ಮೈಸೂರು ಜಿಲ್ಲಾ ಯುವ ಭೋವಿ ಬಳಗ ಉದ್ಘಾಟನೆ

ಭೋವಿ ಸಮಾಜದ ಸಮೀಕ್ಷೆಗೆ ಒತ್ತಾಯ

ಭೋವಿ ಸಮಾಜದ ಅಭಿವೃದ್ಧಿಗೆ ಒಂದು ಪ್ರತ್ಯೇಕ ನಿಗಮ ಸ್ಥಾಪಿಸಲಾಗಿದೆ. ಇದರ ಲಾಭ ಸಮಾಜದ ಎಲ್ಲರಿಗೂ ಸಿಗುವಂತಾಗಬೇಕು.

ಮೈಸೂರು ಜಿಲ್ಲಾ ಯುವ ಭೋವಿ ಬಳಗವನ್ನು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಬಸವರಾಜಪ್ಪ ಬುಧವಾರ ಉದ್ಘಾಟಿಸಿದರು

ಮೈಸೂರು: ಜಿಲ್ಲೆಯಲ್ಲಿರುವ ಭೋವಿ ಸಮಾಜದವರ ಸಮೀಕ್ಷೆ ನಡೆಸಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಭೂವಿಜ್ಞಾನ ವಿಭಾಗದ ಪ್ರಾಧ್ಯಾಪಕ ಬಸವರಾಜಪ್ಪ ಇಲ್ಲಿ ಬುಧವಾರ ಒತ್ತಾಯಿಸಿದರು.

ಜಿಲ್ಲಾ ಯುವ ಭೋವಿ ಬಳಗ ಉದ್ಘಾಟಿಸಿ ಮಾತನಾಡಿದರು. ಈಗ ಉದ್ಘಾಟನೆಗೊಂಡಿರುವ ಯುವ ಭೋವಿ ಬಳಗವು ಜನಾಂಗದವರ ಸಮೀಕ್ಷೆ ನಡೆಸಬೇಕು. ಬಳಗದ ಸದಸ್ಯರಾಗಲು ₹ 5 ಸಾವಿರ ನೋಂದಣಿ ಶುಲ್ಕ ನಿಗದಿಪಡಿಸಿದರೆ ಯಾರು ತಾನೇ ಸದಸ್ಯರಾಗಲು ಮುಂದೆ ಬರುತ್ತಾರೆ ಎಂದು ಪ್ರಶ್ನಿಸಿದರು. ಕನಿಷ್ಠ ₹ 1 ಶುಲ್ಕ ನಿಗದಿ ಮಾಡಿದರೆ ಎಲ್ಲರೂ ಸದಸ್ಯರಾಗುತ್ತಾರೆ. ಆಗ ಬಳಗಕ್ಕೆ ಒಂದು ಶಕ್ತಿ ಬರುತ್ತದೆ ಎಂದರು.

ಭೋವಿ ಸಮಾಜದ ಅಭಿವೃದ್ಧಿಗೆ ಒಂದು ಪ್ರತ್ಯೇಕ ನಿಗಮ ಸ್ಥಾಪಿಸಲಾಗಿದೆ. ಇದರ ಲಾಭ ಸಮಾಜದ ಎಲ್ಲರಿಗೂ ಸಿಗುವಂತಾಗಬೇಕು. ಇದರಿಂದ ಸಿಗುವ ಲಾಭಗಳನ್ನು ಸಮಾಜದ ಎಲ್ಲರಿಗೂ ತಲುಪಿಸಬೇಕು ಎಂದು ಸಲಹೆ ಮಾಡಿದರು.

ಎಲ್ಲ ಜಿಲ್ಲೆಗಳಲ್ಲೂ ಇಂತಹ ಯುವ ಸಂಘಗಳು ಆರಂಭವಾಗಬೇಕು. ಈಗ ಸುಮಾರು 200 ಸಂಘಗಳು ಸಮಾಜದಲ್ಲಿವೆ. ಇವುಗಳು ಏನು ಮಾಡುತ್ತಿವೆ ಎಂಬ ಪ್ರಶ್ನೆಯನ್ನು ಕೇಳಬೇಕಾದ ಜರೂರು ಇದೆ. ಸಂಘಗಳು ಸ್ಥಾಪನೆಯಾಗುವುದು ಸುಮ್ಮನೇ ಕೂರುವುದಕ್ಕಲ್ಲ. ಸಮಾಜದ ಒಳಿತಿಗೆ ಏನಾದರೂ ಮಾಡಲು ಪ್ರಯತ್ನಿಸಬೇಕು ಎಂದು ಅಭಿಪ್ರಾಯಪಟ್ಟರು.

ಸಂಘದ ಅಧ್ಯಕ್ಷ ಡಿ.ಪಿ.ಕೆ.ಪರಮೇಶ್, ಗೌರವ ಅಧ್ಯಕ್ಷ ಟಿ.ಕೃಷ್ಣಪ್ಪ, ಉಪಾಧ್ಯಕ್ಷರಾದ ದಿನೇಶ್, ಆರ್.ನಾಗರಾಜು, ಪ್ರಧಾನ ಕಾರ್ಯದರ್ಶಿ ಜಿ.ಉಮೇಶ್ ಭಾಗವಹಿಸಿದ್ದರು.

ಪಾಂಡವಪುರ ತಾಲ್ಲೂಕಿನ ಕಲ್ಲು ಕ್ವಾರೆಯಲ್ಲಿ ನಡೆದ ಸ್ಫೋಟದಲ್ಲಿ ಮೃತಪಟ್ಟ ನಾರಾಯಣಪ್ಪ ಅವರ ಕುಟುಂಬಕ್ಕೆ ಧನಸಹಾಯದ ಚೆಕ್‌ ವಿತರಿಸಲಾಯಿತು.

5 ಮಂದಿ ಬಡವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಯಿತು. ಜನಾಂಗದ 50 ಮಂದಿ ಸರ್ಕಾರಿ ನೌಕರರು, ಮುಖಂಡರನ್ನು ಸನ್ಮಾನಿಸಲಾಯಿತು.

Comments
ಈ ವಿಭಾಗದಿಂದ ಇನ್ನಷ್ಟು
‘ತಾಲ್ಲೂಕಿನಲ್ಲಿ ಪಕ್ಷ ಸಂಘಟನೆಯೇ ನನ್ನ ಗುರಿ’

ಎಚ್.ಡಿ.ಕೋಟೆ
‘ತಾಲ್ಲೂಕಿನಲ್ಲಿ ಪಕ್ಷ ಸಂಘಟನೆಯೇ ನನ್ನ ಗುರಿ’

23 Jan, 2018

ಎಚ್.ಡಿ.ಕೋಟೆ
‘ದೂರು ಕೊಡಲು ಬಂದವರನ್ನೇ ಜೈಲಿಗಟ್ಟುವ ಸರ್ಕಾರ’

‘ರಾಜ್ಯದಲ್ಲಿ ಜನಸಾಮಾನ್ಯರು ನೆಮ್ಮದಿಯಿಂದ ಜೀವನಮಾಡಲಾಗುತ್ತಿಲ್ಲ, ಅವರ ಸ್ವಕ್ಷೇತ್ರದಲ್ಲಿಯೇ ಅಮಾನವೀಯ ಘಟನೆಗಳು ನಡೆಯುತ್ತಿವೆ. ಪೊಲೀಸರ ನಿಯಂತ್ರಣವನ್ನು ನಿವೃತ್ತ ಪೊಲೀಸ್‌ ಅಧಿಕಾರಿ ಕೆಂಪಯ್ಯ ಮಾಡುತ್ತಿದ್ದಾರೆ

23 Jan, 2018
ಮಹಾರಾಣಿ ವಾಣಿಜ್ಯ ಕಾಲೇಜು ಉದ್ಘಾಟನೆ ಸಜ್ಜು

ಮೈಸೂರು
ಮಹಾರಾಣಿ ವಾಣಿಜ್ಯ ಕಾಲೇಜು ಉದ್ಘಾಟನೆ ಸಜ್ಜು

23 Jan, 2018

ಮೈಸೂರು
ನೈರುತ್ಯ ರೈಲ್ವೆಗೆ ₹ 37 ಸಾವಿರ ದಂಡ

ಟಿಕೆಟ್ ಇದ್ದರೂ ಉಜ್ಜಯಿನಿಯಿಂದ ಮೈಸೂರಿಗೆ ರೈಲಿನಲ್ಲಿ ನಗರದ ಕುಟುಂಬವೊಂದು ನಿಂತು ಪ್ರಯಾಣ ಮಾಡಬೇಕಾಗಿ ಬಂದ ಕಾರಣ ನೈರುತ್ಯ ರೈಲ್ವೆಗೆ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ...

22 Jan, 2018
29 ಕೆರೆಗೆ ನೀರು ತುಂಬಿಸಲು ₹ 79 ಕೋಟಿ; ಸಂಸದ

ಎಚ್.ಡಿ.ಕೋಟೆ
29 ಕೆರೆಗೆ ನೀರು ತುಂಬಿಸಲು ₹ 79 ಕೋಟಿ; ಸಂಸದ

21 Jan, 2018