ಬಸವನಬಾಗೇವಾಡಿ

ಸ್ವತಂತ್ರ ಧರ್ಮ ಹೋರಾಟದಲ್ಲಿ ಭಾಗವಹಿಸದಂತೆ ಒತ್ತಡ

‘ಲಿಂಗಾಯತ ಧರ್ಮದ ಒಳ ಪಂಗಡಗಳು ಒಂದಾಗಿ ಹೋರಾಟ ಮಾಡುತ್ತಿರುವುದರಿಂದ ಈ ಹೋರಾಟಕ್ಕೆ ಹೆಚ್ಚಿನ ಬೆಂಬಲ ಸಿಗುತ್ತಿದೆ’

ಬಸವನಬಾಗೇವಾಡಿ: ‘ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಹಾಗೂ ಸಮಾವೇಶಗಳಲ್ಲಿ ಭಾಗವಹಿಸದಂತೆ ರಾಜ್ಯದ ಹಲವು ಮಠಾಧೀಶರು ನನ್ನ ಮೇಲೆ ಒತ್ತಡ ಹೇರಿದ್ದಾರೆ. ಭವಿಷ್ಯತ್ತಿನಲ್ಲಾಗುವ ಅನುಕೂಲಗಳನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಭಾಗವಹಿಸುತ್ತಿದ್ದೇನೆ’ ಎಂದು ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಡಿ. 10 ರಂದು ವಿಜಯಪುರದಲ್ಲಿ ನಡೆಯಲಿರುವ ಬೃಹತ್ ಸಮಾವೇಶದ ಅಂಗವಾಗಿ ಪಟ್ಟಣದ ವಿರಕ್ತಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ಜರುಗಿದ  ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಲಿಂಗಾಯತ ಸ್ವತಂತ್ರ ಧರ್ಮ ಸ್ಥಾಪನೆಯಾದಲ್ಲಿ 99 ಉಪಪಂಗಡಗಳಿಗೆ ಅಲ್ಪ ಸಂಖ್ಯಾಂತ ಸ್ಥಾನಮಾನ ದೊರೆಯುವುದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಯೋಜನೆಗಳು ಈ ಲಿಂಗಾಯತ ಧರ್ಮಕ್ಕೆ ಸಿಗಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಕಾಂಗ್ರೆಸ್‌ ಬ್ಲಾಕ್‌ ಘಟಕದ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ರಾಷ್ಟ್ರೀಯ ಬಸವ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ‘ಬಸವಣ್ಣನವರಿಂದ ಸ್ಥಾಪಿತವಾದ ಲಿಂಗಾಯತ ಧರ್ಮ ತನ್ನದೇ ಆದ ಸ್ಥಾನಮಾನ ಹೊಂದಬೇಕಾದರೆ ಸ್ವತಂತ್ರ ಧರ್ಮದ ಅವಶ್ಯಕತೆ ಇದೆ’ ಎಂದರು. ‘ಲಿಂಗಾಯತ ಧರ್ಮದ ಒಳ ಪಂಗಡಗಳು ಒಂದಾಗಿ ಹೋರಾಟ ಮಾಡುತ್ತಿರುವುದರಿಂದ ಈ ಹೋರಾಟಕ್ಕೆ ಹೆಚ್ಚಿನ ಬೆಂಬಲ ಸಿಗುತ್ತಿದೆ’ ಎಂದು ಹೇಳಿದರು.

ಸಭೆಯಲ್ಲಿ ಈರಣ್ಣ ಬಿರಾದಾರ, ವಿವೇಕಾನಂದ ಕಲ್ಯಾಣಶೆಟ್ಟಿ, ವೀರೇಶ ಕುಂಟೋಜಿ, ಡಾ. ಅಮರೇಶ ಮಿಣಜಗಿ, ಮಲ್ಲಿಕಾರ್ಜುನ ಹಳ್ಳಿ, ಕುಶಾಲ ಬೆಣ್ಣೂರ, ರವಿ ಬಿರಾದಾರ, ಡಾ.ಮಹಾಂತೇಶ ಮಡಿಕೇಶ್ವರ, ಕೆ.ಸಿ ಬಶೆಟ್ಟಿ, ಬಸವರಾಜ ಪಟ್ಟಣಶೆಟ್ಟಿ, ರವಿ ಚಿಕ್ಕೊಂಡ, ಸಂಗನಗೌಡ ಪಾಟೀಲ, ಸಂಗಮೇಶ ಓಲೇಕಾರ, ಪಿಂಟುಗೌಡ ಪಾಟೀಲ, ಎಚ್,ಎಸ್ ಬಿರಾದಾರ. ರಾಜು ಪಟ್ಟಣಶೆಟ್ಟಿ ಅರುಣ ಗೊಳಸಂಗಿ, ಅರವಿಂದ ಗೋಳಸಂಗಿ, ಗಿರಿಧರಗೌಡ ಪಾಟೀಲ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ವಿಜಯಪುರ
ಶಿವಸೇನೆಯಿಂದ ಕಣಕ್ಕೆ: ಪ್ರಮೋದ ಮುತಾಲಿಕ

‘ನಾಲ್ಕು ಕ್ಷೇತ್ರಗಳಿಂದ ನಾನು ಕಣಕ್ಕಿಳಿಯಬೇಕು ಎಂಬುದು ಕಾರ್ಯಕರ್ತರ ಒತ್ತಾಯವಾಗಿದೆ. ಆದರೆ ಈವರೆಗೂ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ನಿರ್ಧರಿಸಿಲ್ಲ. ನಾವೂ ಯಾರನ್ನೂ ಸೋಲಿಸುವುದಕ್ಕಾಗಲಿ, ಗೆಲ್ಲಿಸುವುದಕ್ಕಾಗಲಿ ಸ್ಪರ್ಧಿಸುತ್ತಿಲ್ಲ'. ...

18 Jan, 2018
ಇಳಿ ವಯಸ್ಸಲ್ಲೂ ಹರೆಯದ ಹುಮ್ಮಸ್ಸು...

ವಿಜಯಪುರ
ಇಳಿ ವಯಸ್ಸಲ್ಲೂ ಹರೆಯದ ಹುಮ್ಮಸ್ಸು...

18 Jan, 2018

ಸೊಲ್ಲಾಪುರ
‘ದಾಳಿಂಬೆ ಉತ್ಪಾದನೆ: ಸೊಲ್ಲಾಪುರ ಜಿಲ್ಲೆಗೆ ಅಗ್ರಸ್ಥಾನ’

'ಇದೇ ಮೊದಲ ಬಾರಿಗೆ ಜಿಲ್ಲೆಯಿಂದ 18 ಕಂಟೆನರ್ ದಾಳಿಂಬೆ ಯೂರೋಪ್‌ನಲ್ಲಿ ಮಾರಾಟ ಆಗಿರುವುದು ಖುಷಿಯ ವಿಚಾರ'

18 Jan, 2018
ಜವಾಬ್ದಾರಿಯಿಂದ ಕರ್ತವ್ಯ ನಿಭಾಯಿಸಿ

ವಿಜಯಪುರ
ಜವಾಬ್ದಾರಿಯಿಂದ ಕರ್ತವ್ಯ ನಿಭಾಯಿಸಿ

17 Jan, 2018

ಇಂಡಿ
ಭರವಸೆ ಈಡೆರಿಸಿದ್ದೇನೆ ಮತ್ತೆ ಆಶೀರ್ವದಿಸಿ

‘ಅಗರಖೇಡ ಗ್ರಾಮದ ಶಾದಿ ಮಹಲ್ ನಿರ್ಮಾಣಕ್ಕೆ ₹ 50 ಲಕ್ಷ, ಹಿರೇಬೇವನೂರ ಗ್ರಾಮದಲ್ಲಿ ಶಾದಿಮಹಲ್ ಕಟ್ಟಡಕ್ಕೆ ₹ 1 ಕೋಟಿ ಮಂಜೂರಾಗಿದೆ’

17 Jan, 2018