ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಂದಿರಿಗಾಗಿ ‘ಮಾನ್ಯತಾ’ ಯೋಜನೆ

Last Updated 20 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ತಾಯಂದಿರು ಹಾಗೂ ನವಜಾತ ಶಿಶುಗಳ ಆರೈಕೆಯ ಗುಣಮಟ್ಟ ಸುಧಾರಿಸಲು ಫೆಡರೇಷನ್ ಆಫ್ ಅಬ್‍ಸ್ಟೆಟ್ರಿಕ್ ಆ್ಯಂಡ್ ಗೈನಕಾಲಜಿಕಲ್ ಸೊಸೈಟೀಸ್‌ ಆಫ್ ಇಂಡಿಯಾ (ಫೋಗ್ಸಿ) ‘ಮಾನ್ಯತಾ’ ಎಂಬ ಯೋಜನೆಗೆ ಚಾಲನೆ ನೀಡಿದೆ.

ಎಂ.ಎಸ್‍.ಡಿ ಫಾರ್ ಮದರ್ಸ್, ಮ್ಯಾಕ್‍ ಆರ್ಥರ್ ಫೌಂಡೇಷನ್ ಮತ್ತು ಜೆಪಿಗೊ (ಜಾನ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಸಂಸ್ಥೆ) ಸಹಯೋಗ ಒದಗಿಸಿವೆ.

ದೇಶದಲ್ಲಿ ಪ್ರತಿದಿನ 157 ತಾಯಂದಿರು ಅಸುನೀಗುತ್ತಿದ್ದಾರೆ. 2022ರ ವೇಳೆಗೆ ಈ ಪ್ರಮಾಣವನ್ನು 100ಕ್ಕೆ ಇಳಿಸುವ ಗುರಿಯನ್ನು ಫೋಗ್ಸಿ ಹೊಂದಿದೆ. ‘ಮಾನ್ಯತಾ’ ಯೋಜನೆಯಡಿ 16 ಮಾನದಂಡಗಳನ್ನು ನಿಗದಿಪಡಿಸಿದೆ. ಈ ಯೋಜನೆಯಡಿ ನೋಂದಾಯಿಸುವ ಖಾಸಗಿ ಆಸ್ಪತ್ರೆಗಳ ವೈದ್ಯರು, ನರ್ಸ್‌ಗಳಿಗೆ ತರಬೇತಿ ನೀಡಲಾಗುತ್ತದೆ. ಆಸ್ಪತ್ರೆಗಳು ಈ ಮಾನದಂಡಗಳ ಪ್ರಕಾರ ಗರ್ಭಿಣಿಯರಿಗೆ ಆರೋಗ್ಯ ಸೇವೆ ನೀಡುತ್ತಿರುವ ಕುರಿತು ಮೌಲ್ಯಮಾಪನ ಮಾಡಲಾಗುತ್ತದೆ. ಇದರಲ್ಲಿ ಶೇ 85ಕ್ಕಿಂತ ಹೆಚ್ಚು ಅಂಕ ಪಡೆದ ಆಸ್ಪತ್ರೆಗೆ ‘ಮಾನ್ಯತಾ ಸೀಲ್‌ ಆಫ್‌ ಕ್ವಾಲಿಟಿ’ ಪ್ರಮಾಣಪತ್ರ ನೀಡಲಾಗುತ್ತದೆ.

‘ತಾಯಂದಿರು ಹಾಗೂ ನವಜಾತ ಶಿಶುಗಳ ಮರಣ ಪ್ರಮಾಣ ಹೆಚ್ಚಾಗಿದೆ. ತಾಯ್ತನದ ನಿರೀಕ್ಷೆಯಲ್ಲಿರುವವರಿಗೆಗುಣಮಟ್ಟದ ಆರೈಕೆಯ ಭರವಸೆ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಿದ್ದೇವೆ. ಉತ್ತರ ಪ್ರದೇಶ ಹಾಗೂ ಜಾರ್ಖಂಡ್‌ನಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ 2013ರಲ್ಲಿ ಜಾರಿಗೊಳಿಸಲಾಗಿತ್ತು. ಆರಂಭದಲ್ಲಿ ಎರಡು ಮಾನದಂಡಗಳನ್ನು ನಿಗದಿಪಡಿಸಲಾಗಿತ್ತು. ಈಗ ಈ ಯೋಜನೆಯನ್ನು ರಾಷ್ಟ್ರವ್ಯಾಪಿ ಜಾರಿಗೊಳಿಸುತ್ತಿದ್ದೇವೆ’ ಎಂದು ‘ಮಾನ್ಯತಾ’ ಯೋಜನೆಯ ರಾಷ್ಟ್ರೀಯ ಸಂಚಾಲಕಿ ಡಾ. ಹೇಮಾ ದಿವಾಕರ್‌ ತಿಳಿಸಿದ್ದಾರೆ.

ಮಾಹಿತಿಗೆ: ಮೊ. ಸಂಖ್ಯೆ 9844046
724, ಇ–ಮೇಲ್‌ drhemadivakar@gmail.com ಸಂಪರ್ಕಿಸಬಹುದು.

* ಎಲ್ಲ ಗರ್ಭಿಣಿಯರ ಪರೀಕ್ಷೆ

* ಎಚ್‍ಐವಿ, ರಕ್ತಹೀನತೆ ಪರೀಕ್ಷೆ

* ಹೆರಿಗೆ ವೇಳೆ ಸುರಕ್ಷತೆಗೆ ಸಿದ್ಧತೆ

* ಪಿ.ವಿ. ಪರೀಕ್ಷೆ ನಡೆಸುವುದು, ಸೋಂಕು ನಿಯಂತ್ರಣ ರೂಢಿಗಳನ್ನು ಅನುಸರಿಸುವುದು

* ಗೌರವಯುತ ಮತ್ತು ಬೆಂಬಲಿತ ಆರೈಕೆ ದೃಢೀಕರಿಸುವುದು

* ಹೆರಿಗೆಯ ಪ್ರಗತಿಗೆ ಗಮನ

* ಗರ್ಭಿಣಿಯರಿಗೆ ಸುರಕ್ಷಿತ ಜನನಕ್ಕೆ ನೆರವು

* ನವಜಾತ ಶಿಶು ಆರೈಕೆಯ ಪರೀಕ್ಷೆ ಮತ್ತು ಮೇಲ್ವಿಚಾರಣೆ

* ಹೆರಿಗೆಯ 3ನೇ ಹಂತದ ಸಕ್ರಿಯ ನಿರ್ವಹಣೆ ಮತ್ತು ಹೊಕ್ಕಳುಬಳ್ಳಿ ಪರೀಕ್ಷೆ

* ಪ್ರಸವ ನಂತರದ ಗಾಯಗಳನ್ನು ಗುರುತಿಸುವುದು ಮತ್ತು ನಿರ್ವಹಿಸುವುದು

* ಗಂಭೀರ ಪ್ರಸವ ಅಪಸ್ಮಾರ ಗುರುತಿಸುವುದು ಮತ್ತು ನಿರ್ವಹಿಸುವುದು

* ನವಜಾತ ಶಿಶು ಕೂಡಲೇ ಅಳದಿದ್ದರೆ ರಿಸಸಿಟೇಷನ್ ಮಾಡುವುದು

* ಗಾತ್ರದಲ್ಲಿ ಕಡಿಮೆ ಇರುವ ಮಗುವಿನ ಆರೈಕೆ

* ಸಾರ್ವತ್ರಿಕ ಸೋಂಕು ನಿಯಂತ್ರಣ ನಿಯಮಗಳಿಗೆ ಬದ್ಧರಾಗಿರುವುದು

* ತಾಯಿಗೆ ಪ್ರಸವ ನಂತರದ ಆರೈಕೆ ಕಿಟ್‌ ಕೊಡುವುದು

* ಸಿ-ಸೆಕ್ಷನ್‍ಗೆ ಸಂಬಂಧಿಸಿದ ಕ್ಲಿನಿಕಲ್ ರೂಢಿಗಳನ್ನು ಪುನರ್ ಪರಿಶೀಲಿಸುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT