ರೋಣ

ಅಭಿವೃದ್ಧಿ ಕಡೆಗಣಿಸಿದ ಬಿಜೆಪಿ, ಕಾಂಗ್ರೆಸ್

ಜ್ಞಾನದೇವ ದೊಡ್ಡಮೇಟಿ ಅವರ ನಂತರ ಹಲವರು ರೋಣ ಮತಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ಯಾರೊಬ್ಬರೂ ಬಡವರ, ದೀನದಲಿತರ ಪರವಾಗಿ ಕೆಲಸ ಮಾಡಿಲ್ಲ.

ರೋಣ: ಜ್ಞಾನದೇವ ದೊಡ್ಡಮೇಟಿ ಅವರ ನಂತರ ಹಲವರು ರೋಣ ಮತಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ಯಾರೊಬ್ಬರೂ ಬಡವರ, ದೀನದಲಿತರ ಪರವಾಗಿ ಕೆಲಸ ಮಾಡಿಲ್ಲ. ರೈತರ ಕಷ್ಟಗಳಿಗೆ ಸ್ಪಂದಿಸಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಬುಧವಾರ ‘ಮನೆ ಮನೆಗೆ ಕುಮಾರಣ್ಣ’ ಮತ್ತು ‘ಕುಮಾರಪರ್ವ–2018’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 10 ವರ್ಷಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಸರ್ಕಾರಗಳು ಆಡಳಿತ ನಡೆಸಿದ್ದು, ರೈತರ ಆತ್ಮಹತ್ಯೆಗಳು ನಿಂತಿಲ್ಲ. ರೈತರು ಬೆಳೆದ ಬೆಳೆಗೆ ಸಮರ್ಪಕ ಬೆಂಬಲ ಬೆಲೆ ಸಿಗದೇ ರೈತ ಸಮುದಾಯ ಸಾಲದ ಸುಳಿಯಲ್ಲಿ ಸಿಲುಕಿದೆ ಎಂದು ದೂರಿದರು.

ಡಿ. 31ರಂದು ಅಭ್ಯರ್ಥಿ ಆಯ್ಕೆ: ಜೆಡಿಎಸ್ ವರಿಷ್ಠ ದೇವೆಗೌಡ ಹಾಗೂ ಕುಮಾರಸ್ವಾಮಿ ಸೇರಿ ಡಿ. 31ರಂದು ರೋಣ ಮತಕ್ಷೇತ್ರದ ಅಭ್ಯರ್ಥಿ ಯಾರು ಎಂದು ಪ್ರಕಟಿಸಲಿದ್ದಾರೆ. ರವೀಂದ್ರನಾಥ ದೊಡ್ಡಮೇಟಿ, ಮಕ್ತುಂಸಾಬ್ ಸಾಗರ, ನಿಂಗನಗೌಡ ಪಾಟೀಲ, ಎಚ್.ಎಸ್.ಸೊಂಪುರ, ಮುತ್ತಣ್ಣ ಮ್ಯಾಗೇರಿ ಸೇರಿ ಐದು ಜನ ಆಕಾಂಕ್ಷಿಗಳು ಇದ್ದು, ಇದರಲ್ಲಿ ಒಬ್ಬರನ್ನು ಪಕ್ಷ ಅಧಿಕೃತವಾಗಿ ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತದೆ. ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟಿಸಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಮಕ್ತುಂಸಾಬ್ ಸಾಗರ ಮಾತನಾಡಿ, ‘ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಎಲ್ಲ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ’ ಎಂದರು.

ಮುಖಂಡ ಎಚ್.ಎಸ್.ಸೊಂಪುರ ಮಾತನಾಡಿ, ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವರಿಂದ ರೋಣ ಮತಕ್ಷೇತ್ರದ ಅಭಿವೃದ್ಧಿ ಅಸಾಧ್ಯ’ ಎಂದರು ರವೀಂದ್ರ ದೊಡ್ಡಮೇಟಿ, ಶ್ರೀಪಾದಪ್ಪ ಹರಕೇರಿ, ನಿಂಗನಗೌಡ ಪಾಟೀಲ, ಶೇಕಮ್ಮ ಹೊಸಮನಿ, ಬಸವರಾಜ ಮಾಳೋತ್ತರ, ಗುರುರಾಜ ಕುಲಕರ್ಣಿ, ಎಂ.ಎಸ್.ಪಾಟೀಲ, ರಮೇಶ ಕಲಬುರ್ಗಿ, ಎಸ್. ನಾರಾಯಣಸ್ವಾಮಿ, ಉಮೇಶ ಮಲ್ಲಾಪುರ, ಷಣ್ಮುಖಪ್ಪ ಕಮ್ಮಾರ, ಸಂಜಯ ಜೋಶಿ, ಭಾಗ್ಯಶ್ರೀ ಲಮಾಣಿ, ಅಂಬಿಕಾ ಕಬಾಡಿ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಹಳ್ಳಿ ಕುರಿತು ತಾತ್ಸಾರ ಸಲ್ಲ

ಗದಗ
ಹಳ್ಳಿ ಕುರಿತು ತಾತ್ಸಾರ ಸಲ್ಲ

21 Mar, 2018

ನರಗುಂದ
ರೈತರ ಹಿತ ಕಡೆಗಣನೆ ಸಲ್ಲ

‘ಜನಪ್ರತಿನಿಧಿಗಳು ರೈತರ ಸಮಸ್ಯೆ ಕಡೆಗಣಿಸಿದರೆ ಪರಿಣಾಮ ಎದುರಿಸಬೇಕಾದೀತು’ ಎಂದು ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರ ಬಸಪ್ಪ ಹೂಗಾರ ಎಚ್ಚರಿಕೆ ನೀಡಿದರು.

21 Mar, 2018

ಲಕ್ಷ್ಮೇಶ್ವರ
ನಗರೋತ್ಥಾನ ಕಾಮಗಾರಿಗೆ ಚಾಲನೆ

ಪುರಸಭೆ ಹತ್ತಿರ ಸೋಮವಾರ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಮೂರನೇ ಹಂತದ ನಗರೋತ್ಥಾನ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

21 Mar, 2018

ಗಜೇಂದ್ರಗಡ
ಜನಪರ ಆಡಳಿತ ನೀಡಿರುವ ರಾಜ್ಯ ಸರ್ಕಾರ: ಪಾಟೀಲ

ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕಾಮಗಾರಿಗಳನ್ನು ಮೆಚ್ಚಿ ನೂರಾರು ಜನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.

21 Mar, 2018
ಹಸಿರಿನಿಂದ ಕಂಗೊಳಿಸುವ ಶಾಲಾ ಆವರಣ

ಮುಂಡರಗಿ
ಹಸಿರಿನಿಂದ ಕಂಗೊಳಿಸುವ ಶಾಲಾ ಆವರಣ

20 Mar, 2018