ಹಿರೀಸಾವೆ

ಎರಡು ಗುಂಪುಗಳಿಂದ ಪ್ರತ್ಯೇಕ ಸ್ವಾಗತ

‘ತಾಲ್ಲೂಕು ಘಟಕದ ಅಧ್ಯಕ್ಷರು ಪಕ್ಷದ ಮೂಲ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ’

ಹಿರೀಸಾವೆ: ತಾಲ್ಲೂಕು ಬಿಜೆಪಿ ಕಾರ್ಯಕರ್ತರ ನಡುವೆ ಇರುವ ಅಸಮಾಧಾನ ಜಿಲ್ಲಾ ಉಸ್ತುವಾರಿ ವಿ.ಸೋಮಣ್ಣ ಅವರ ಮುಂದೆ ಗುರುವಾರ ಬಹಿರಂಗವಾಯಿತು. ಬಿಜೆಪಿ ಜಿಲ್ಲಾ ಉಸ್ತುವಾರಿಯಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಗುರುವಾರ ಸೋಮಣ್ಣ ಜಿಲ್ಲೆಗೆ ಬಂದಿದ್ದರು. ತಾಲ್ಲೂಕು ಘಟಕದ ಅಧ್ಯಕ್ಷ ಶಿವನಂಜೇಗೌಡರ ನೇತೃತ್ವದಲ್ಲಿ ಕೆಲ ಕಾರ್ಯಕರ್ತರು ಹಾಸನ ಜಿಲ್ಲಾ ಗಡಿಭಾಗವಾದ ಕಿರೀಸಾವೆಯಲ್ಲಿ ಸ್ವಾಗತಿಸಿದರೆ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬೂಕದ ಶಿವಣ್ಣ ನೇತೃತ್ವದಲ್ಲಿ ಕೆಲ ಕಾರ್ಯಕರ್ತರು ಹಿರೀಸಾವೆ ಶ್ರೀಕಂಠಯ್ಯ ವೃತ್ತದಲ್ಲಿ ಪ್ರತ್ಯೇಕವಾಗಿ ಸ್ವಾಗತಿಸಿದರು.

‘ತಾಲ್ಲೂಕು ಘಟಕದ ಅಧ್ಯಕ್ಷರು ಪಕ್ಷದ ಮೂಲ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ’ ಎಂದು ಕಾರ್ಯಕರ್ತ ಕಬ್ಬಳಿಯ ವೆಂಕಟೇಶ್‌ ಆರೋಪಿಸಿದರು. ಜತೆಗೆ ಪಕ್ಷದ ಕಚೇರಿಯನ್ನು ಈಗ ಇರುವ ಸ್ಥಳದಿಂದ ಬೇರೆಗಡೆಗೆ ಸ್ಥಳಾಂತರಿಸಬೇಕು ಎಂದು ವಿ. ಸೋಮಣ್ಣ ಅವರ ಬಳಿ ಮನವಿ ಮಾಡಿದರು.

ಜ. 7 ಅಥವಾ 8ರಂದು ತಾಲ್ಲೂಕು ಕಾರ್ಯಕರ್ತರ ಸಭೆ ನಡೆಸಲಾಗುವುದು. ಆ ಸಮಯದಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಸೋಮಣ್ಣ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು. ಮುಖಂಡ ಪರಮ ಗಂಗಾಧರ್ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಹಾಸನ
ಹೆಚ್ಚುವರಿ ಮತಗಟ್ಟೆ; ಪೂರಕ ಮಾಹಿತಿ ನೀಡಿ

ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಗತ್ಯವಿರುವ ಕಡೆ ಹೆಚ್ಚುವರಿ ಮತಗಟ್ಟೆಗಳ ಸ್ಥಾಪನೆಗೆ ಪೂರಕ ಮಾಹಿತಿಯನ್ನು ಶೀಘ್ರ ನೀಡಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌. ಪೂರ್ಣಿಮ ತಹಶೀಲ್ದಾರುಗಳಿಗೆ...

20 Mar, 2018

ಹಾಸನ
ದಾಳಿಂಬೆ ಕೆ.ಜಿಗೆ ₹ 20 ಏರಿಕೆ

ವಾರದ ಹಿಂದ ಒಂದು ಕೆ.ಜಿ. ದಾಳಿಂಬೆ ಹಣ್ಣು 120ಕ್ಕೆ ಮಾರಾಟವಾಗುತ್ತಿತ್ತು, ಹಬ್ಬದ ಹಿನ್ನೆಲೆ ಈವಾರ ಒಂದು ಕೆ.ಜಿ. ₹ 140ಕ್ಕೆ ಮಾರಾಟವಾಗುತ್ತಿದ್ದು, ಕೆ.ಜಿ. ಗೆ...

20 Mar, 2018
ಇವಿಎಂ ಬಿಟ್ಟು; ಬ್ಯಾಲೆಟ್‌ ಬಳಕೆಗೆ ಮನವಿ

ಹಾಸನ
ಇವಿಎಂ ಬಿಟ್ಟು; ಬ್ಯಾಲೆಟ್‌ ಬಳಕೆಗೆ ಮನವಿ

20 Mar, 2018
ಭಾರತಕ್ಕಿದೆ ಜಗತ್ತಿಗೇ ಆಹಾರ ಪೂರೈಸುವ ಸಾಮರ್ಥ್ಯ

ಸಕಲೇಶಪುರ
ಭಾರತಕ್ಕಿದೆ ಜಗತ್ತಿಗೇ ಆಹಾರ ಪೂರೈಸುವ ಸಾಮರ್ಥ್ಯ

19 Mar, 2018
ಪ್ರಜಾಪ್ರಭುತ್ವ ಸಬಲೀಕರಣ ಅಭಿಯಾನ

ಹಾಸನ
ಪ್ರಜಾಪ್ರಭುತ್ವ ಸಬಲೀಕರಣ ಅಭಿಯಾನ

17 Mar, 2018