ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂ

ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಐವರ ಹೆಸರು ಶಿಫಾರಸು

ಕರ್ನಾಟಕ ಹೈಕೋರ್ಟ್‌ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂ ಐವರು ವಕೀಲರ ಹೆಸರನ್ನು ಶಿಫಾರಸು ಮಾಡಿದೆ.

ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಐವರ ಹೆಸರು ಶಿಫಾರಸು

ನವದೆಹಲಿ: ಕರ್ನಾಟಕ ಹೈಕೋರ್ಟ್‌ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂ ಐವರು ವಕೀಲರ ಹೆಸರನ್ನು ಶಿಫಾರಸು ಮಾಡಿದೆ.

ಈ ಹೆಸರುಗಳಿಗೆ ಕರ್ನಾಟಕದ ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಸಮ್ಮತಿಸಿಲ್ಲ. ಆದರೆ ಕೊಲಿಜಿಯಂ ಐವರು ವಕೀಲರ ಹೆಸರನ್ನು ಅಂತಿಮಗೊಳಿಸಿದೆ.

ಉನ್ನತ ನ್ಯಾಯಾಲಯಗಳ ನ್ಯಾಯಮೂರ್ತಿಗಳ ಹುದ್ದೆಗೆ ಅರ್ಹರ ಹೆಸರನ್ನು ಸುಪ್ರೀಂ ಕೋರ್ಟ್‌ನ ಸಮಿತಿ (ಕೊಲಿಜಿಯಂ) ಶಿಫಾರಸು ಮಾಡುತ್ತದೆ.

ಕರ್ನಾಟಕ ಹೈಕೋರ್ಟ್ ಒಟ್ಟು ಹತ್ತು ವಕೀಲರ ಹೆಸರನ್ನು ಜನವರಿ 13ರಂದು ಕೊಲಿಜಿಯಂಗೆ ಕಳುಹಿಸಿತ್ತು. ಆ ಪೈಕಿ ಐವರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡಿದೆ.

ನಾಲ್ವರ ಹೆಸರನ್ನು ಪುನರ್‌ ಪರಿಶೀಲನೆಗಾಗಿ ಸುಪ್ರೀಂ ಕೋರ್ಟ್ ವಾಪಸ್‌ ಕಳುಹಿಸಿದೆ.  ಹುದ್ದೆಗೆ ಯೋಗ್ಯರಲ್ಲ ಎಂಬ ಕಾರಣ ನೀಡಿ ಕಾಸರವಳ್ಳಿ ಚೈತನ್ಯ ಕೇಶವಮೂರ್ತಿ ಅವರ ಹೆಸರನ್ನು ತಿರಸ್ಕೃರಿಸಲಾಗಿದೆ.

ಕೇಂದ್ರ ಸರ್ಕಾರ ಅನುಮೋದನೆ ನೀಡಿದರೆ, ಈ ಐವರನ್ನು ಹೆಚ್ಚುವರಿ ನ್ಯಾಯಮೂರ್ತಿಗಳ ಹುದ್ದೆಗೆ ನೇಮಕ ಮಾಡಿ ರಾಷ್ಟ್ರಪತಿ ಕಚೇರಿ ಆದೇಶ ಹೊರಡಿಸಲಿದೆ.

ಹೈಕೋರ್ಟ್ ಕೊಲಿಜಿಯಂ ಅಂತಿಮಗೊಳಿಸಿದ್ದ ಹತ್ತು ವಕೀಲರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮ್ಮತಿ ಇರಲಿಲ್ಲ. ರಾಜ್ಯಪಾಲರು, ಯಾರ ಹೆಸರನ್ನೂ ಪ್ರಸ್ತಾಪಿಸದೆ ಕೆಲವರ ಅರ್ಹತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.

‘ಆಯ್ಕೆಯಲ್ಲಿ ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ಸಿಕ್ಕಿಲ್ಲ’ ಎಂದು ವಕೀಲರ ಸಂಘ, ಸಂಸ್ಥೆಗಳು ತಕರಾರು ಎತ್ತಿದ್ದವು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದವು.

ರಾಜ್ಯಪಾಲರ ಅಭಿಪ್ರಾಯವನ್ನು ಪರಿಗಣಿಸಿರುವ ಕೊಲಿಜಿಯಂ, ಅಭ್ಯರ್ಥಿಗಳ ಹಿನ್ನೆಲೆ, ಯೋಗ್ಯತೆ, ನಡತೆ, ಕಾರ್ಯಕ್ಷಮತೆ ಮಾನದಂಡಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವಷ್ಟೇ ನೇಮಕಾತಿ ಮಾಡಲಾಗುವುದು ಎಂದು ಹೇಳಿದೆ.

ಅಭ್ಯರ್ಥಿಗಳ ಹಿನ್ನೆಲೆಯ ಬಗ್ಗೆ ಗುಪ್ತಚರ ಇಲಾಖೆ ವರದಿಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕರ್ನಾಟಕ ಹೈಕೋರ್ಟ್ ವಿದ್ಯಮಾನಗಳ ಬಗ್ಗೆ ನಿಕಟ ಮಾಹಿತಿ ಹೊಂದಿರುವ ನ್ಯಾಯಮುರ್ತಿಗಳಿಂದಲೂ ಮಾಹಿತಿ ಕಲೆ ಹಾಕಲಾಗುತ್ತದೆ.

* ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ನರೇಂದ್ರ ಜಿ ಅವರನ್ನು ಕಾಯಂ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೊಲಿಜಿಯಂ ಶಿಫಾರಸು ಮಾಡಿದೆ.

ಶಿಫಾರಸುಗೊಂಡ ಐವರು ವಕೀಲರು


ದೀಕ್ಷಿತ್‌ ಕೃಷ್ಣ ಶ್ರೀಪಾದ್‌

ಶಂಕರ್‌ ಗಣಪತಿ ಪಂಡಿತ್‌

ರಾಮಕೃಷ್ಣ ದೇವದಾಸ್‌

ಭೂತನಹೊಸೂರು ಮಲ್ಲಿಕಾರ್ಜುನ ಶ್ಯಾಮಪ್ರಸಾದ್‌

ಸಿದ್ಧಪ್ಪ ಸುನೀಲ್‌ ದತ್‌ ಯಾದವ್‌

 

ಮರುಪರಿಶೀಲನೆಗೆ ಕಳಿಸಿದ ಹೆಸರು

ಗುರುದಾಸ್‌ ಶ್ಯಾಮರಾವ್‌ ಕಣ್ಣೂರು

ಕೂಳೂರು ಅರವಿಂದ್‌ ಕಾಮತ್‌

ಕಾನಕಟ್ಟೆ ನಾರಾಯಣ (ಕೆ.ಎನ್‌.) ಫಣೀಂದ್ರ

ಮಹೇಶನ್‌ ನಾಗಪ್ರಸನ್ನ

 

ತಿರಸ್ಕೃತಗೊಂಡ ಹೆಸರು

ಕಾಸರವಳ್ಳಿ ಚೈತನ್ಯ ಕೇಶವಮೂರ್ತಿ

Comments
ಈ ವಿಭಾಗದಿಂದ ಇನ್ನಷ್ಟು
ವಿಮಾನಕ್ಕೆ ಬಡಿದ ಹಕ್ಕಿ: ತಪ್ಪಿದ ದುರಂತ

ವಿಮಾನಯಾನ
ವಿಮಾನಕ್ಕೆ ಬಡಿದ ಹಕ್ಕಿ: ತಪ್ಪಿದ ದುರಂತ

21 Jan, 2018
ಪ್ಲಾಸ್ಟಿಕ್‌ ಕಾರ್ಖಾನೆಯಲ್ಲಿ ಅಗ್ನಿ ಅವಘಡ: 17 ಮಂದಿ ಸಾವು

ದೆಹಲಿಯ ಬವಾನಾ ಕೈಗಾರಿಕಾ ಪ್ರದೇಶ
ಪ್ಲಾಸ್ಟಿಕ್‌ ಕಾರ್ಖಾನೆಯಲ್ಲಿ ಅಗ್ನಿ ಅವಘಡ: 17 ಮಂದಿ ಸಾವು

20 Jan, 2018
ಲೋಯ ಸಾವಿನ ಪ್ರಕರಣ: ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವ ಪೀಠದಿಂದ ಅರ್ಜಿ ವಿಚಾರಣೆ

ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ
ಲೋಯ ಸಾವಿನ ಪ್ರಕರಣ: ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವ ಪೀಠದಿಂದ ಅರ್ಜಿ ವಿಚಾರಣೆ

20 Jan, 2018
ಹಲ್ವಾ ಹಂಚಿ ಕೇಂದ್ರ ಬಜೆಟ್‌ ದಾಖಲೆ ಮುದ್ರಣ ಕಾರ್ಯಕ್ಕೆ ಚಾಲನೆ ನೀಡಿದ ಅರುಣ್‌ ಜೇಟ್ಲಿ

2018–19ನೇ ಸಾಲು
ಹಲ್ವಾ ಹಂಚಿ ಕೇಂದ್ರ ಬಜೆಟ್‌ ದಾಖಲೆ ಮುದ್ರಣ ಕಾರ್ಯಕ್ಕೆ ಚಾಲನೆ ನೀಡಿದ ಅರುಣ್‌ ಜೇಟ್ಲಿ

20 Jan, 2018
ಹರಿಯಾಣ: ಪ್ರಾಂಶುಪಾಲರನ್ನು ಗುಂಡಿಕ್ಕಿ ಕೊಂದ ದ್ವಿತೀಯ ಪಿಯು ವಿದ್ಯಾರ್ಥಿ

ಪ್ರಕರಣ ದಾಖಲು
ಹರಿಯಾಣ: ಪ್ರಾಂಶುಪಾಲರನ್ನು ಗುಂಡಿಕ್ಕಿ ಕೊಂದ ದ್ವಿತೀಯ ಪಿಯು ವಿದ್ಯಾರ್ಥಿ

20 Jan, 2018