ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗಮ ರೈಲು ಸಂಚಾರಕ್ಕೆ ಕೃತಕ ಬುದ್ಧಿಮತ್ತೆ ವ್ಯವಸ್ಥೆ

Last Updated 21 ನವೆಂಬರ್ 2017, 10:37 IST
ಅಕ್ಷರ ಗಾತ್ರ

ಬೆಂಗಳೂರು: ರೈಲು ಸಂಚಾರದಲ್ಲಿ ಸೂಚನೆಗಳ ವಿಫಲತೆಯಿಂದ ಸಂಭವಿಸುವ ಅವಘಢಗಳನ್ನು ತಪ್ಪಿಸಲು ಭಾರತೀಯ ರೈಲ್ವೆ ಕೃತಕ ಬುದ್ಧಿಮತ್ತೆ ಬಳಕೆಗೆ ಮುಂದಾಗಿದೆ.

ಸಂಚಾರ ಸೂಚನಾ ವ್ಯವಸ್ಥೆ ರೈಲ್ವೆ ಕಾರ್ಯನಿರ್ವಹಣೆಯಲ್ಲಿ ಬಹುಮುಖ್ಯ ಭಾಗವಾಗಿದ್ದು, ಸುರಕ್ಷಿತ ರೈಲು ಸಂಚಾರಕ್ಕೆ ನಿರಂತರವಾಗಿ ನಿಗಾವಹಿಸಿ ಸೂಚನೆ ರವಾನಿಸುವುದು ಅತ್ಯಗತ್ಯ. ಪ್ರಸ್ತುತ ರೈಲ್ವೆ ಇಲಾಖೆಯು ಸಿಬ್ಬಂದಿಗಳೇ ನಿರ್ವಹಿಸುವ ಸೂಚನಾ ವ್ಯವಸ್ಥೆ ಅನುಸರಿಸುತ್ತಿದ್ದು, ಮುನ್ಸೂಚನೆ ನೀಡುವ ಕ್ರಮಗಳನ್ನು ಅಳವಡಿಸಿಕೊಂಡಿಲ್ಲ.

ನಾನ್‌–ಇಂಟ್ರುಸಿವ್‌ ಸೆನ್ಸರ್‌ಗಳನ್ನು ಅಳವಡಿಸಿ ಆನ್‌ಲೈನ್ ಮೂಲಕವೇ ರೈಲು ಸಂಚಾರಕ್ಕೆ ಅಗತ್ಯವಾದ ಎಲ್ಲ ಸೂಚನೆಗಳನ್ನು ಗಮನಿಸುವುದು ಹಾಗೂ ನಿರ್ವಹಿಸುವುದು ಸಾಧ್ಯವಾಗಲಿದೆ. ಸಂಚಾರ ಮಾರ್ಗದಲ್ಲಿ ವಿದ್ಯುತ್‌ ಮತ್ತು ವೋಲ್ಟೇಜ್‌ ಮಟ್ಟ, ಸಂಚಾರ ಸಮಯ, ಆಕ್ಸೆಲ್‌ಗಳ ಕುರಿತಾದ ಮಾಹಿತಿಯನ್ನು ನಿಗದಿತ ಸಮಯಾಂತರದಲ್ಲಿ ಸಂಗ್ರಹಿಸಿ ಕೇಂದ್ರೀಯ ವಲಯಕ್ಕೆ ರವಾನಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೂಚನೆಯಲ್ಲಿ ಉಂಟಾಗುವ ಅಡಚಣೆ, ದೋಷಗಳನ್ನು ಪತ್ತೆ ಮಾಡಿ ಮಾಹಿತಿ ರವಾನಿಸುವ ಈ ವ್ಯವಸ್ಥೆಯಿಂದಾಗಿ ರೈಲು ಅಪಘಾತ ಹಾಗೂ ವಿಳಂಬ ತಪ್ಪಿಸಬಹುದಾಗಿದೆ.

ಮಾಹಿತಿಯನ್ನು ಕೃತಕ ಬುದ್ಧಿಮತ್ತೆ ಪರಿಶೀಲಿಸಿ ಸಮಸ್ಯೆಗೆ ಸ್ವಯಂ ಚಾಲಿತ ಪರಿಹಾರ ರವಾನಿಸುತ್ತದೆ. ಬೆಂಗಳೂರು–ಮೈಸೂರು ಹಾಗೂ ಅಹಮದಾಬಾದ್‌–ವಡೋದರಾ ಮಾರ್ಗಗಳಲ್ಲಿ ಪ್ರಯೋಗಿಕವಾಗಿ ಈ ವ್ಯವಸ್ಥೆ ಅಳವಡಿಕೆಗೆ ರೈಲ್ವೆ ಇಲಾಖೆ ಮುಂದಾಗಿರುವುದಾಗಿ ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT