ಶಿಕಾರಿಪುರ

ಪರಿವರ್ತನಾ ಯಾತ್ರೆ ನಾಳೆ ಶಿಕಾರಿಪುರಕ್ಕೆ

ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಸೇರಿ ಮುಖಂಡರು ಪಾಲ್ಗೊಳ್ಳಲಿದ್ದಾರೆ

ಶಿಕಾರಿಪುರ: ‘ಪಟ್ಟಣಕ್ಕೆ ಡಿ.27ರಂದು ಮಧ್ಯಾಹ್ನ 3ಕ್ಕೆ ಬಿಜೆಪಿ ಪರಿವರ್ತನಾ ಯಾತ್ರೆ ಆಗಮಿಸಲಿದೆ. ನೂತನ ಸಂತೆ ಮೈದಾನದಲ್ಲಿ ಸಾರ್ವಜನಿಕ ಬಹಿರಂಗ ಸಭೆ ನಡೆಯಲಿದೆ’ ಎಂದು ಶಾಸಕ ಬಿ.ವೈ.ರಾಘವೇಂದ್ರ ತಿಳಿಸಿದರು.

‘135ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಾಗಲಿರುವ ಪರಿವರ್ತನಾ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಡಿ.27ರಂದು ಹೊನ್ನಾಳಿಯಿಂದ ಶಿಕಾರಿಪುರ ಪಟ್ಟಣಕ್ಕೆ ಪರಿವರ್ತನಾ ಯಾತ್ರೆ ಆಗಮಿಸಲಿದೆ. ಹುಚ್ಚ ರಾಯಸ್ವಾಮಿ ದೇವಸ್ಥಾನ ಆವರಣದಲ್ಲಿ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಲಿದ್ದಾರೆ. ನಂತರ ಪ್ರಮುಖ ಬೀದಿಗಳಲ್ಲಿ ಪರಿವರ್ತನಾ ಯಾತ್ರೆಯು ಸಂಚರಿಸಲಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಸೇರಿ ಮುಖಂಡರು ಪಾಲ್ಗೊಳ್ಳಲಿದ್ದಾರೆ. ತಾಲ್ಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಾತ್ರೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಯಡಿಯೂರಪ್ಪ ಅವರ ಮನವಿಯಂತೆ ಶಿವಮೊಗ್ಗದಿಂದ ಶಿಕಾರಿಪುರ, ರಾಣೆಬೆನ್ನೂರು ಮಾರ್ಗದ ರೈಲ್ವೆ ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಹಣ ಮೀಸಲಿಡುತ್ತಿದೆ. ರೈಲ್ವೆ ಮಾರ್ಗದ ಅನುಷ್ಠಾನಕ್ಕಾಗಿ 4 ತಿಂಗಳಲ್ಲಿ ಅಂತಿಮ ಹಂತದ ಸರ್ವೆ ಕಾರ್ಯ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ನೀಡುವಂತೆ ನಿಕೇತನ್ ಕನ್‌ಸ್ಟ್ರಕ್ಷನ್‌ ಸಂಸ್ಥೆಗೆ ಸೂಚಿಸಿದೆ ಎಂದು ತಿಳಿಸಿದರು.

ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಾನಾಯ್ಕ, ಮುಖಂಡರಾದ ಕೆ.ಹಾಲಪ್ಪ, ಟಿ.ಎಸ್‌. ಮೋಹನ್‌, ಕಬಾಡಿ ರಾಜಪ್ಪ, ಕೆ.ಜಿ.ವಸಂತಗೌಡ್ರು, ಎಂ.ಬಿ. ಚನ್ನವೀರಪ್ಪ, ಬಿ.ಡಿ. ಭೂಕಾಂತ್‌, ಚಾರಗಲ್ಲಿ ಪರಶುರಾಮ್‌, ಗಿರೀಶ್‌ ಧಾರಾವಾಡ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ತುಮಕೂರು
ಪ್ರತಿಭೆಗೆ ಪ್ರಶಸ್ತಿ ಮಾನದಂಡವಲ್ಲ

ಪ್ರಶಸ್ತಿ ಪಡೆದ ಮಾತ್ರಕ್ಕೆ ಯಾವುದೇ ಬರಹಗಾರ ಶ್ರೇಷ್ಠನಾಗುವುದಿಲ್ಲ. ಹೀಗಾಗಿ ಪ್ರಶಸ್ತಿಗಳ ಮೇಲೆ ಪ್ರತಿಭೆಯನ್ನು ಅಳೆಯುವುದು ಸರಿಯಲ್ಲ ಎಂದು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಸದಸ್ಯ ಡಾ.ಟಿ.ಎಸ್‌.ವಿವೇಕಾನಂದ...

23 Mar, 2018
ಚರ್ಚೆಗೆ ಗ್ರಾಸವಾದ ಮರಳು ಸಮಸ್ಯೆ

ಸಾಗರ
ಚರ್ಚೆಗೆ ಗ್ರಾಸವಾದ ಮರಳು ಸಮಸ್ಯೆ

23 Mar, 2018

ಕಾರ್ಗಲ್
ಪೌರಕಾರ್ಮಿಕರ ವೇತನ ಸಕಾಲಕ್ಕೆ ಪಾವತಿಸಿ

ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪೌರಕಾರ್ಮಿಕರಿಗೆ ಸಕಾಲಕ್ಕೆ ಮಾಸಿಕ ವೇತನ ಪಾವತಿಯಾಗುವಂತೆ ನೋಡಿ ಕೊಳ್ಳಬೇಕು ಎಂದು ಇಲ್ಲಿನ ಜೋಗ– ಕಾರ್ಗಲ್‌ ಪಟ್ಟಣ...

23 Mar, 2018

ಶಿಕಾರಿಪುರ
ಮಹಿಳಾ ಹಕ್ಕುಗಳಿಗೆ ನಿರಂತರ ಚ್ಯುತಿ

ಸಮಾನತೆಯನ್ನು ಸಂವಿಧಾನ ನೀಡಿದರೂ ಮಹಿಳೆಯರ ಹಕ್ಕುಗಳಿಗೆ ಚ್ಯುತಿ ಬರುವಂತಹ ಪರಿಸ್ಥಿತಿ ಇನ್ನೂ ಸಮಾಜದಲ್ಲಿ ಇದೆ ಎಂದು ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಡಾ.ರಾಜೇಶ್ವರಿ...

23 Mar, 2018

ಶಿವಮೊಗ್ಗ
₹ 3.01 ಕೋಟಿ ಕೊರತೆ ಬಜೆಟ್‌ ಮಂಡನೆ

ಕುವೆಂಪು ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ವಿದ್ಯಾ ವಿಷಯಕ ಪರಿಷತ್‌ನ ಸಾಮಾನ್ಯ ಸಭೆಯಲ್ಲಿ 2018–19ರ ಸಾಲಿಗೆ ₹ 3.01 ಕೋಟಿ ಕೊರತೆಯ ಬಜೆಟ್‌ನ್ನು ಹಣಕಾಸು ಅಧಿಕಾರಿ...

23 Mar, 2018