ಆಯ್ಕೆಯ ಹಗ್ಗ–ಜಗ್ಗಾಟ

ಈ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ, ಎರಡೂ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಿಸಿ, ಆ ಮೂಲಕ ಶೈಕ್ಷಣಿಕ ಪ್ರಗತಿಗೆ ರಾಜ್ಯಪಾಲರು ಕಾರಣೀಭೂತರಾಗುತ್ತಾರೆ ಎಂದು ಆಶಿಸಬಹುದೇ?

ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳ ಕುಲಪತಿಗಳ ಆಯ್ಕೆ ಪ್ರಕ್ರಿಯೆ ಒಂದು ವರ್ಷದಿಂದಲೂ ನಡೆಯುತ್ತಿದೆ. ಕುಲಪತಿಗಳ ಆಯ್ಕೆಗೆ ಮತ್ತೊಮ್ಮೆ ಹೊಸ ಹೆಸರು ಸೂಚಿಸಲು ರಾಜ್ಯಪಾಲರು ಸೂಚನೆ ನೀಡಿದ್ದಾರೆ ಎಂದು ಈಚೆಗೆ ಮಾಧ್ಯಮಗಳು ವರದಿ ಮಾಡಿವೆ. ಅದನ್ನು ಓದಿದ ಬಳಿಕ, ಈ ಪ್ರಕ್ರಿಯೆ ಈ ಕಾಲಕ್ಕೆ ಮುಗಿಯುವಂತೆ ಕಾಣಿಸುತ್ತಿಲ್ಲ ಎಂದೆನಿಸುತ್ತದೆ.

ಯಾಕೆ ಹೀಗೆ? ಶೋಧನಾ ಸಮಿತಿಯಿಂದ ಶಿಫಾರಸುಗೊಂಡ ಹೆಸರುಗಳು, ಅದಕ್ಕೂ ಮೊದಲು ಸರ್ಕಾರ ಶಿಫಾರಸು ಮಾಡಿದ ಹೆಸರುಗಳನ್ನು ಸಹ ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಹೀಗಿರುವಾಗ ರಾಜ್ಯಪಾಲರೇ ಮುತುವರ್ಜಿ ವಹಿಸಿ, ಉನ್ನತ ಶಿಕ್ಷಣ ಇಲಾಖೆ, ಶೋಧನಾ ಸಮಿತಿ ಸದಸ್ಯರು ಹಾಗೂ ತಮಗೆ ವಿಶ್ವಾಸವಿರುವ ಕೆಲವರನ್ನು ರಾಜಭವನಕ್ಕೆ ಕರಿಯಿಸಿಕೊಂಡು ಚರ್ಚಿಸಿ, ಒಂದು ಹೆಸರನ್ನು ಅಂತಿಮಗೊಳಿಸುವುದು ಕಷ್ಟವೇ? ಈ ಪ್ರಕ್ರಿಯೆಗೆ ವರ್ಷಗಟ್ಟಲೆ ಸಮಯ ಬೇಕೇ?

ಈ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ, ಎರಡೂ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಿಸಿ, ಆ ಮೂಲಕ ಶೈಕ್ಷಣಿಕ ಪ್ರಗತಿಗೆ ರಾಜ್ಯಪಾಲರು ಕಾರಣೀಭೂತರಾಗುತ್ತಾರೆ ಎಂದು ಆಶಿಸಬಹುದೇ?

ಸಿ.ಎಂ. ಕಾಳೇಗೌಡ, ಪಾಂಡವಪುರ, ಮಂಡ್ಯ

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ಹಾಸ್ಯಾಸ್ಪದ ಹೇಳಿಕೆ!

‘ಬಿಜೆಪಿಯವರಿಗೆ ಸಂವಿಧಾನ ಗೊತ್ತಿಲ್ಲ. ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ’ ಎಂದು ಮುಖ್ಯಮಂತ್ರಿ ಟೀಕಿಸಿದ್ದಾರೆ. ಆಡಳಿತ ಪಕ್ಷದವರಂತೆ ಬಿಜೆಪಿಯವರೂ ಪ್ರಜಾಸತ್ತಾತ್ಮಕವಾಗಿ ಜನರಿಂದಲೇ ಆರಿಸಿ ಬಂದವರು.

17 Mar, 2018

ವಾಚಕರವಾಣಿ
‘ನಿವೃತ್ತಿವೇತನ ಭಾಗ್ಯ’ ಕೊಡಿ

ನಾಡಿನ ಜನರಿಗೆ ಹಲವು ಭಾಗ್ಯಗಳನ್ನು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಾರಿಗೆ ಸಂಸ್ಥೆಯ ಸಿಬ್ಬಂದಿಗೂ ‘ನಿವೃತ್ತಿನೇತನ ಭಾಗ್ಯ’ವನ್ನು ನೀಡಿ ನಮ್ಮ ಕುಟುಂಬಗಳಲ್ಲಿ ಬೆಳಕು ಕಾಣುವಂತೆ...

17 Mar, 2018

ವಾಚಕರವಾಣಿ
ಮತ್ತೊಬ್ಬ ಬಿಜ್ಜಳ?

21ನೇ ಶತಮಾನದ ಪ್ರಜಾಪ್ರಭುತ್ವದ ಸಂದರ್ಭದಲ್ಲಿಯೇ ಧರ್ಮದ ಮಾನ್ಯತೆಗೆ ಇಂಥ ಪರಿಸ್ಥಿತಿ ಇರುವಾಗ, 12ನೇ ಶತಮಾನದ ರಾಜಾಳ್ವಿಕೆಯ ಸಂದರ್ಭದಲ್ಲಿ ಈ ಧರ್ಮ ಮೇಲಾಟ ಹೇಗಿದ್ದಿರಬಹುದು ಎಂಬುದು...

16 Mar, 2018

ವಾಚಕರವಾಣಿ
ಇದು ಶೋಷಣೆಯಲ್ಲವೇ?

ಉಳಿತಾಯ ಖಾತೆಗಳಿಗೆ ದಂಡ ಶುಲ್ಕ ವಿಧಿಸುವ ಕ್ರಮ ಕಳೆದ ವರ್ಷದಿಂದ ಜಾರಿಗೆ ಬಂದಿದೆ. ಸುಮಾರು ಐದು ವರ್ಷಗಳ ಹಿಂದೆ ಈ ರೀತಿ ಶುಲ್ಕ ವಿಧಿಸುವ...

16 Mar, 2018

ವಾಚಕರವಾಣಿ
ಈ ತಾರತಮ್ಯ ಯಾಕೆ?

ಕಳೆದ ಒಂದು ವರ್ಷದಿಂದ ಹುಬ್ಬಳ್ಳಿ– ಮೈಸೂರು ನಡುವೆ ಓಡಾಡುವ ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೇನೆ. ನನಗಾದ ಅನುಭವವನ್ನು ಇಲ್ಲಿ ಹೇಳುತ್ತಿದ್ದೇನೆ.

16 Mar, 2018