ ಈ ಕಾರ್ಯಕ್ರಮವನ್ನು ಸಮಾವೇಶವನ್ನಾಗಿ ರೂಪಿಸಬೇಕಾಗಿತ್ತು’ ಎಂದರು.

ತಪ್ಪು ಮಾಹಿತಿ: ‘ಪರಿಶಿಷ್ಟ ಜಾತಿಯಲ್ಲಿ ಬಲಗೈ ಸಮುದಾಯವಾದ ಛಲವಾದಿಗಳ ಜನಸಂಖ್ಯೆ ಹೆಚ್ಚಿದ್ದರೂ, ಎಡಗೈ ಸಮುದಾಯದವರು ತಾವೇ ಹೆಚ್ಚಿದ್ದೇವೆ ಎಂದು ರಾಜಕೀಯ ಪಕ್ಷಗಳಿಗೆ ತಪ್ಪು ಮಾಹಿತಿ ನೀಡಿ ಚುನಾವಣೆ ಟಿಕೆಟ್‌ ಗಳಿಸುತ್ತಿದ್ದಾರೆ. ಪ್ರತಿಬಾರಿ ಅವರೇ ಅಧಿಕಾರ ಪಡೆಯುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಪರಿಶಿಷ್ಟ ಸಮುದಾಯದವರ ಜನಸಂಖ್ಯೆ 1.08 ಕೋಟಿ ಇದ್ದರೂ ಅಧಿಕಾರ ಪಡೆಯಲು ಸಾಧ್ಯವಾಗದಿರುವುದಕ್ಕೆ ಒಳಗಿನ ಎಡ–ಬಲ ಎಂಬ ಒಡಕು ಕೂಡ ಕಾರಣ. ಪರಿಣಾಮವಾಗಿ, ಪರಿಶಿಷ್ಟರಿಗೆ ಹೋಲಿಸಿದರೆ ಕಡಿಮೆ ಜನಸಂಖ್ಯೆಯುಳ್ಳ ಒಕ್ಕಲಿಗರು ಮತ್ತು ಲಿಂಗಾಯತರು ಅಧಿಕಾರ ಪಡೆಯುತ್ತಿದ್ದಾರೆ. ಇದೆಂಥ ದುರವಸ್ಥೆ ನಮ್ಮದು?’ ಎಂದು  ಹೇಳಿದರು.

ಅಧಿಕಾರ ತಪ್ಪಿಸಿದ ಕಾಂಗ್ರೆಸ್: ‘ದಲಿತರು ಮತ್ತು ಮುಸಲ್ಮಾನರ ಮತ ಪಡೆದು ಏಳು ದಶಕ ಅಧಿಕಾರ ನಡೆಸಿದ ಕಾಂಗ್ರೆಸ್‌ ಪಕ್ಷ, ದಲಿತರಿಗೆ ಅಧಿಕಾರ ನೀಡದೆ ವಂಚಿಸಿದೆ. ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್‌ ಅವರು ಮುಖ್ಯಮಂತ್ರಿಯಾಗುವ ಅವಕಾಶವೂ ಕೈ ತಪ್ಪಿದೆ. ಇಂಥ ಪಕ್ಷಕ್ಕೆ ನಾನೇಕೆ ಸೇರಲಿ? ಬಿಎಸ್‌ಪಿಗೆ ಅಧಿಕಾರ ಪಡೆಯುವ ಶಕ್ತಿ ಇದ್ದಿದ್ದರೆ ಅಲ್ಲಿಗೇ ಹೋಗುತ್ತಿದ್ದೆ. ಆದರೆ ಅದು ಸಾಧ್ಯವಿಲ್ಲ. ಹೀಗಾಗಿ ದಲಿತರ ಪರವಾಗಿರುವ ಬಿಜೆಪಿ ಸೇರಿದ್ದೇನೆ’ ಎಂದು ಶಿವರಾಮು ಪ್ರತಿಪಾದಿಸಿದರು.

ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್‌ ಸ್ವಾಮೀಜಿ, ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಹಾ
ಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸಿ.ನರಸಪ್ಪ,ಪ್ರೊ.ರಾಜೇಂದ್ರಪ್ರಸಾದ್‌ ವೇದಿಕೆಯಲ್ಲಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಎಲ್ಲೆಡೆ ಎಳ್ಳು ಬೆಲ್ಲದ ಸವಿ...

ಬಳ್ಳಾರಿ
ಎಲ್ಲೆಡೆ ಎಳ್ಳು ಬೆಲ್ಲದ ಸವಿ...

16 Jan, 2018

ಕಂಪ್ಲಿ
‘ಸದಾಶಿವ ಆಯೋಗದ ವರದಿ ಅವಾಸ್ತವಿಕ’

‘ಸಮಾನತೆ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿದ ಸಿದ್ಧರಾಮೇಶ್ವರರ ಆದರ್ಶ, ಮೌಲ್ಯಗಳು ಸಾರ್ವಕಾಲಿಕ’

16 Jan, 2018
ತುಂಗೆಯಲ್ಲಿ ಮಿಂದೆದ್ದ ಭಕ್ತರು

ಹೊಸಪೇಟೆ
ತುಂಗೆಯಲ್ಲಿ ಮಿಂದೆದ್ದ ಭಕ್ತರು

15 Jan, 2018

ಹೊಸಪೇಟೆ
ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಸೂಚನೆ

ಈ ವಿಷಯದ ಕುರಿತು ಮಾಹಿತಿ ನೀಡುವಂತೆ ಆಯುಕ್ತರು ನಗರಸಭೆಗೆ ಸೂಚನೆ ಕೊಟ್ಟಿದ್ದರು. ಸುಳ್ಳು ಮಾಹಿತಿ ನೀಡಿ ಖಾತೆ ಬದಲಾಯಿಸಿಕೊಳ್ಳಲಾಗಿದೆ ಎಂದು ನಗರಸಭೆ ವರದಿ ನೀಡಿತ್ತು....

15 Jan, 2018
ಆಗ ಆಟೊ, ಈಗ ಕ್ಯಾಲೆಂಡರ್‌ ತಂತ್ರ

ಹೊಸಪೇಟೆ
ಆಗ ಆಟೊ, ಈಗ ಕ್ಯಾಲೆಂಡರ್‌ ತಂತ್ರ

15 Jan, 2018