ಬೀಜಿಂಗ್

ಚೀನಾ: ಚಂದ್ರನ ಮೇಲೆ ರೊಬೊಟ್ ನಿಲ್ದಾಣ

ಚಂದ್ರನ ಮೇಲೆ ರೊಬೊಟ್ ನಿಲ್ದಾಣ ಸ್ಥಾಪಿಸಲು ಚೀನಾ ಚಿಂತನೆ ನಡೆಸುತ್ತಿದ್ದು, ಚಂದ್ರನ  ಭೌಗೋಳಿಕತೆ ಕುರಿತು ಹೆಚ್ಚಿನ ಸಂಶೋಧನೆ ನಡೆಸುವುದು ಇದರ ಉದ್ದೇಶ.

ಚೀನಾ: ಚಂದ್ರನ ಮೇಲೆ ರೊಬೊಟ್ ನಿಲ್ದಾಣ

ಬೀಜಿಂಗ್: ಚಂದ್ರನ ಮೇಲೆ ರೊಬೊಟ್ ನಿಲ್ದಾಣ ಸ್ಥಾಪಿಸಲು ಚೀನಾ ಚಿಂತನೆ ನಡೆಸುತ್ತಿದ್ದು, ಚಂದ್ರನ  ಭೌಗೋಳಿಕತೆ ಕುರಿತು ಹೆಚ್ಚಿನ ಸಂಶೋಧನೆ ನಡೆಸುವುದು ಇದರ ಉದ್ದೇಶ.

ಸುಸ್ಥಿರವಾದ ರೊಬೊಟ್ ನಿಲ್ದಾಣ ಸ್ಥಾಪಿಸುವುದರಿಂದ, ದೊಡ್ಡ ಮಟ್ಟದಲ್ಲಿ ಹೆಚ್ಚು ಸಂಕೀರ್ಣವಾದ ಸಂಶೋಧನೆಗಳನ್ನು ನಡೆಸಲು ಸಾಧ್ಯ ಇದೆ ಎಂದು ಈ ಯೋಜನೆ ಘೋಷಿಸಿದ ಬಾಹ್ಯಾಕಾಶ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಗ್ಲೋಬಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

‌ಈ ಯೋಜನೆಗೆ ಪೂರಕವಾಗಿ ಚೀನಾ 100 ಟನ್‌ಗಿಂತ ಅಧಿಕ ತೂಕ ಹೊರುವ ಸಾಮರ್ಥ್ಯದ ರಾಕೆಟ್‌ ಅನ್ನು 2030ರ ವೇಳೆಗೆ ಉಡಾಯಿಸಲಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಈ ನಿಲ್ದಾಣ ಸ್ಥಾಪನೆಯಿಂದಾಗಿ, ಚಂದ್ರನ ಮೇಲಿನ ಬಂಡೆಗಲ್ಲುಗಳ ಮಾದರಿಗಳನ್ನು ಭೂಮಿಗೆ ವಾಪಸ್ ಕಳುಹಿಸುವ ವೆಚ್ಚ ಕಡಿತವಾಗಬಹುದು ಎಂದು ಪೆಕಿಂಗ್ ವಿಶ್ವವಿದ್ಯಾಲಯದ ಬಾಹ್ಯಾಕಾಶ ವಿಜ್ಞಾನ ಪ್ರಾಧ್ಯಾಪಕ ಜಿಯಾವೊ ವೈಕ್ಸಿನ್ ಹೇಳಿದ್ದಾರೆ.

ಚಂದ್ರನ ಅನ್ವೇಷಣಾ ಯೋಜನೆಯ ಮೂರು ಹಂತದಲ್ಲಿ ಎರಡನೆಯದಾದ ಚಾಂಗ್ 4 ರಾಕೆಟ್ ಉಡಾವಣೆ 2018ರಲ್ಲಿ ಆಗಲಿದೆ. ಇದು ಚಂದ್ರನ ಕಪ್ಪು ಭಾಗದ ಅಧ್ಯಯನ ನಡೆಸಲಿದೆ. ನಂತರ ಚಾಂಗ್ 5 ರಾಕೆಟ್ ಉಡಾವಣೆಯಾಗಲಿದ್ದು, ಇದು ಚಂದ್ರನ ಬಂಡೆಗಲ್ಲುಗಳ ಮಾದರಿ ಸಂಗ್ರಹಿಸಿಕೊಂಡು ಭೂಮಿಗೆ ಮರಳಲಿದೆ. ನಂತರದಲ್ಲಿ ಚಂದ್ರನ ದಕ್ಷಿಣ ಭಾಗದ ಅಧ್ಯಯನಕ್ಕಾಗಿ ಇನ್ನೂ ಮೂರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ.

Comments
ಈ ವಿಭಾಗದಿಂದ ಇನ್ನಷ್ಟು

ಲಂಡನ್
ಬ್ರಿಟನ್‌: ಒಬ್ಬಂಟಿತನ ನಿವಾರಣೆಗೆ ಸಚಿವರ ನೇಮಕ

ಒಬ್ಬಂಟಿತನ ಸಮಸ್ಯೆ ನಿವಾರಣೆಗೆ ಬ್ರಿಟನ್‌ ಪ್ರಧಾನಿ ತೆರೇಸಾ ಮೇ ಅವರು ಪ್ರತ್ಯೇಕ ಸಚಿವರನ್ನು ನೇಮಿಸಿದ್ದಾರೆ.

18 Jan, 2018
ವಲಸಿಗರಿಗೆ ಕೌಶಲ, ಇಂಗ್ಲಿಷ್ ಕಡ್ಡಾಯ

ವಾಷಿಂಗ್ಟನ್
ವಲಸಿಗರಿಗೆ ಕೌಶಲ, ಇಂಗ್ಲಿಷ್ ಕಡ್ಡಾಯ

18 Jan, 2018
ಶ್ರೀಲಂಕಾ: ಮಹಿಳೆಯರಿಗೆ ಮದ್ಯ ಮಾರಾಟ ನಿಷೇಧ

ಕೊಲಂಬೊ
ಶ್ರೀಲಂಕಾ: ಮಹಿಳೆಯರಿಗೆ ಮದ್ಯ ಮಾರಾಟ ನಿಷೇಧ

17 Jan, 2018
ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜ್ವಾಲಾಮುಖಿ!

ಲೆಗಾಝ್ಪಿ
ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜ್ವಾಲಾಮುಖಿ!

17 Jan, 2018
‘ಪಾಕ್‌ಗೆ ಭಾರತದಿಂದ ಬೆದರಿಕೆ ಇಲ್ಲ’

ಇಸ್ಲಾಮಾಬಾದ್
‘ಪಾಕ್‌ಗೆ ಭಾರತದಿಂದ ಬೆದರಿಕೆ ಇಲ್ಲ’

17 Jan, 2018