‘10ಕ್ಕಿಂತ ಕಡಿಮೆ ಸ್ಥಾನ ಪಡೆದರೆ ರಾಜಕೀಯ ಬಿಡುವೆ’

ಯಡಿಯೂರಪ್ಪಗೆ ಮಾನಸಿಕ ಚಿಕಿತ್ಸೆ ಅಗತ್ಯ: ಸಚಿವ ರಮೇಶ ಜಾರಕಿಹೊಳಿ

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಮ್ಮ ಪಕ್ಷ 10ಕ್ಕಿಂತ ಕಡಿಮೆ ಸ್ಥಾನ ಪಡೆದಲ್ಲಿ ರಾಜಕೀಯವನ್ನೇ ಬಿಡುತ್ತೇನೆ’ ಎಂದು ಸಹಕಾರ ಸಚಿವ ರಮೇಶ ಜಾರಕಿಹೊಳಿ ಸವಾಲು ಹಾಕಿದರು.

ಯಡಿಯೂರಪ್ಪಗೆ ಮಾನಸಿಕ ಚಿಕಿತ್ಸೆ ಅಗತ್ಯ: ಸಚಿವ ರಮೇಶ ಜಾರಕಿಹೊಳಿ

ಬೆಳಗಾವಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂದು ಸಹಕಾರ ಸಚಿವ ರಮೇಶ ಜಾರಕಿಹೊಳಿ ಟೀಕಿಸಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕೈಗೊಂಡಿರುವ ಪರಿವರ್ತನಾ ಯಾತ್ರೆಯುದ್ದಕ್ಕೂ ಅವರು ಗಲಾಟೆ ಮಾಡಿಕೊಳ್ಳುತ್ತಿದ್ದಾರೆ. ಹತಾಶಗೊಂಡಿದ್ದಾರೆ ಎಂದರು.

ಎರಡು ಮೂರು ಕಡೆ ಬಿಟ್ಟರೆ ಉಳಿದೆಡೆ ಪರಿವರ್ತನಾ ಯಾತ್ರೆ ವಿಫಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಕೀಳಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಜಾತಿ ರಾಜಕಾರಣ, ಜಾತಿ ಸಂಘರ್ಷ ನಡೆಯುವುದಿಲ್ಲ. ಆದರೂ ಬಿಜೆಪಿಯವರು ಜಾತಿ ಸಂಘರ್ಷ ಮಾಡುತ್ತಿದ್ದಾರೆ. ಅವರ ಬೇಳೆ ಮುಂದಿನ ಚುನಾವಣೆಯಲ್ಲಿ ಬೇಯುವುದಿಲ್ಲ ಎಂದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವೇ ಬರುತ್ತದೆ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಮ್ಮ ಪಕ್ಷ 10ಕ್ಕಿಂತ ಕಡಿಮೆ ಸ್ಥಾನ ಪಡೆದಲ್ಲಿ ರಾಜಕೀಯವನ್ನೇ ಬಿಡುತ್ತೇನೆ ಎಂದು ಸವಾಲು ಹಾಕಿದರು.

Comments
ಈ ವಿಭಾಗದಿಂದ ಇನ್ನಷ್ಟು
ಉದ್ಯೋಗ ಸಿಕ್ಕರೂ ಮಾಡುವ ತಾಕತ್ತಿಲ್ಲ

ಬೆಳಗಾವಿ
ಉದ್ಯೋಗ ಸಿಕ್ಕರೂ ಮಾಡುವ ತಾಕತ್ತಿಲ್ಲ

17 Jan, 2018
ಗಮನ ಸೆಳೆದ ಬಲಭೀಮರ ಮೇಲಾಟ

ಮೋಳೆ
ಗಮನ ಸೆಳೆದ ಬಲಭೀಮರ ಮೇಲಾಟ

17 Jan, 2018
‘ಪುಣ್ಯಸ್ನಾನ ಮಾಡಿ ಶಿವಪಾರ್ವತಿ ದರ್ಶನ

ಬೆಳಗಾವಿ
‘ಪುಣ್ಯಸ್ನಾನ ಮಾಡಿ ಶಿವಪಾರ್ವತಿ ದರ್ಶನ

16 Jan, 2018

ಬೈಲಹೊಂಗಲ
‘ಭೋವಿ ಸಮಾಜ ಶಿಕ್ಷಣಕ್ಕೆ ಒತ್ತು ನೀಡಲಿ’

‘ಸಮಾಜ ಬಾಂಧವರು ಸ್ವಉದ್ಯೋಗ ಮಾಡಿ ಜೀವನ ರೂಪಿಸಿಕೊಳ್ಳಬೇಕು. ಸರ್ಕಾರದ ಸವಲತ್ತುಗಳನ್ನು ಪಡೆದು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು.

16 Jan, 2018
ಗೋವಾ ಸಚಿವ ವಿನೋದ ಪಾಲ್ಯೇಕರ್‌ ಹೇಳಿಕೆ ಖಂಡಿಸಿ ಕಣಕುಂಬಿ ಬಳಿ ರಸ್ತೆತಡೆ ಪ್ರತಿಭಟನೆ

‘ಮಹದಾಯಿ ನೀರು ಬಿಟ್ಟರೆ ಶಾಂತಿ; ಇಲ್ಲವಾದರೆ ಕ್ರಾಂತಿ’ ಘೋಷಣೆ
ಗೋವಾ ಸಚಿವ ವಿನೋದ ಪಾಲ್ಯೇಕರ್‌ ಹೇಳಿಕೆ ಖಂಡಿಸಿ ಕಣಕುಂಬಿ ಬಳಿ ರಸ್ತೆತಡೆ ಪ್ರತಿಭಟನೆ

15 Jan, 2018