ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಸ್‌ಎಲ್‌ಸಿ: ಪ್ರವೇಶಪತ್ರ ಆನ್‌ಲೈನ್‌ನಲ್ಲಿ ಒದಗಿಸಲು ಚಿಂತನೆ

Last Updated 16 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ನೋಂದಣಿ ವ್ಯವಸ್ಥೆಯನ್ನು ಈ ಬಾರಿ ಆನ್‌ಲೈನ್ ಮೂಲಕ ನಿರ್ವಹಿಸುತ್ತಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಪರೀಕ್ಷಾ ಪ್ರವೇಶ ಪತ್ರಗಳನ್ನೂ ಆನ್‌ಲೈನ್‌ನಲ್ಲಿಯೇ ಒದಗಿಸಲು ಚಿಂತಿಸುತ್ತಿದೆ.

ಈ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ವಿವರಗಳನ್ನು ಈ ಹಿಂದಿನಂತೆ ಓ.ಎಂ.ಆರ್ ಬದಲು ಎಸ್‌.ಎ.ಟಿ.ಎಸ್ (ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ) ಮೂಲಕ ಸಲ್ಲಿಸಲು ಸೂಚಿಸಲಾಗಿದೆ. ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳ ಮುಖ್ಯಸ್ಥರು ತಮ್ಮ ವಿದ್ಯಾರ್ಥಿಗಳ ವಿವರಗಳನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಬೇಕು.

ಇದರ ಮುಂದುವರಿದ ಭಾಗವಾಗಿ ಪ್ರವೇಶ ಪತ್ರಗಳನ್ನೂ ಪಿಡಿಎಫ್‌ ಮಾದರಿಯಲ್ಲಿ ಒದಗಿಸಬಹುದು. ಶಾಲೆಗಳ ಮುಖ್ಯಸ್ಥರು ಮಾತ್ರ ತಮ್ಮ ಶಾಲೆ ವಿದ್ಯಾರ್ಥಿಗಳ ವಿವರಗಳನ್ನು ವೀಕ್ಷಿಸಲು ಮತ್ತು ಅಲ್ಲಿಯೇ ಪ್ರಿಂಟ್ ತೆಗೆದು ವಿದ್ಯಾರ್ಥಿಗಳಿಗೆ ನೀಡಬಹುದು. ವಿದ್ಯಾರ್ಥಿ ಮಾಹಿತಿಯಲ್ಲಿ ತಪ್ಪಾಗಿದ್ದಲ್ಲಿ ಆನ್‌ಲೈನ್ ಮೂಲಕವೇ ಮಂಡಳಿಯ ಗಮನಕ್ಕೆ ತರುವುದಕ್ಕೂ ಅವಕಾಶ ಇರುತ್ತದೆ. ಇದರಿಂದ ಎಲ್ಲ ಪ್ರವೇಶ ಪತ್ರಗಳನ್ನು ಒಂದು ಕಡೆ ಮುದ್ರಿಸಿ, ಅವುಗಳನ್ನು ಶಾಲೆಗಳಿಗೆ ತಲುಪಿಸುವಂತಹ ಆರ್ಥಿಕ ವೆಚ್ಚ ಮತ್ತು ದೈಹಿಕ ಶ್ರಮ ತಪ್ಪುತ್ತದೆ ಎಂಬುದು ಮಂಡಳಿಯ ಉದ್ದೇಶ.

ಈ ಕುರಿತು ಮಾತನಾಡಿದ ಮಂಡಳಿ ನಿರ್ದೆಶಕಿ ವಿ. ಸುಮಂಗಲಾ, ‘ಪ್ರವೇಶ ಪತ್ರಗಳನ್ನು ಈ ಬಾರಿ ಆನ್‌ಲೈನ್ ಮೂಲಕ ಶಾಲೆಗಳಿಗೆ ಒದಗಿಸುವ ಬಗ್ಗೆ ಚಿಂತಿಸಲಾಗಿದೆ. ಆದರೆ, ಇನ್ನೂ ಅಂತಿಮಗೊಂಡಿಲ್ಲ. ಎಲ್ಲ ಶಾಲೆಗಳು ವಿದ್ಯಾರ್ಥಿಗಳ ವಿವರವನ್ನು ಆನ್‌ಲೈನ್ ಮೂಲಕ ಭರ್ತಿ ಮಾಡಿದ ಬಳಿಕವಷ್ಟೇ ಇದು ಸಾಧ್ಯ’ ಎಂದರು.

ಆನ್‌ಲೈನ್ ಮೂಲಕ ವಿವರ ಭರ್ತಿ ಮಾಡಲು ಕೊನೆಯ ದಿನಾಂಕವನ್ನು ಡಿ.20ರವರೆಗೆ ವಿಸ್ತರಿಸಲಾಗಿದೆ ಎಂದು ಸುಮಂಗಲಾ ವಿವರಿಸಿದರು.

ಮುಖ್ಯಾಂಶಗಳು

* ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳ ವಿವರ ಲಭ್ಯ

* ಪ್ರವೇಶ ಪತ್ರಗಳನ್ನು ಶಾಲೆಯಲ್ಲಿಯೇ ಪ್ರಿಂಟ್ ತೆಗೆಯಬಹುದು

* ತಪ್ಪುಗಳಿದ್ದರೆ ತಿದ್ದುಪಡಿಗೆ ಕಳುಹಿಸಲೂ ಅವಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT