ಪೊಲೀಸರ ಮೇಲೆ ಹಲ್ಲೆ

ಕಲಬುರ್ಗಿ: ದರೋಡೆಕೋರನ ಮೇಲೆ ಗುಂಡಿನ ದಾಳಿ

ದರೋಡೆಕೋರರನ್ನು ಬಂಧಿಸಲು ಶುಕ್ರವಾರ ಬೆಳಿಗ್ಗೆ ತೆರಳಿದ್ದ ಫರಹತಾಬಾದ್ ಮತ್ತು ಕಲಬುರ್ಗಿ ಗ್ರಾಮೀಣ ಠಾಣೆ ಪೊಲೀಸರ ಮೇಲೆ ದರೋಡೆಕೋರರು ಇಟ್ಟಿಗೆ ಮತ್ತು ಮಾರಕಾಸ್ತ್ರಗಳಿಂದ ದಾಳಿ ಮಾಡಿದರು. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡಿನ ದಾಳಿ ಮಾಡಿದ್ದಾರೆ.

ಗಾಯಗೊಂಡಿರುವ ಫರಹತಾಬಾದ್ ಪೊಲೀಸ್ ಠಾಣೆಯ ಪಿಎಸ್ ಐ ವಾಹಿದ್ ಕೋತ್ವಾಲ್ ಅವರು ಕಲಬುರ್ಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದು.

ಕಲಬುರ್ಗಿ: ನಗರ ಹೊರವಲಯದ ಕೆಸರಟಗಿ ಬಳಿ ದರೋಡೆಕೋರನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

ಇರ್ಫಾನ್ (25)ನ ಕಾಲಿಗೆ ಗುಂಡು ತಗುಲಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ ತಡರಾತ್ರಿ ಇಲ್ಲಿನ ಬಿದ್ದಾಪುರ ಕ್ರಾಸ್ ಬಳಿ ಅಮರ್ ವೈನ್ಸ್ ವ್ಯವಸ್ಥಾಪಕನ ಮೇಲೆ ಹಲ್ಲೆ ಮಾಡಿ ನಗದು, ಮೊಬೈಲ್ ಮತ್ತು ಬೈಕ್ ಕಿತ್ತುಕೊಂಡಿದ್ದರು.

ಇರ್ಫಾನ್ ಜತೆ ಇನ್ನಿಬ್ಬರು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶುಕ್ರವಾರ ಬೆಳಿಗ್ಗೆ ದರೋಡೆಕೋರರನ್ನು ಬಂಧಿಸಲು ತೆರಳಿದ್ದ ಫರಹತಾಬಾದ್ ಮತ್ತು ಕಲಬುರ್ಗಿ ಗ್ರಾಮೀಣ ಠಾಣೆ ಪೊಲೀಸರ ಮೇಲೆ ದರೋಡೆಕೋರರು ಇಟ್ಟಿಗೆ ಮತ್ತು ಮಾರಕಾಸ್ತ್ರಗಳಿಂದ ದಾಳಿ ಮಾಡಿದರು. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡಿನ ದಾಳಿ ಮಾಡಿದ್ದಾರೆ.

ದರೋಡೆಕೋರರ ಹಲ್ಲೆಯಿಂದ ಪಿಎಸ್‌ಐ ವಾಹಿದ್ ಕೋತ್ವಾಲ್, ಕಾನ್ ಸ್ಟೆಬಲ್‌ಗಳಾದ ಕೇಶವ ಮತ್ತು ಬಾದಷಾ ಅವರಿಗೆ ಸಣ್ಣಪುಟ್ಟ ಗಾಯ ಗಳಾಗಿದ್ದು ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಈಶಾನ್ಯ ವಲಯ ಐಜಿಪಿ ಅಲೋಕಕುಮಾರ್, ಎಸ್ಪಿ ಎನ್.ಶಶಿಕುಮಾರ್ ಭೇಟಿ ನೀಡಿದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಅದ್ದೂರಿಯಾಗಿ ನೆರವೇರಿದ ಚಿಮ್ಮನಚೋಡದ ಸಂಗಮೇಶ್ವರ ರಥೋತ್ಸವ

ಕಲಬುರ್ಗಿ
ಅದ್ದೂರಿಯಾಗಿ ನೆರವೇರಿದ ಚಿಮ್ಮನಚೋಡದ ಸಂಗಮೇಶ್ವರ ರಥೋತ್ಸವ

23 Mar, 2018

ಆಳಂದ
ಸರ್ವರ ಕಲ್ಯಾಣ ಬಯಸಿದ ಶರಣರು

‘12ನೇ ಶತಮಾನದ ಬಸವಾದಿ ಶರಣರು ದೇವಸ್ಥಾನ, ಗುಡಿಗಳಿಗೆ ದೇವರನ್ನು ಸೀಮಿತಗೊಳಿಸದೆ ಜಗತ್ತಿನ ಸರ್ವ ಜೀವಸಂಕುಲದ ಕಲ್ಯಾಣವನ್ನು ಬಯಸಿ ಮಹಾತ್ಮರಾಗಿ ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ’ ಎಂದು ಕಲಬುರ್ಗಿಯ...

23 Mar, 2018

ಅಫಜಲಪುರ
ಸ್ವಾವಲಂಬನೆಗೆ ಪಶುಭಾಗ್ಯ ಆಧಾರ

‘ಸರ್ಕಾರ ಹಲವಾರು ಭಾಗ್ಯಗಳನ್ನು ಮಾಡುವುದರ ಜತೆಗೆ ಪಶುಭಾಗ್ಯವನ್ನು ಮಾಡಿದ್ದರಿಂದ ಬಡ ಹೆಣ್ಣು ಮಕ್ಕಳಿಗೆ ಸ್ವಾವಲಂಬನೆ ಜೀವನ ಸಾಗಿಸಲು ಅನುಕೂಲವಾಗಿದೆ’ ಎಂದು ರಾಜ್ಯ ಗೃಹ ಮಂಡಳಿ...

23 Mar, 2018

ಕಲಬುರ್ಗಿ
ಮಾನವ ಕುಲಕ್ಕೆ ದೇವರ ದಾಸಿಮಯ್ಯ ದಾರಿದೀಪ

12ನೇ ಶತಮಾನಕ್ಕಿಂತ ಪೂರ್ವದಲ್ಲಿ ಗಂಡು, ಹೆಣ್ಣು ಎಂಬ ತಾರತಮ್ಯ ಮಾಡದೆ ದೇವರ ದಾಸಿಮಯ್ಯ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ್ದರು ಎಂದು ವೈದ್ಯಕೀಯ ಶಿಕ್ಷಣ ಸಚಿವ...

23 Mar, 2018
ಸದನದಲ್ಲಿ ಮಕ್ಕಳಂತೆ ಟಿಪ್ಪಣಿ ಮಾಡಿಕೊಂಡಿದ್ದೆ

ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ್
ಸದನದಲ್ಲಿ ಮಕ್ಕಳಂತೆ ಟಿಪ್ಪಣಿ ಮಾಡಿಕೊಂಡಿದ್ದೆ

23 Mar, 2018