ರಾಮನಗರ

ರೇಷ್ಮೆಗೂಡು ಕಳ್ಳರ ವಿರುದ್ಧ ಕ್ರಮ

ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯ ಆಗುತ್ತಿರುವುದು ಗಮನಕ್ಕೆ ಬಂದಿದೆ. ಅದರಲ್ಲೂ ಪರ ಊರುಗಳಿಂದ ಬರುವವರು ಹೆಚ್ಚಿನ ತೊಂದರೆಗೆ ಒಳಗಾಗುತ್ತಿದ್ದಾರೆ. ಗೂಡು ಕಳ್ಳತನ ನಿಯಂತ್ರಣಕ್ಕೆ ಅಗತ್ಯಬಿದ್ದಲ್ಲಿ ಪೊಲೀಸರ ನೆರವು ಪಡೆಯಲಾಗುವುದು

ರಾಮನಗರದ ರೇಷ್ಮೆಗೂಡು ಮಾರುಕಟ್ಟೆಗೆ ರೇಷ್ಮೆ ಇಲಾಖೆಯ ನಿರ್ದೇಶಕ ಕೆ.ಎಸ್. ಮಂಜುನಾಥ್‌ ಭೇಟಿ ನೀಡಿದ್ದರು

ರಾಮನಗರ: ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಗೂಡು ಕಳ್ಳತನ ಮತ್ತು ನಕಲಿ ರೀಲರ್‌ಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳ ಲಾಗುವುದು ಎಂದು ರೇಷ್ಮೆ ಇಲಾಖೆ ನಿರ್ದೇಶಕ ಕೆ.ಎಸ್‌. ಮಂಜುನಾಥ್‌ ಭರವಸೆ ನೀಡಿದರು. ರೇಷ್ಮೆಗೂಡು ಮಾರುಕಟ್ಟೆಗೆ ಶುಕ್ರವಾರ ಭೇಟಿ ನೀಡಿ ಇಲ್ಲಿನ ವ್ಯವಸ್ಥೆ ಪರಿಶೀಲಿಸಿದ ಅವರು ಅಧಿಕಾರಿಗಳು ಹಾಗೂ ರೀಲರ್‌ಗಳ ಜೊತೆ ಸಭೆ ನಡೆಸಿದರು.

ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯ ಆಗುತ್ತಿರುವುದು ಗಮನಕ್ಕೆ ಬಂದಿದೆ. ಅದರಲ್ಲೂ ಪರ ಊರುಗಳಿಂದ ಬರುವವರು ಹೆಚ್ಚಿನ ತೊಂದರೆಗೆ ಒಳಗಾಗುತ್ತಿದ್ದಾರೆ. ಗೂಡು ಕಳ್ಳತನ ನಿಯಂತ್ರಣಕ್ಕೆ ಅಗತ್ಯಬಿದ್ದಲ್ಲಿ ಪೊಲೀಸರ ನೆರವು ಪಡೆಯಲಾಗುವುದು ಎಂದು ಹೇಳಿದರು.

ಅಧಿಕಾರಿಗಳ ವಿರುದ್ಧವೇ ದೂರು: ಇದಕ್ಕೂ ಮುನ್ನ ರೀಲರ್‌ಗಳು ಮಾರು ಕಟ್ಟೆಗೆ ಸಂಬಂಧಿಸಿದ ದೂರುಗಳನ್ನು ನಿರ್ದೇಶಕರ ಮುಂದಿಟ್ಟರು. ‘ಸದ್ಯ ಮಾರುಕಟ್ಟೆಯಲ್ಲಿನ ಎಲ್ಲ ಅವಾಂತರಗಳಲ್ಲಿ ಇಲ್ಲಿನ ಅಧಿಕಾರಿಗಳ ಪಾಲೂ ಇದೆ. ಅವರಿಗೆ ಗೂಡು ಕೊಳ್ಳುವವರು ಯಾರು, ಕಳ್ಳರು ಯಾರು ಎಂಬುದು ಚೆನ್ನಾಗಿ ಗೊತ್ತಿದೆ. ಅಂತ ಹವರ ಜೊತೆ ಶಾಮೀಲಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ದೂರಿದರು.

‘ಮಾರುಕಟ್ಟೆಗೆ ಸದ್ಯ ದಿನಕ್ಕೆ 35ರಿಂದ 40 ಟನ್‌ನಷ್ಟು ಗೂಡು ಬರುತ್ತಿದೆ. ಅದರಲ್ಲಿ ರೈತರಿಂದ ನಿತ್ಯ 800–1ಸಾವಿರ ಕೆ.ಜಿ.ಗಳಷ್ಟು ಗೂಡು ಕಳ್ಳರ ಪಾಲಾಗುತ್ತಿದೆ. ಮಾರುಕಟ್ಟೆಯಲ್ಲಿ 3050 ನೋಂದಾಯಿತ ರೀಲರ್‌ಗಳು ಇದ್ದಾರೆ. ಇವರಲ್ಲಿ ನಿತ್ಯ ಸುಮಾರು ಒಂದು ಸಾವಿರ ಮಂದಿ ಮಾರುಕಟ್ಟೆಗೆ ಬರುತ್ತಾರೆ. ಜೊತೆಗೆ 600–800 ಮಂದಿ ಅಕ್ರಮವಾಗಿ ಪ್ರವೇಶ ಮಾಡುತ್ತಿದ್ದಾರೆ. ಈ ಮೂಲಕ ರೈತರನ್ನು ಯಾಮಾರಿಸಿ ಕಡಿಮೆ ಬೆಲೆಗೆ ಗೂಡು ಖರೀದಿಸಲಾಗುತ್ತಿದೆ. ಹೀಗಾಗಿ ಅಧಿಕೃತ ರೀಲರ್ ಅಲ್ಲದವರಿಗೆ ಮಾರುಕಟ್ಟೆಗೆ ಪ್ರವೇಶ ನಿಷೇಧಿಸಬೇಕು’ ಎಂದು ಆಗ್ರಹಿಸಿದರು.

ಹೊರಗಡೆಯೇ ಖರೀದಿ: ಮಾರುಕಟ್ಟೆಗೆ ಬರುವ ಗೂಡು ತರುವ ರೈತರನ್ನು ಕೆಲವರು ನಗರದ ಹೊರವಲಯದಲ್ಲಿಯೇ ಅಡ್ಡಗಟ್ಟಿ ಕಡಿಮೆ ಬೆಲೆಯಲ್ಲಿ ಖರೀದಿ ಮಾಡು ತ್ತಿದ್ದಾರೆ. ಇದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿಲ್ಲ. ಸರ್ಕಾರಕ್ಕೆ ಶುಲ್ಕ ನಷ್ಟವಾಗುವ ಜೊತೆಗೆ ರೈತರಿಗೂ ಅನ್ಯಾಯವಾಗುತ್ತಿದೆ ಎಂದು ರೀಲರ್‌ಗಳ ಸಂಘದ ಅಧ್ಯಕ್ಷ ಮುಹೀಬ್ ಪಾಷ ಆರೋಪಿಸಿದರು.

‘ಗೌಸಿಯಾ ಕಾಲೇಜು, ಕೆಂಪೇಗೌಡನ ದೊಡ್ಡಿ ಹಾಗೂ ರೈಲು ನಿಲ್ದಾಣಗಳ ಬಳಿ ಹೀಗೆ ಖಾಸಗಿಯಾಗಿ ಗೂಡು ಖರೀದಿ ಸಲಾಗುತ್ತಿದೆ. ಹೀಗೆ ಮುಕ್ತವಾಗಿಯೇ ಗೂಡು ಕೊಳ್ಳಲು ಅವಕಾಶ ಇದ್ದರೆ ಮಾರುಕಟ್ಟೆಯ ಅಗತ್ಯ ಏನಿದೆ? ಮಾರುಕಟ್ಟೆಯನ್ನು ಬಂದ್ ಮಾಡಿ ನಮಗೂ ಮುಕ್ತವಾಗಿ ಖರೀದಿಗೆ ಅವಕಾಶ ನೀಡಿ’ ಎಂದು ಉದ್ಯಮಿ ಫರ್ವೀಜ್‌ ಪಾಷ ಆಗ್ರಹಿಸಿದರು.

ಮಾರುಕಟ್ಟೆಗೆ ದಕ್ಷ ಅಧಿಕಾರಿಗಳನ್ನು ನಿಯೋಜಿಸಬೇಕು. ಹೊರಗುತ್ತಿಗೆ ಆಧಾರದಲ್ಲಿ ಹೆಚ್ಚುವರಿ ನೌಕರರನ್ನು ನೇಮಿಸಿಕೊಳ್ಳಬೇಕು. ಅಧಿಕೃತ ರೀಲರ್‌ಗಳಿಗೆ ಗುರುತಿನ ಚೀಟಿ ವ್ಯವಸ್ಥೆ ಮಾಡಬೇಕು. ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಬೇಕು. ಮೂಲ ಸೌಕರ್ಯಗಳನ್ನು ವಿಸ್ತರಿಸಬೇಕು. ಆರ್‌ಟಿಜಿಎಸ್‌ ಮೂಲಕ ರೈತರಿಗೆ ಹಣ ಸಂದಾಯ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ನಿರ್ದೇಶಕರ ಮುಂದೆ ಇಡಲಾಯಿತು. ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಕುಮಾರ್, ಉಪ ನಿರ್ದೇಶಕ ಮುನ್ಶಿ ಬಸಯ್ಯ ಇದ್ದರು.

ಭೇಟಿ ವೇಳೆ ಗೂಡು ಕಳವು!

ನಿರ್ದೇಶಕರು ಮಾರುಕಟ್ಟೆಗೆ ಭೇಟಿ ನೀಡಿದ್ದ ವೇಳೆಯಲ್ಲಿಯೇ ಕಳ್ಳರು ಕೈಚಳಕ ತೋರಿದ್ದು, ಗೂಡು ಕದಿಯುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಸಭೆಯ ಸಂದರ್ಭ ರೀಲರ್‌ಗಳು ಈ ವಿಷಯವನ್ನು ನಿರ್ದೇಶಕರ ಗಮನಕ್ಕೆ ತಂದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿ ಬೆಳಿಗ್ಗೆ 11.47ರ ಸುಮಾರಿಗೆ ವ್ಯಕ್ತಿಯೊಬ್ಬರು ರೈತರಿಂದ ಸುಮಾರು ಏಳೆಂಟು ಕೆ.ಜಿ.ಯಷ್ಟು ಗೂಡು ಕದ್ದು ಬ್ಯಾಗಿಗೆ ಇಳಿಸುತ್ತಿರುವುದು ಕಂಡುಬಂದಿತು.

‘ಹೀಗೆ ಕದ್ದ ಗೂಡುಗಳನ್ನು ಕಳ್ಳರು ಇದೇ ಮಾರುಕಟ್ಟೆಯಲ್ಲಿಯೇ ವ್ಯಾಪಾರ ಮಾಡುತ್ತಿದ್ದಾರೆ. ಅಧಿಕಾರಿಗಳು ಕ್ರಮ ಕೈಗೊಳ್ಳದೇ ಮಧ್ಯವರ್ತಿಗಳಂತೆ ವರ್ತಿಸುತ್ತಿದ್ದಾರೆ’ ಎಂದು ಫರ್ವೀಜ್‌ ಪಾಷ ದೂರಿದರು.

* * 

ಕೇವಲ ಉದ್ದಿಮೆಯಲ್ಲಿ ತೊಡಗಿಸಿಕೊಂಡವರಿಗೆ ರೀಲರ್‌ ಗುರುತು ಪತ್ರ ವಿತರಿಸಿ, ಮಾರುಕಟ್ಟೆಗೆ ಪ್ರವೇಶ ನೀಡಲಾಗುವುದು
ಕೆ.ಎಸ್. ಮಂಜುನಾಥ್‌ ನಿರ್ದೇಶಕ, ರೇಷ್ಮೆ ಇಲಾಖೆ

Comments
ಈ ವಿಭಾಗದಿಂದ ಇನ್ನಷ್ಟು
‘ತೃತೀಯ ಲಿಂಗಿಗಳನ್ನು ಮನುಷ್ಯರಂತೆ ಕಾಣಿ’

ರಾಮನಗರ
‘ತೃತೀಯ ಲಿಂಗಿಗಳನ್ನು ಮನುಷ್ಯರಂತೆ ಕಾಣಿ’

17 Mar, 2018
ನೈಜ ಕಲಾವಿದರ ನಿರ್ಲಕ್ಷ್ಯ ಆರೋಪ

ರಾಮನಗರ
ನೈಜ ಕಲಾವಿದರ ನಿರ್ಲಕ್ಷ್ಯ ಆರೋಪ

17 Mar, 2018

ಸಾತನೂರು
ಕನಕಪುರ: ನಕಲಿ ವೈದ್ಯರ 2 ಕ್ಲಿನಿಕ್‌ಗಳಿಗೆ ಬೀಗಮುದ್ರೆ

ನಕಲಿ ವೈದ್ಯಕೀಯ ಸೇವೆ ನೀಡುತ್ತಿದ್ದ ಕ್ಲಿನಿಕ್‌ಗಳ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿ ತಂಡ ದಾಳಿ ನಡೆಸಿ ಬೀಗಮುದ್ರೆ ಹಾಕಿರುವುದು ತಾಲ್ಲೂಕಿನ ಸಾತನೂರಿನಲ್ಲಿ ನಡೆದಿದೆ.

17 Mar, 2018

ರಾಮನಗರ
‘ಆಧುನಿಕತೆಯಿಂದ ಜಾನಪದ ನಾಶ‘

ಆಧುನಿಕತೆಯ ಭರಾಟೆಯಲ್ಲಿ ಜಾನಪದ ನಶಿಸಿ ಹೋಗುತ್ತಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ...

17 Mar, 2018

ಕಸಬಾ
‘ಅಮೂಲ್ಯ ನೀರನ್ನು ಪ್ರೀತಿಸಿ ಸಂರಕ್ಷಿಸಿ’

ಹಿಂದಿನ ತಲೆಮಾರಿನಲ್ಲಿ 10 ಅಡಿ ಆಳದಲ್ಲಿದ್ದ ಅಂತರ್ಜಲ ಮಟ್ಟ ಈಗ 1,000 ಅಡಿಗೆ ಇಳಿದಿದೆ. ಮುಂದೆ ಹನಿ ನೀರು ಸಿಗದಿರುವ ಪರಿಸ್ಥಿತಿ ಎದುರಾಗಲಿದೆ ಎಂದು...

17 Mar, 2018