ಮುದ್ದೇಬಿಹಾಳ

ರಾಜ್ಯದಲ್ಲಿ ಏಜೆಂಟರ ಸರ್ಕಾರ

‘ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಅಬಕಾರಿ, ಸಕ್ಕರೆ ಲಾಬಿ ಮೇಲೆ ನಡೆಸುತ್ತಿದೆ, ಇದು ಏಜೆಂಟರ ಸರ್ಕಾರ.

ಮುದ್ದೇಬಿಹಾಳ: ‘ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಅಬಕಾರಿ, ಸಕ್ಕರೆ ಲಾಬಿ ಮೇಲೆ ನಡೆಸುತ್ತಿದೆ, ಇದು ಏಜೆಂಟರ ಸರ್ಕಾರ. ಈ ಸರ್ಕಾರಕ್ಕೆ ಕೇವಲ ನಾಲ್ಕು ತಿಂಗಳ ಅವಕಾಶ ಇದ್ದು, ಮುಂದಿನ ಬಾರಿ ನಮಗೆ ಅವಕಾಶ ನೀಡುವಂತೆ’ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಮನವಿ ಮಾಡಿದರು.

ಪಟ್ಟಣದ ವಿಬಿಸಿ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ಬಿಜೆಪಿ ಪರಿವರ್ತನಾ ಯಾತ್ರೆ ಅಂಗವಾಗಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಅಕ್ಕಿ, ಗೋದಿಗೆ ಹಣ ನೀಡ್ತಿರೋದು ಪ್ರಧಾನಿ ನರೇಂದ್ರ ಮೋದಿ, ಆದರೆ ಫೋಟೊ ಮಾತ್ರ ಸಿದ್ಧರಾಮಯ್ಯನದು’ ಎಂದು ಕಿಡಿಕಾರಿದರು.

‘ಪ್ರಜಾಸತ್ತೆಯಲ್ಲಿ ಮಾಲೀಕರು ನೀವು. ಜನಹಿತ ಮರೆತಿರುವ ರಾಜ್ಯ ಸರ್ಕಾರ ಹಗಲು ದರೋಡೆ ಮಾಡುತ್ತಿದೆ, ಅಧಿಕಾರ ಮುಗಿಯುತ್ತ ಬಂದಿದ್ದರೂ ಇನ್ನೂ ಅನೇಕ ಭರವಸೆಗಳ ಭಾಗ್ಯವನ್ನೇ ಮಾತನಾಡುತ್ತಿದೆ. ಸಿಒಡಿ, ಎಸಿಬಿ ಯಿಂದ ಆರೋಪಮುಕ್ತ ಎಂದು ಕರೆಸಿಕೊಳ್ಳುತ್ತಿರುವ ಎಲ್ಲರನ್ನೂ ಮರಳಿ ತನಿಖೆಗೆ ಒಳಪಡಿಸಲಾಗುವುದು’ ಎಂದರು.

‘ಮುದ್ದೇಬಿಹಾಳದಲ್ಲಿ ಯಾವುದೇ ಕಾಮಗಾರಿ ಮಾಡದ ಕಾಂಗ್ರೆಸ್ ಸರ್ಕಾರ, ನಾನು ಅಧಿಕಾರದಲ್ಲಿದ್ದಾಗ ಮಾಡಿದ ಯೋಜನೆಗಳನ್ನೇ ಅನುಷ್ಠಾನಕ್ಕೆ ತರುತ್ತಿದೆ. ನೀರಾವರಿ ಸಚಿವ ಎಂ.ಬಿ.ಪಾಟೀಲ ₹ 50 ಸಾವಿರ ಕೋಟಿ ಖರ್ಚು ಮಾಡಬೇಕಿತ್ತು, ಮಾಡಿದ್ದು ಕೇವಲ ₹ 6,400 ಕೋಟಿ. ಇವರ ಸಾಧನೆ ಶೂನ್ಯ. ಮಾತು, ಮಾತಿಗೆ ದಲಿತರ ಪರ ಕಾಳಜಿ ತೋರುವ ಕಾಂಗ್ರೆಸ್ ಡಾ.ಅಂಬೇಡ್ಕರ್ ಅವರ ಶವ ಶಂಸ್ಕಾರಕ್ಕೆ ರಾಜ್‌ಘಾಟ್‌ನಲ್ಲಿ ಸ್ಥಳ ನೀಡದೇ ಅವಮಾನ ಮಾಡಿತು. ಅವರಿಗೆ ದಲಿತರು ಮತ ನೀಡಬೇಡಿ’ ಎಂದರು.

‘ಈ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯನ್ನು ನಾನಾಗಲಿ, ಅಮೀತ ಷಾ ಮಾಡುವುದಿಲ್ಲ. ಅದನ್ನು ಎರಡು ಬಾರಿ ಸಮೀಕ್ಷೆ ನಡೆಸಿ ಇಲ್ಲಿಯ ಜನರ ಅಭಿಪ್ರಾಯವನ್ನೇ ಪರಿಗಣಿಸಲಾಗುವುದು’ ಎಂದು ಹೇಳಿದರು.

ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಶಾಸಕ ಅರವಿಂದ ಲಿಂಬಾವಳಿ ಮಾತನಾಡಿದರು. ಆರ್.ಎಸ್.ಪಾಟೀಲ ಕೂಚಬಾಳ ಸ್ವಾಗತಿಸಿದರು. ಶಂಕರಗೌಡ ಹಿರೇಗೌಡರ ನಿರೂಪಿಸಿದರು. ಮಂಗಳಾದೇವಿ ಬಿರಾದಾರ, ಎಂ.ಡಿ.ಕುಂಬಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ವಿಜಯಪುರ
ಹೊಸ ಮುಖ,ಯುವಕರಿಗೆ ಮಣೆ

ಬಿಜೆಪಿ ಶುಕ್ರವಾರ ಬಿಡುಗಡೆ ಮಾಡಿದ 3ನೇ ಪಟ್ಟಿಯಲ್ಲಿ ಬಸವನ ಬಾಗೇವಾಡಿ, ನಾಗಠಾಣ ಮೀಸಲು ಮತಕ್ಷೇತ್ರಗಳ ಹುರಿಯಾಳು ಘೋಷಿ ಸಿದ್ದು, ಯುವಕರಿಗೆ ಮಣೆ ಹಾಕಿದೆ.

21 Apr, 2018

ವಿಜಯಪುರ
ಶುಭ ಶುಕ್ರವಾರ ನಾಮಪತ್ರ ಸಲ್ಲಿಕೆ ಭರಾಟೆ

ಅಪಾರ ಸಂಖ್ಯೆಯ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಪ್ರತ್ಯೇಕ ಮೆರವಣಿಗೆ ಮೂಲಕ ತೆರಳಿದ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ, ಬಬಲೇಶ್ವರ ವಿಧಾನಸಭಾ...

21 Apr, 2018

ವಿಜಯಪುರ
‘ಧಮ್‌’ ಇಲ್ಲದ್ದಕ್ಕೆ ಸಿ.ಎಂ ಸ್ಪರ್ಧೆಗೆ ಒತ್ತಾಯ: ಯತ್ನಾಳ

‘ಉತ್ತರ ಕರ್ನಾಟಕದ ಕಾಂಗ್ರೆಸ್ಸಿಗರಿಗೆ ಸ್ವಂತ ಬಲದ ಮೇಲೆ ಗೆಲ್ಲುವ ‘ಧಮ್‌’ ಇಲ್ಲ; ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಾದಾಮಿಯಿಂದ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ’ ಎಂದು ವಿಜಯಪುರ...

21 Apr, 2018
ದೇವರಹಿಪ್ಪರಗಿ: ಬೆಜೆಪಿ ಯುವ ಮೋರ್ಚಾದಿಂದ ಬೈಕ್ ರ‍್ಯಾಲಿ

ದೇವರಹಿಪ್ಪರಗಿ
ದೇವರಹಿಪ್ಪರಗಿ: ಬೆಜೆಪಿ ಯುವ ಮೋರ್ಚಾದಿಂದ ಬೈಕ್ ರ‍್ಯಾಲಿ

20 Apr, 2018

ವಿಜಯಪುರ
ಕರ್ತವ್ಯಲೋಪ ಕಂಡು ಬಂದರೆ ಅಮಾನತ್ತು ಶಿಕ್ಷೆ

ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ವಿವಿಧ ಕೊಳವೆ ಬಾವಿಗಳ ಸುಸ್ಥಿತಿ ನಿರ್ವಹಣೆಯ ಜವಾಬ್ದಾರಿ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಿಡಿಒ ಗಳದ್ದಾಗಿದ್ದು, ಜವಾಬ್ದಾರಿಯಿಂದ...

20 Apr, 2018