ತುಮಕೂರು

ಸಂವಿಧಾನ ಸ್ವರೂಪ ಬದಲಾಯಿಸುವ ಹುನ್ನಾರ

‘ದೇಶವ್ಯಾಪಿ ಅನೇಕ ರಾಜಕೀಯ ಪಕ್ಷಗಳಿವೆ. ಕಾಂಗ್ರೆಸ್, ಜೆಡಿಎಸ್ ಸೇರಿ ಅನೇಕ ರಾಜಕೀಯ ಪಕ್ಷಗಳು ಬಿಜೆಪಿ ಸೋಲಿಸಬೇಕು ಎಂದೇ ಹೇಳುತ್ತವೆ. ಆದರೆ, ವಾಸ್ತವಿಕವಾಗಿ ಸಂಘಟಿತ ಪ್ರಯತ್ನ ಎಲ್ಲೂ ಕಾಣುತ್ತಿಲ್ಲ.

ಸಮ್ಮೇಳನದಲ್ಲಿ ಪಿ.ವಿ.ಲೋಕೇಶ್ ಮಾತನಾಡಿದರು. ಶಿವಣ್ಣ, ಗಿರೀಶ್, ಎನ್.ಸ್ವಾಮಿ, ರಾಮಚಂದ್ರಪ್ಪ, ಎನ್.ಕೆ.ಸುಬ್ರಮಣ್ಯ, ಜ್ಯೋತಿ ಇದ್ದರು

ತುಮಕೂರು: ‘ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರವು ಸಂವಿಧಾನದ ಮೂಲ ಸ್ವರೂಪವನ್ನೇ ಬದಲಾಯಿಸುವ ಹುನ್ನಾರ ನಡೆಸುತ್ತಿದೆ. ಇದು ಅತ್ಯಂತ ಅಪಾಯಕಾರಿಯಾದುದು. ಸಂಘಟಿತ ಹೋರಾಟದಿಂದ ಇಂತಹ ಅಪಾಯಗಳನ್ನು ಹಿಮ್ಮೆಟ್ಟಿಸಲು ಸಾಧ್ಯ’ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಪಿ.ವಿ.ಲೋಕೇಶ್ ಹೇಳಿದರು.

ಭಾರತ ಕಮ್ಯೂನಿಸ್ಟ್ ಪಕ್ಷ(ಸಿಪಿಐ) ತುಮಕೂರು ಜಿಲ್ಲಾ ಘಟಕವು  ಭಾನುವಾರ ಆಯೋಜಿಸಿದ್ದ 12ನೇ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ‘ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ. ಸಂವಿಧಾನಕ್ಕೆ ತಿದ್ದುಪಡಿ ತರಬಹುದು.  ಮತ್ತೊಂದೆಡೆ ಕೋಮುವಾದಕ್ಕೆ ಪುಷ್ಟಿ ನೀಡುತ್ತಿದೆ. ಜಾತ್ಯತೀತ ಶಕ್ತಿಗಳು ಏಕತೆಯಿಂದ ಹೋರಾಟ ನಡೆಸಿದರೆ ಮಾತ್ರ ಇದನ್ನು ತಡೆಯಬಹುದು’ ಎಂದು ಅಭಿಪ್ರಾಯಪಟ್ಟರು.

‘ದೇಶವ್ಯಾಪಿ ಅನೇಕ ರಾಜಕೀಯ ಪಕ್ಷಗಳಿವೆ. ಕಾಂಗ್ರೆಸ್, ಜೆಡಿಎಸ್ ಸೇರಿ ಅನೇಕ ರಾಜಕೀಯ ಪಕ್ಷಗಳು ಬಿಜೆಪಿ ಸೋಲಿಸಬೇಕು ಎಂದೇ ಹೇಳುತ್ತವೆ. ಆದರೆ, ವಾಸ್ತವಿಕವಾಗಿ ಸಂಘಟಿತ ಪ್ರಯತ್ನ ಎಲ್ಲೂ ಕಾಣುತ್ತಿಲ್ಲ. ವಿಧಾನಸಭಾ, ಲೋಕಸಭೆ ಚುನಾವಣೆಗಳು ಪ್ರಧಾನಿ ನರೇಂದ್ರ ಮತ್ತು ರಾಹುಲ್ ಗಾಂಧಿ ನಡುವಿನ ಯುದ್ಧವೆಂಬುವ ರೀತಿ ಈಚೆಗೆ ಬಿಂಬಿಸಲಾಗುತ್ತಿದೆ. ಬಿಜೆಪಿಯವರೇ ಬುದ್ಧಿಪೂರ್ವಕವಾಗಿ ಮಾಡಿದ ತಂತ್ರವಿದು’ ಎಂದು ಆರೋಪಿಸಿದರು.

‘ಗುಜರಾತ್ ಮತ್ತು ಪಶ್ಚಿಮ ಬಂಗಾಲದಲ್ಲಿ ಹಣ ಬಲ, ತೋಳ್ಬಲದಿಂದ ಮತ್ತು ಪ್ರಧಾನಿಯೇ ಬೀದಿ ಬೀದಿಗಳಲ್ಲಿ ಭಾಷಣ ಮಾಡಿದ್ದರಿಂದ ಬಿಜೆಪಿ ಗೆದ್ದಿದೆ. ಆದರೆ, ರಾಜ್ಯದಲ್ಲಿ ನಡೆಯುವ ಮುಂದಿನ ವಿಧಾನ ಸಭಾ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲೇಬೇಕು’ ಎಂದು ಕರೆ ನೀಡಿದರು.

’ಜನಪರ, ರೈತ ಪರ, ಬಡವರ ಯಾವ ಯೋಜನೆಗಳನ್ನೂ ಸಮರ್ಪಕವಾಗಿ ಅನುಷ್ಠಾನ ಮಾಡಿಲ್ಲ.ಹಿಂದೆ ಯುಪಿಎ ಸರ್ಕಾರದ ನೀತಿಗಳು ಜನವಿರೋಧಿಯಾಗಿವೆ ಎಂದು ಜನರು ಮೋದಿ ಆಯ್ಕೆ ಮಾಡಿದರೊ ಅದೇ ಮೋದಿ ಅವರು ಯುಪಿಎ ಸರ್ಕಾರದಲ್ಲಿದ್ದ ನೀತಿಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಜನವಿರೋಧಿ ಆಡಳಿತ ನಡೆಸುತ್ತಿದ್ದಾರೆ’ ಎಂದು ದೂರಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ, ‘ಎಡಪಕ್ಷಗಳು ಮಾತ್ರ ದೇಶದಲ್ಲಿ ಚಳವಳಿ ಕಟ್ಟುತ್ತಿವೆ. ಸದಾ ಜನಪರವಾಗಿ ಕೆಲಸ ಮಾಡುತ್ತದೆ. ಚುನಾವಣೆ ಬಂದಾಗ ಮಾತ್ರ ಜನರು ಈ ಎಡಪಕ್ಷಗಳನ್ನು ಮರೆಯುತ್ತಿರುವುದು ವಿಪರ್ಯಾಸವಾಗಿದೆ. ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ’ ಎಂದರು.

‘ದೇಶದಲ್ಲಿ ರೈತಪರ, ಕಾರ್ಮಿಕರ ಪರ, ಬಡವರ ಯಾವ ಸರ್ಕಾರಗಳೂ ಇಲ್ಲ. ಬರೀ ಕಾರ್ಪೊರೇಟ್ ಕಂಪೆನಿಗಳ ಪರವಾಗಿವೆ. ಇಂತಹ ಸ್ಥಿತಿಯಲ್ಲಿ ದುಡಿಯುವ ವರ್ಗ, ರೈತರು, ಕಾರ್ಮಿಕರು, ಅಂಗನವಾಡಿ, ಆಶಾ, ಬಿಸಿಯೂಟ ನೌಕರರು ಸೇರಿದಂತೆ ಶ್ರಮಿಕ ವರ್ಗದವರು ಎಡಪಕ್ಷಗಳ ಹೋರಾಟಕ್ಕೆ ಬೆಂಬಲವಾಗಿರಬೇಕು’ ಎಂದು ಹೇಳಿದರು. ಎಸ್‌.ಯು.ಸಿ.ಐ ಜಿಲ್ಲಾ ಮುಖಂಡ ಎನ್.ಸ್ವಾಮಿ ಮಾತನಾಡಿ, ‘ಜಾತಿ, ಧರ್ಮ ಮೀರಿದ ಚಳವಳಿಯಿಂದ ಮಾತ್ರ ಕೋಮುವಾದ ಹಿಮ್ಮೆಟ್ಟಿಸಲು ಸಾಧ್ಯ’ ಎಂದು ಹೇಳಿದರು.

ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಕೆ.ರಾಮಚಂದ್ರಪ್ಪ ಮಾತನಾಡಿ, ‘ಬಡವರು, ಕಾರ್ಮಿಕರು, ದುಡಿಯುವ ವರ್ಗದ ಹಿತ ಕಡೆಗಣಿಸುವ ಸರ್ಕಾರಗಳ ಧೋರಣೆಗಳನ್ನು ಖಂಡಿಸಬೇಕು. ಜಾತಿ, ಧರ್ಮ, ಕೋಮುವಾದ. ಸಂಘಪರಿವಾರ ಅಣತಿಯಂತೆ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಯಾರೂ ಬೆಂಬಲಿಸಬಾರದು’ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಸ್ವಾಮಿನಾಥ್ ವರದಿ ಅನುಷ್ಠಾನ ಮಾಡುತ್ತೇನೆ. ದೇಶದ ಪ್ರತಿ ನಾಗರಿಕರ ಬಾಂಕ್ ಖಾತೆಗೆ ₹ 15 ಲಕ್ಷ ಜಮೆ ಮಾಡುತ್ತೇನೆ. ಕಪ್ಪು ಹಣ ತರುತ್ತೇನೆ ಎಂದು ಹೇಳಿದ್ದರು. ಆದರೆ, ಯಾವುದನ್ನೂ ಮಾಡಿಲ್ಲ. ಕನಿಷ್ಠ ಪಕ್ಷ ಶ್ರಮಿಕ ಕಾರ್ಮಿಕರ ಹಿತ ಕಾಪಾಡುವ ಪ್ರಯತ್ನವನ್ನೂ ಮಾಡಿಲ್ಲ ಎಂದು ಆರೋಪಿಸಿದರು.

ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ಶಿವಣ್ಣ, ಜಿಲ್ಲಾ ಕಾರ್ಯದರ್ಶಿ ಕಂಬೇಗೌಡ, ಮುಖಂಡ ಗಿರೀಶ್, ಎಐಎಸ್‌ಎಫ್ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್, ರಾಜ್ಯ ಘಟಕದ ಅಧ್ಯಕ್ಷೆ ಜ್ಯೋತಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ರ್‍ಯಾಲಿ ನಡೆಸಲಾಯಿತು.

ಜನಪರ ಸರ್ಕಾರ ತರುವ ಶಕ್ತಿ ಇದೆ

‘ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಎಡಪಕ್ಷಗಳ ಅಭ್ಯರ್ಥಿಗಳು ನಿಲ್ಲಲು ಸಾಧ್ಯವಿಲ್ಲ. ನಮ್ಮ ಹತ್ತಿರ ಬಂಡವಾಳವೂ ಇಲ್ಲ. ಆದರೆ, ಜನಪರ ಸರ್ಕಾರ ರೂಪಿಸುವ ಶಕ್ತಿ ಮಾತ್ರ ಇದೆ. ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು’ ಎಂದು ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಕೆ.ರಾಮಚಂದ್ರಪ್ಪ ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು

ತುಮಕೂರು
ಭೂ ಫಲವತ್ತತೆಯ ಮಾದರಿ ತೋಟ

ಭೂಮಿಗೆ ವಿಷ ಉಣಿಸದಿದ್ದರೆ ನಮ್ಮ ಬದುಕು ಬಂಗಾರವಾಗುತ್ತದೆ. ಒಂದು ವೇಳೆ ವಸುಂಧರೆಗೆ ವಿಷ ಇಟ್ಟರೆ ಆಕೆಯೂ ನಮಗೆ ವಿಷ ಉಣಿಸುವಳು. ಈ ಮಾತನ್ನು ಸ್ಪಷ್ಟವಾಗಿ...

22 Apr, 2018

ಪಾವಗಡ
‘ಸೋಲಾರ್’ ತಾಪಕ್ಕೆ ಬೆವರಿದ ಜನರು

ವಿಶ್ವದ ಬೃಹತ್ ಸೋಲಾರ್ ಪಾರ್ಕ್ ತಾಲ್ಲೂಕಿನಲ್ಲಿ ನಿರ್ಮಾಣವಾಗುತ್ತಿದೆ. ಆದರೆ ಸೋಲಾರ್ ಪಾರ್ಕ್ ನಿರ್ಮಾಣದ ಹೊಣೆ ಹೊತ್ತಿರುವ ಸಂಸ್ಥೆಗಳು, ಕಂಪನಿಗಳು ಹಸಿರೀಕರಣದತ್ತ ಗಮನಹರಿಸದ ಕಾರಣ ಈ...

22 Apr, 2018
ಅಭಿವೃದ್ಧಿ ಪಥದಲ್ಲಿ ‘ನೆಲ’ಕಚ್ಚಿದ ಹಸಿರು

ತುಮಕೂರು
ಅಭಿವೃದ್ಧಿ ಪಥದಲ್ಲಿ ‘ನೆಲ’ಕಚ್ಚಿದ ಹಸಿರು

22 Apr, 2018

ಗುಬ್ಬಿ
ಪದಾಧಿಕಾರಿಗಳ ಆಕ್ರೋಶ

ನಾಮಪತ್ರ ಸಲ್ಲಿಸುವಾಗ ಆಹ್ವಾನಿಸುವ ವಿಚಾರವಾಗಿ ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಶನಿವಾರ ತಾಲ್ಲೂಕು ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರುಗೇನಹಳ್ಳಿ...

22 Apr, 2018
ಬೆಂಬಲಿಗರ ಬಹುಪರಾಕ್‌, ಬಲ ಪ್ರದರ್ಶನ

ಶಿರಾ
ಬೆಂಬಲಿಗರ ಬಹುಪರಾಕ್‌, ಬಲ ಪ್ರದರ್ಶನ

21 Apr, 2018