ಕವನ

ಮರುಭೂಮಿಯ ಹನಿಗಳು

ಹಗಲೂ ಇರುಳೂ ಕಳೆದು ಹೋಗುತಿವೆ ಕೂಡಿ ಕಳೆವ ಲೆಕ್ಕದಲಿ ಬದುಕಿನ ಬಣ್ಣ ಮಾಸಿದೆ ಹೀಗೆ-

ಚಿತ್ರ: ಶಶಿಕಿರಣ ದೇಸಾಯಿ

ಯಾರೂ ತುಳಿಯದ ದಾರಿಯಲಿ ಮೆರವಣಿಗೆ
ಹೊರಟವಳು ನೀನು
ಸಂಭ್ರಮದಲಿ ಸುರಿವ ಅಗ್ಗದ ಬಿಸಿಲಿಗೆ ಕರುಣೆಯಿರದು
ಯಾವತ್ತೂ
ಕಾದ ಕಬ್ಬಿಣವಾಗಿದೆ ನೆಲವು ಹೂ ಹಗುರ ಪಾದಗಳು
ಸುಟ್ಟಾವು ಜೋಕೆ.

ಹಗಲೂ ಇರುಳೂ ಕಳೆದು ಹೋಗುತಿವೆ ಕೂಡಿ
ಕಳೆವ ಲೆಕ್ಕದಲಿ ಬದುಕಿನ ಬಣ್ಣ ಮಾಸಿದೆ ಹೀಗೆ-
ಒಂದೊಮ್ಮೆ ಕಣ್ಣ ಮುಂದಿನ ಕದವ ತೆರೆದು ನೋಡಿದರೆ
ಎದೆಯ ಮೇಲೆಲ್ಲ ಆರದ ಗಾಯಗಳು ಆಕ್ರೋಶದಲ್ಲಿ
ನಂಬಿದ ದೇವರಿಗೆ ಕೀವು ನೆತ್ತರಿನ ನೈವೇದ್ಯ
ಹಿಡಿದಿವೆ.

ಎಷ್ಟೇ ಸವೆಸಿದರೂ ದಾರಿಯನ್ನು ತಿರುವುಗಳಲ್ಲಿ
ಮಾಯವಾಗಿವೆ ಹೆಜ್ಜೆಗಳು ಕಾಣಸಿಗದಂತೆ ಮಲ್ಲಿಗೆಯ
ಘಮವೂ ಕೂಡ ಸೋತಿರಲು ಶೋಧಿಸಲಾಗದೆ
ದೂರದ ಅರಮನೆಯ ಅಂಗಳದಲ್ಲಿ ಹೊಚ್ಚ ಹೊಸ
ಗೋರಿಯೊಂದು ಸಜ್ಜಾಗಿದೆ.

ಮತ್ತು,
ನಿನಗಾಗಿ
ನನ್ನ ಕಣ್ಣ ರೆಪ್ಪೆಯ ಮೇಲೆ ಮಡುಗಟ್ಟಿದ ಮಾತುಗಳು
ಮರುಭೂಮಿಯ ಬಿಸಿ ಹನಿಗಳಂತೆ
ತೊಟ್ಟಿಕ್ಕುತ್ತಿರಲು ಆರ್ದ್ರವಾಗಿ ಕೆನ್ನೆ ಮೇಲೆ
ಎಂದೂ ಆರದ ನೆತ್ತರಿನ ಕಲೆಗಳು ಮೂಡಿವೆ.

Comments
ಈ ವಿಭಾಗದಿಂದ ಇನ್ನಷ್ಟು

ಮುಕ್ತಛಂದ
ಒಂಚೂರು

ಇಂಗ್ಲೆಂಡ್‌ನಲ್ಲಿ ನಾಯಿಗಳ ಮಾಲೀಕರು ತಮ್ಮಿಷ್ಟದ ಪ್ರಾಣಿ ಮೃತಪಟ್ಟ ಮೇಲೂ ಅದನ್ನು ವಜ್ರವಾಗಿ ಬದಲಾಯಿಸಿ, ಅದರ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳಬಹುದು! ಹರ್ಟ್‌ಫೋರ್ಡ್‌ಷೈರ್‌ನ ಸ್ಮಶಾನದಲ್ಲಿನ ಅಸ್ಥಿಗಳಿಂದ ಇಂಗಾಲವನ್ನು ತೆಗೆದು...

14 Jan, 2018
ಕಣ್ಣು ತೆರೆಸಿದ ಸಾಧ್ವಿ ಮೊಲಕ್ಕ

ಮಕ್ಕಳ ಕತೆ
ಕಣ್ಣು ತೆರೆಸಿದ ಸಾಧ್ವಿ ಮೊಲಕ್ಕ

14 Jan, 2018
‘ಬೀಯಿಂಗ್‌ ಯು’: ಒಂದು ಮನ ಮಿಡಿಯುವ ಕಥೆ!

ಮುಕ್ತಛಂದ
‘ಬೀಯಿಂಗ್‌ ಯು’: ಒಂದು ಮನ ಮಿಡಿಯುವ ಕಥೆ!

14 Jan, 2018
ಸೂರ್ಯನ ಅಧ್ಯಯನಕೆ ‘ಆದಿತ್ಯ’

ಸಂಶೋಧನೆ
ಸೂರ್ಯನ ಅಧ್ಯಯನಕೆ ‘ಆದಿತ್ಯ’

14 Jan, 2018
ಶಾಂತಿಯ ಲೋಕದ ಅಂಗಳಕೇರಿ...

ಕಲಾಕೃತಿ
ಶಾಂತಿಯ ಲೋಕದ ಅಂಗಳಕೇರಿ...

14 Jan, 2018