ಆಳಂದ

‘ರೈತರ ಹಿತ ಕಾಪಾಡಲು ಸರ್ಕಾರಗಳು ವಿಫಲ’

‘ಭಾರತ ಕೃಷಿ ಪ್ರಧಾನ ದೇಶ. ವೈವಿಧ್ಯಮಯ ಕೃಷಿ ಚಟುವಟಿಕೆಗಳು ಕೈಗೊಳ್ಳಲು ಅನುಕೂಲಕರ ನೈಸರ್ಗಿಕ ಸಂಪತ್ತು ಲಭ್ಯವಾದರೂ ರೈತರ ಹಿತ ಕಾಪಾಡಲು ನಮ್ಮ ಸರ್ಕಾರಗಳ ನೀತಿ ವಿಫಲವಾಗಿವೆ’

ಆಳಂದ: ‘ಭಾರತ ಕೃಷಿ ಪ್ರಧಾನ ದೇಶ. ವೈವಿಧ್ಯಮಯ ಕೃಷಿ ಚಟುವಟಿಕೆಗಳು ಕೈಗೊಳ್ಳಲು ಅನುಕೂಲಕರ ನೈಸರ್ಗಿಕ ಸಂಪತ್ತು ಲಭ್ಯವಾದರೂ ರೈತರ ಹಿತ ಕಾಪಾಡಲು ನಮ್ಮ ಸರ್ಕಾರಗಳ ನೀತಿ ವಿಫಲವಾಗಿವೆ’ ಎಂದು ರೈತ ಮುಖಂಡ ಮೌಲಾ ಮುಲ್ಲಾ ಕಳವಳ ವ್ಯಕ್ತಪಡಿಸಿದರು.

ನೇಕಾರ ಕಾಲೋನಿಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ ನಿವಾಸದಲ್ಲಿ ಕಾಂಗ್ರೆಸ್‌ ಕಿಸಾನ ಘಟಕ ಮತ್ತು ಅಖಿಲ ಭಾರತ ಕಿಸಾನ ಸಭಾ ಸಹಯೋಗದಲ್ಲಿ ಶನಿವಾರ ‘ರೈತ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎರಡು ದಶಕಗಳಿಂದ ರೈತರಿಗೆ ಸಂಕಷ್ಟ ಹೆಚ್ಚುತ್ತಿದೆ, ಉದಾರೀಕರಣ ನೀತಿಯಿಂದ ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲವಾಗಿದೆ. ಸರ್ಕಾರವು ನೀರಿನ ಸಂಗ್ರಹ, ಮಣ್ಣಿನ ಸಂರಕ್ಷಣೆಗೆ ಹಾಕಿಕೊಂಡ ಯೋಜನೆಗಳು ಸದ್ಬಳಕೆ ಯಾಗುತ್ತಿಲ್ಲ’ ಎಂದು ಆರೋಪಿಸಿದರು.

ಕಾಂಗ್ರೆಸ್ ಕಿಸಾನ ಘಟಕದ ರಾಜ್ಯ ಕಾರ್ಯದರ್ಶಿ ರಮೇಶ ಲೋಹಾರ ರೈತ ಮುಖಂಡರಾದ ಪ್ರಕಾಶ ಜಾನೆ, ಸಲಾಂ ಸಗರಿ, ಸುಭಾಷ ಪೌಜಿ, ಕಲ್ಯಾಣಿ ತುಕಾಣೆ, ರಾಜಶೇಖರ ಶಿವಮೂರ್ತಿ ಕಿಸಾನ ಘಟಕದ ಜಿಲ್ಲಾಧ್ಯಕ್ಷ ಸುಭಾಷ ಪಂಚಾಳ ಪುರಸಭೆ ಉಪಾಧ್ಯಕ್ಷ ಅಜಗರಲಿ ಹವಾಲ್ದಾರ್, ಸದಸ್ಯರಾದ ಲಿಂಗರಾಜ ಪಾಟೀಲ, ವಹೀದ್ ಜರ್ಧಿ, ವ್ಯವಸಾಯ ಸಂಘದ ಅಧ್ಯಕ್ಷ ಶಂಕರರಾವ ಹತ್ತಿ, ಜಿಪಂ ಮಾಜಿ ಸದಸ್ಯೆ ಪೂಜಾ ಲೋಹಾರ, ಕಬೀರಾ ಬೇಗಂ, ಶೋಭಾ ಹತ್ತಿ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಚಿತ್ತಾಪುರ
‘ಆಯ್ಕೆ ನಿಮ್ಮದು; ಅಭಿವೃದ್ಧಿ ನಮ್ಮದು–ಪ್ರಿಯಾಂಕ್

ನಾಲ್ಕೂವರೆ ವರ್ಷ ಮಾಡಿರುವ ಅಭಿವೃದ್ಧಿ, ನೀಡಿರುವ ಸಾಮಾಜಿಕ ಆಧರಿಸಿ ಜನರ ಬಳಿ ಮತ ಕೇಳುತ್ತೇನೆ. ಅಭಿವೃದ್ಧಿ ಕೆಲಸಗಳೇ ಗೆಲುವಿಗೆ ಶ್ರೀರಕ್ಷೆ. ಪ್ರತಿನಿಧಿ ಆಯ್ಕೆ ಮಾಡುವ...

18 Apr, 2018
ರಸ್ತೆ ,ಕುಡಿಯುವ ನೀರಿಗಾಗಿ ಪರದಾಟ

ಅಫಜಲಪುರ
ರಸ್ತೆ ,ಕುಡಿಯುವ ನೀರಿಗಾಗಿ ಪರದಾಟ

18 Apr, 2018
‘ಕಾಯಕಯೋಗಿ’ ಜಯಂತಿಗೆ ನಗರ ಸಜ್ಜು

ಕಲಬುರ್ಗಿ
‘ಕಾಯಕಯೋಗಿ’ ಜಯಂತಿಗೆ ನಗರ ಸಜ್ಜು

18 Apr, 2018
‘ಚಂದ್ರಕಾಂತ ಪಾಟೀಲ ಗೆಲ್ಲಲ್ಲ; ನಮೋಶಿಗೇ ಟಿಕೆಟ್‌ ಕೊಡಿ’

ಕಲಬುರ್ಗಿ
‘ಚಂದ್ರಕಾಂತ ಪಾಟೀಲ ಗೆಲ್ಲಲ್ಲ; ನಮೋಶಿಗೇ ಟಿಕೆಟ್‌ ಕೊಡಿ’

18 Apr, 2018

ಕಲಬುರ್ಗಿ
ಅತ್ಯಾಚಾರ, ಭ್ರೂಣಹತ್ಯೆ ವಿರುದ್ಧ ಹೋರಾಟ

‘ದೇಶದಲ್ಲಿ ವ್ಯಾಪವಾಗಿ ನಡೆಯುತ್ತಿರುವ ಅತ್ಯಾಚಾರ, ಭ್ರೂಣಹತ್ಯೆಗಳನ್ನು ತಡೆಗಟ್ಟಲು ಬಸವಣ್ಣನವರ ವಚನ ಸಂದೇಶದ ಮೂಲಕ ಹೋರಾಟ ಮಾಡೋಣ’ ಎಂದು ನವದೆಹಲಿಯ ಬಂಧುಮುಕ್ತಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ...

18 Apr, 2018