ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ರಾಜೀನಾಮೆ ಆಗ್ರಹ

ಸಾಮಾನ್ಯ ಸಭೆಗೆ ‘ಸ್ವಪಕ್ಷೀಯ’ರ ಬಹಿಷ್ಕಾರ

ಕೇಶವರೆಡ್ಡಿ ಅವರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪ್ರತಿಯೊಂದರಲ್ಲೂ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅವರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿ ಈ ಹಿಂದೆ ‘ಬಂಡಾಯ’ ಎದ್ದಿದ್ದ ‘ಸ್ವಪಕ್ಷ’ದ 14 ಸದಸ್ಯರು ಕಳೆದ ಫೆಬ್ರುವರಿ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕರೆದಿದ್ದ ನಾಲ್ಕು ಸಾಮಾನ್ಯ ಸಭೆಗಳನ್ನು ಬಹಿಷ್ಕರಿಸಿದ್ದರು...

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಗುರುವಾರ ಬಹುತೇಕ ಸದಸ್ಯರ ಆಸನಗಳು ಖಾಲಿ ಇದ್ದವು

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅವರು ಗುರುವಾರ ಕರೆದಿದ್ದ ಸಾಮಾನ್ಯ ಸಭೆಗೆ ಆಡಳಿತಾರೂಢ ಕಾಂಗ್ರೆಸ್‌ ಬಹುಪಾಲು ಸದಸ್ಯರೇ ಹಾಜರಾಗಲಿಲ್ಲ. ಹೀಗಾಗಿ ಕೋರಂ ಕೊರತೆಯ ಕಾರಣ ನೀಡಿ ಸಭೆಯನ್ನು ಮುಂದೂಡಲಾಯಿತು.

28 ಸದಸ್ಯ ಬಲ ಹೊಂದಿರುವ ಜಿಲ್ಲಾ ಪಂಚಾಯಿತಿಯಲ್ಲಿ 21 ಕಾಂಗ್ರೆಸ್‌ ಸದಸ್ಯರಿದ್ದಾರೆ. ಆ ಪೈಕಿ ಕೇಶವರೆಡ್ಡಿ ಅವರನ್ನು ಹೊರತುಪಡಿಸಿದಂತೆ ಗುರುವಾರದ ಸಭೆಗೆ ಮೂರು ಸದಸ್ಯರು ಮಾತ್ರ ಭಾಗವಹಿಸಿದ್ದರು. 17 ಸದಸ್ಯರು ಗೈರಾದರು. ಇನ್ನುಳಿದಂತೆ ಜೆಡಿಎಸ್‌ನ ಇಬ್ಬರು ಮತ್ತು ಬಿಜೆಪಿಯ ಒಬ್ಬ ಸದಸ್ಯೆ ಹೀಗೆ ಒಟ್ಟು ಐದು ಸದಸ್ಯರು ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದರು.

ಕೇಶವರೆಡ್ಡಿ ಅವರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪ್ರತಿಯೊಂದರಲ್ಲೂ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅವರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿ ಈ ಹಿಂದೆ ‘ಬಂಡಾಯ’ ಎದ್ದಿದ್ದ ‘ಸ್ವಪಕ್ಷ’ದ 14 ಸದಸ್ಯರು ಕಳೆದ ಫೆಬ್ರುವರಿ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕರೆದಿದ್ದ ನಾಲ್ಕು ಸಾಮಾನ್ಯ ಸಭೆಗಳನ್ನು ಬಹಿಷ್ಕರಿಸಿದ್ದರು.

ಈ ಬೆಳವಣಿಗೆ ನಂತರ ಜುಲೈನಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಸೇರಿದಂತೆ ಪಕ್ಷದ ವರಿಷ್ಠರು ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಸದಸ್ಯರನ್ನು ಕರೆದು ಚರ್ಚಿಸಿ, ‘ಕೇಶವರೆಡ್ಡಿ ಅವರು ನವೆಂಬರ್‌ನಲ್ಲಿ ರಾಜೀನಾಮೆ’ ನೀಡುತ್ತಾರೆ ಎಂದು ‘ರಾಜೀ ಸಂಧಾನ’ ನಡೆಸಿ ಮುನಿಸು ತಣಿಸಿದ್ದರು.

ವರಿಷ್ಠರು ನೀಡಿದ ‘ವಾಗ್ದಾನ’ದಂತೆ ಕೇಶವರೆಡ್ಡಿ ಅವರು ನವೆಂಬರ್ ಮುಗಿಯುವುದರೊಳಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ ಈವರೆಗೆ ಅವರು ರಾಜೀನಾಮೆ ನೀಡಿಲ್ಲ ಎನ್ನುವ ವಿಚಾರ ಇದೀಗ ಪುನಃ ‘ಕೈ’ ಪಾಳೆಯದಲ್ಲಿ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಬಂಡೆದ್ದ ಸದಸ್ಯರು ಕೇಶವರೆಡ್ಡಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಸಭೆ ಮುಂದೂಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಶವರೆಡ್ಡಿ, ‘ನನ್ನನ್ನು ಹೈಕಮಾಂಡ್‌ ಅಧ್ಯಕ್ಷನನ್ನಾಗಿ ಮಾಡಿದೆ. ಹೀಗಾಗಿ ಹೈಕಮಾಂಡ್‌ಗೆ ನಾನು ತಲೆ ಬಾಗುತ್ತೇನೆ. ಸಿದ್ದರಾಮಯ್ಯ, ಪರಮೇಶ್ವರ್‌ ಮತ್ತು ಸಂಸದರಾದ ವೀರಪ್ಪ ಮೊಯಿಲಿ, ಕೆ.ಎಚ್‌.ಮುನಿಯಪ್ಪ ಈ ನಾಲ್ಕು ವರಿಷ್ಠರು ರಾಜೀನಾಮೆ ನೀಡಿ ಎಂದು ಈ ಕ್ಷಣವೇ ಹೇಳಿದರೆ ರಾಜೀನಾಮೆ ನೀಡುತ್ತೇನೆ. ಇಲ್ಲವಾದರೆ ಅಧ್ಯಕ್ಷನಾಗಿ ಮುಂದುವರಿಯುತ್ತೇನೆ’ ಎಂದು ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು
ಎರಡನೇ ಬಾರಿಯೂ ಮುಂದುವರಿದ ಗೊಂದಲ?

ಚಿಕ್ಕಬಳ್ಳಾಪುರ
ಎರಡನೇ ಬಾರಿಯೂ ಮುಂದುವರಿದ ಗೊಂದಲ?

21 Jan, 2018
ಬಾಗೇಪಲ್ಲಿ: ಇಂದು ಬಡವರ ಮದುವೆ ‘ಹಬ್ಬ’

ಚಿಕ್ಕಬಳ್ಳಾಪುರ
ಬಾಗೇಪಲ್ಲಿ: ಇಂದು ಬಡವರ ಮದುವೆ ‘ಹಬ್ಬ’

21 Jan, 2018
ಮಳೆಗಾಲದಲ್ಲಿ ನರಕ, ವರ್ಷವಿಡೀ ನಡುಕ!

ಚಿಕ್ಕಬಳ್ಳಾಪುರ
ಮಳೆಗಾಲದಲ್ಲಿ ನರಕ, ವರ್ಷವಿಡೀ ನಡುಕ!

20 Jan, 2018
ಯಡಿಯೂರಪ್ಪ ಮನಗೆದ್ದ ಯುವಕ ಯಾರು?

ಶಿಡ್ಲಘಟ್ಟ
ಯಡಿಯೂರಪ್ಪ ಮನಗೆದ್ದ ಯುವಕ ಯಾರು?

19 Jan, 2018
ತಿರುವು ಪಡೆದ ರಾಜೀನಾಮೆ ‘ಪ್ರಹಸನ’

ಚಿಕ್ಕಬಳ್ಳಾಪುರ
ತಿರುವು ಪಡೆದ ರಾಜೀನಾಮೆ ‘ಪ್ರಹಸನ’

19 Jan, 2018