ಮಾಲೂರು

ನೆಲ ಕಚ್ಚಿದ ರಾಗಿ ಬೆಳೆ: ಸಂಕಷ್ಟದಲ್ಲಿ ರೈತರು

‘ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಕಟಾವಿಗೆ ಬಂದು ನಿಂತಿದ್ದ ರಾಗಿ ಬೆಳೆ ನೆಲ ಕಚ್ಚಿದೆ.

ತಾಲ್ಲೂಕಿನ ಲಕ್ಕೂರು ಹೋಬಳಿಯ ಜಯಮಂಗಲ ಗ್ರಾಮದ ರೈತ ನಂಜುಂಡಪ್ಪ ತಮ್ಮ ಹೊಲದಲ್ಲಿ ಬೆಳೆದಿರುವ ರಾಗಿ ಬೆಳೆ ಕಟಾವಿಗೆ ಬಂದಿರುವುದು

ಮಾಲೂರು: ಎರಡ್ಮೂರು ದಿನಗಳಿಂದ ಒಖಿ ಚಂಡಮಾರುತದಿಂದ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ರಾಗಿ ಬೆಳೆ ನೆಲ ಕಚ್ಚಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲ್ಲೂಕಿನ ಕಸಬಾ ಲಕ್ಕೂರು, ಟೇಕಲ್ ಮತ್ತು ಮಾಸ್ತಿ ಹೋಬಳಿಗಳಲ್ಲಿ ಈ ವರ್ಷ ರಾಗಿ ಬೆಳೆ ಅತ್ಯುತ್ತಮವಾಗಿತ್ತು. ಬಂಪರ್ ಫಸಲಿನ ರೈತರ ಕನಸನ್ನು ಮಳೆ ಹಾಳು ಮಾಡಿದೆ.

ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ರಾಗಿ 9,600, ಭತ್ತ 30, ಮೇವಿನ ಜೋಳ 80, ತೃಣ ಧಾನ್ಯ 5, ತೊಗರಿ 230, ಅಲಸಂದೆ 165, ಅವರೆ 955, ನೆಲಗಡಲೆ 200, ಎಳ್ಳು 260, ಹುಚ್ಚೆಳ್ಳು 10, ಸಾಸುವೆ 35, ಹರಳು 2 ಹೆಕ್ಟೇರ್ ಸೇರಿದಂತೆ 11,572 ಹೆಕ್ಟೇರ್ ಭೂ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ.

ತಾಲ್ಲೂಕಿನಾದ್ಯಂತ ರೈತರು ಬಿತ್ತನೆ ಮಾಡಿರುವ ರಾಗಿ ಬೆಳೆಯಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ಕಟಾವು ಮಾಡಲಾಗಿದೆ. ಉಳಿದ ಭಾಗಗಳಲ್ಲಿ ರಾಗಿ ಬೆಳೆ ಕಟಾವಿಗೆ ಸಿದ್ಧಗೊಂಡಿತ್ತು. ಆದರೆ ಸುರಿಯುತ್ತಿರುವ ಮಳೆಯು ರೈತರ ಆಸೆಗೆ ತಣ್ಣಿರು ಎರಚಿದೆ.

‘ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಕಟಾವಿಗೆ ಬಂದು ನಿಂತಿದ್ದ ರಾಗಿ ಬೆಳೆ ನೆಲ ಕಚ್ಚಿದೆ. ತಾಲ್ಲೂಕಿನಲ್ಲಿ ಶೇ 30ರಷ್ಟು ಕಟಾವು ಕಾರ್ಯ ನಡೆದಿದ್ದು, ಈಗೆ ಮುಂದುವರೆದಲ್ಲಿ ಕಟಾವು ಮಾಡಲಾಗಿದ್ದ ರಾಗಿ ತೆನೆಗಳು ಸಹ ಬೂಸ್ಟ್ ಇಡಿದು ಕಪ್ಪು ಬಣ್ಣಕ್ಕೆ ತಿರುಗುವ ಸಾಧ್ಯತೆ ಇದೆ’ ಎಂದು ಕೃಷಿ ಅಧಿಕಾರಿ ಮುನಿರಾಜು ಹೇಳುತ್ತಾರೆ.

‘ಜಡಿ ಮಳೆಯಿಂದ ಜಮೀನಿನಲ್ಲಿ ಬೆಳೆದಿದ್ದ ರಾಗಿ ಬೆಳೆ ಸಂರ್ಪೂಣವಾಗಿ ನೆಲಕಚ್ಚಿದೆ. ಸರ್ಕಾರ ರಾಗಿ ಬೆಳೆಗೆ ಪರಿಹಾರ ನೀಡಬೇಕು’ ಎಂದು ಜಯಮಂಗಲ ಗ್ರಾಮದ ರೈತ ನಂಜುಂಡಪ್ಪ ಒತ್ತಾಯಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಶ್ರೀನಿವಾಸಪುರ
ಕಾಂಗ್ರೆಸ್‌ಗೆ ದಲಿತರ ಬೆಂಬಲ ಹೇಳಿಕೆ ಸರಿಯಲ್ಲ

ಈಚೆಗೆ ಶ್ರೀನಿವಾಸಪುರದಲ್ಲಿ ಏರ್ಪಡಿಸಿದ್ದ ದಲಿತಪರ ಸಂಘಟನೆಗಳ ಒಕ್ಕೂಟದ ಹಾಗೂ ದಲಿತ ಸಮುದಾಯದ ಮುಖಂಡರ ಸಭೆಯಲ್ಲಿ ಹಿರಿಯ ದಲಿತ ಮುಖಂಡ ಸಿ.ಮುನಿಯಪ್ಪ ಸರ್ವಾನುಮತದಿಂದ ಕಾಂಗ್ರೆಸ್‌ಗೆ ಏಕಪಕ್ಷೀಯವಾಗಿ...

25 Apr, 2018
ವಿಧಾನಸಭಾ ಚುನಾವಣೆ: ನಾಮಪತ್ರ ಸಲ್ಲಿಕೆಗೆ ತೆರೆ

ಕೋಲಾರ
ವಿಧಾನಸಭಾ ಚುನಾವಣೆ: ನಾಮಪತ್ರ ಸಲ್ಲಿಕೆಗೆ ತೆರೆ

25 Apr, 2018
ಕೊತ್ತೂರು ಕೋಲಾರಕ್ಕೆ: ಮುಳಬಾಗಿಲಿಗೆ ಮುನಿಯಪ್ಪ ಪುತ್ರಿ

ಕೋಲಾರ
ಕೊತ್ತೂರು ಕೋಲಾರಕ್ಕೆ: ಮುಳಬಾಗಿಲಿಗೆ ಮುನಿಯಪ್ಪ ಪುತ್ರಿ

25 Apr, 2018
ಶಾಶ್ವತ ನೀರಾವರಿ ಯೋಜನೆ ಮರೀಚಿಕೆ

ಬಂಗಾರಪೇಟೆ
ಶಾಶ್ವತ ನೀರಾವರಿ ಯೋಜನೆ ಮರೀಚಿಕೆ

24 Apr, 2018

ಕೋಲಾರ
ಜಿಲ್ಲೆಯಲ್ಲಿ ಉಮೇದುವಾರಿಕೆ ಸಲ್ಲಿಕೆ ಅಬ್ಬರ

ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಒಂದು ದಿನವಷ್ಟೇ ಬಾಕಿ ಇದ್ದು, ಜಿಲ್ಲೆಯಾದ್ಯಂತ ಸೋಮವಾರ ಉಮೇದುವಾರಿಕೆ ಸಲ್ಲಿಕೆ ಅಬ್ಬರ ಜೋರಾಗಿತ್ತು.

24 Apr, 2018