50 ವರ್ಷಗಳ ಹಿಂದೆ

ಮಂಗಳವಾರ, 21–11–1967

ಹರಿಯಾಣಾದಲ್ಲಿ ರಾಜಕೀಯ ಪಕ್ಷನಿಷ್ಠೆಗಳು ಪದೇ ಪದೇ ಬದಲಾವಣೆಯಾಗಿ ಸುಭದ್ರ ಆಡಳಿತವಿಲ್ಲದಿರುವ ಬಗ್ಗೆ ರಾಜ್ಯಪಾಲ ಶ್ರೀ ಡಿ.ಎನ್. ಚಕ್ರವರ್ತಿಯವರ ವರದಿ ಪರಿಶೀಲನೆ ನಂತರ ಅವರ ಶಿಫಾರಸಿನ ಮೇರೆಗೆ ಈ ಸಂಜೆ ಕೇಂದ್ರ ಸಂಪುಟ ಈ ನಿರ್ಧಾರವನ್ನು ಕೈಗೊಂಡಿತು.

ಹರಿಯಾಣಾಕ್ಕೆ ರಾಷ್ಟ್ರಪತಿ ಆಳ್ವಿಕೆ ಇಂದು ತುರ್ತು ಘೋಷಣೆ
ದೆಹಲಿ, ನ. 20–
ಹರಿಯಾಣಾದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಲು ಕೇಂದ್ರ ಸರ್ಕಾರ ಇಂದು ನಿರ್ಧರಿಸಿತು. ನಾಳೆ ತುರ್ತು ಘೋಷಣೆ ಹೊರಬೀಳಲಿದೆ.

ಹರಿಯಾಣಾದಲ್ಲಿ ರಾಜಕೀಯ ಪಕ್ಷನಿಷ್ಠೆಗಳು ಪದೇ ಪದೇ ಬದಲಾವಣೆಯಾಗಿ ಸುಭದ್ರ ಆಡಳಿತವಿಲ್ಲದಿರುವ ಬಗ್ಗೆ ರಾಜ್ಯಪಾಲ ಶ್ರೀ ಡಿ.ಎನ್. ಚಕ್ರವರ್ತಿಯವರ ವರದಿ ಪರಿಶೀಲನೆ ನಂತರ ಅವರ ಶಿಫಾರಸಿನ ಮೇರೆಗೆ ಈ ಸಂಜೆ ಕೇಂದ್ರ ಸಂಪುಟ ಈ ನಿರ್ಧಾರವನ್ನು ಕೈಗೊಂಡಿತು.

ಬೆಂಗಳೂರಿಗೊಬ್ಬಳು ಜಪಾನಿ ಸೋದರಿ
ಬೆಂಗಳೂರು, ನ. 20–
ಬೆಂಗಳೂರನ್ನು ಸೋದರಿ ನಗರವಾಗಿ ದತ್ತು ಸ್ವೀಕಾರ ಮಾಡಿಕೊಳ್ಳಲು ಜಪಾನಿನ ಶಿಮಿಸುನಗರದ ಮೇಯರ್ ಇಚ್ಛಿಸಿದ್ದಾರೆ. ಉದ್ದೇಶ ಸಾಂಸ್ಕೃತಿಕ ವಿನಿಮಯ.

‘ಈ ಸಂಬಂಧದಲ್ಲಿ ಸದ್ಯದಲ್ಲೇ ಮೇಯರ್ ಅವರು ಮೈಸೂರು ಸರ್ಕಾರಕ್ಕೆ ಪತ್ರ ಬರೆಯಲಿದ್ದಾರೆ’ ಎಂದು ಟೋಕಿಯೋದಿಂದ ಇಂದು ನಗರಕ್ಕೆ ಮರಳಿದ ಸಂಪರ್ಕ ವಿಭಾಗದ ಮುಖ್ಯ ಎಂಜಿನಿಯರ್ ಶ್ರಿ ಕೆ. ಬಸಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ಪ್ರಜಾವಾಣಿ: 50 ವರ್ಷಗಳ ಹಿಂದೆ
ಶನಿವಾರ, 27–4–1968

ಕೇಂದ್ರ ಕೈಗಾರಿಕಾ ಅಭಿವೃದ್ಧಿ ಶಾಖೆ ಸಚಿವ ಶ್ರೀ ಫಕ್ರುದ್ದಿನ್ ಆಲಿ ಅಹ್ಮದ್ ಅವರ ವಿರುದ್ಧ ಇಂದು ಲೋಕಸಭೆಯಲ್ಲಿ ಮಂಡಿಸಲ್ಪಟ್ಟ ಹಕ್ಕುಬಾಧ್ಯತಾ ಸೂಚನೆ 145–78 ಮತಗಳಿಂದ...

27 Apr, 2018

ಸಣ್ಣ ಕಾರ್
ಶುಕ್ರವಾರ, 26–4–1968

ಸರಕಾರಿ ಉದ್ಯಮರಂಗದಲ್ಲಿ ‘ಬೃಹತ್ ಪ್ರಮಾಣದಲ್ಲಿ’ ಸಣ್ಣ ಕಾರ್ ಉತ್ಪಾದನೆ ಕಾರ್ಯಕ್ರಮ ಕೈಗೊಳ್ಳುವ ಸರಕಾರದ ನಿರ್ಧಾರವನ್ನು ಕೈಗಾರಿಕಾಭಿವೃದ್ಧಿ ಸಚಿವ ಶ್ರೀ ಫಕ್ರುದ್ದೀನ್ ಆಲಿ ಅಹಮದ್ ಅವರು...

26 Apr, 2018

ಪ್ರಜಾವಾಣಿ: 50 ವರ್ಷಗಳ ಹಿಂದೆ
ಗುರುವಾರ, 25–4–1968

ರಾಷ್ಟ್ರ ಮತ್ತು ಪ್ರಜಾಸತ್ತೆಯ ಹಿತದೃಷ್ಟಿಯಿಂದ ಅಗತ್ಯವಾದರೆ ಸಮ್ಮಿಶ್ರ ಸರ್ಕಾರಗಳನ್ನು ರಚಿಸಲು ಕಾಂಗ್ರೆಸ್ ಹಿಂತೆಗೆಯುವುದಿಲ್ಲವೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಹೇಳಿದರು. ...

25 Apr, 2018

ಪ್ರಜಾವಾಣಿ: 50 ವರ್ಷಗಳ ಹಿಂದೆ
ಬುಧವಾರ, 24–4–1968

‘ಕೋಮುವಾರು ವಿಷಯವನ್ನು ನಿವಾರಿಸಿ, ಮಂಗಳೂರಿನ ಒಳ್ಳೆಯ ಹೆಸರನ್ನು ಉಳಿಸಿಕೊಳ್ಳಿ’ ಎಂದು ಗೃಹಸಚಿವ ಶ್ರೀ ಆರ್.ಎಂ. ಪಾಟೀಲರು ಇಂದು ಇಲ್ಲಿ ಶಾಂತಿ ಸಮಿತಿ ಸಭೆಯಲ್ಲಿ ಮಾತನಾಡುತ್ತಾ...

23 Apr, 2018

ಪ್ರಜಾವಾಣಿ: 50 ವರ್ಷಗಳ ಹಿಂದೆ
ಮಂಗಳವಾರ, 23–4–1968

ಆರ‍್ಥಿಕ ಕಾರ್ಯಕ್ರಮಗಳನ್ನು ಜಾರಿಗೆ ತಾರದಿರುವ ಬಗ್ಗೆ ಕಾಂಗ್ರೆಸ್‌ ಪಕ್ಷದ ನಾಯಕತ್ವವನ್ನು ಕಾಂಗ್ರೆಸಿಗರೇ ಟೀಕಿಸುವುದು ಪಕ್ಷದ ಹಿತದೃಷ್ಟಿಯಿಂದ ಸರಿಯಲ್ಲ.

22 Apr, 2018