ದಿನದ ನೆನಪು

ಬುಧವಾರ, 27–12–1967

ತಲಘಟ್ಟಪುರದ ಬಳಿ ಸೋಮವಾರ ಸಂಜೆ ತಮ್ಮ ಜಮೀನಿನ ಬಾವಿ ಕುಸಿದು ಮಣ್ಣಿನಲ್ಲಿ ಹೂತು ಹೋಗಿ ಮರಣ್ಣಕ್ಕೀಡಾದ ಪ್ರಖ್ಯಾತ ಪತ್ತೇದಾರಿ ಕಾದಂಬರಿಕಾರ ಶ್ರೀ ಮ. ರಾಮಮೂರ್ತಿ, ಅವರ ಇಬ್ಬರು ಪುತ್ರರು ಮತ್ತು ಇಬ್ಬರು ಕೂಲಿಗಳ ದೇಹಗಳನ್ನು ಮಂಗಳವಾರ ರಾತ್ರಿ 12ರವರೆಗೂ ಹೊರಕ್ಕೆ ತೆಗೆಯಲು ಸಾಧ್ಯವಾಗಿರಲಿಲ್ಲ.

ತಲಘಟ್ಟಪುರ ಬಾವಿ ದುರಂತ: ಮ. ರಾಮಮೂರ್ತಿ, ಇಬ್ಬರು ಪುತ್ರರ ದೇಹ ತೆಗೆಯಲು ಸತತ ಯತ್ನ

ಬೆಂಗಳೂರು, ಡಿ. 26– ತಲಘಟ್ಟಪುರದ ಬಳಿ ಸೋಮವಾರ ಸಂಜೆ ತಮ್ಮ ಜಮೀನಿನ ಬಾವಿ ಕುಸಿದು ಮಣ್ಣಿನಲ್ಲಿ ಹೂತು ಹೋಗಿ ಮರಣ್ಣಕ್ಕೀಡಾದ ಪ್ರಖ್ಯಾತ ಪತ್ತೇದಾರಿ ಕಾದಂಬರಿಕಾರ ಶ್ರೀ ಮ. ರಾಮಮೂರ್ತಿ, ಅವರ ಇಬ್ಬರು ಪುತ್ರರು ಮತ್ತು ಇಬ್ಬರು ಕೂಲಿಗಳ ದೇಹಗಳನ್ನು ಮಂಗಳವಾರ ರಾತ್ರಿ 12ರವರೆಗೂ ಹೊರಕ್ಕೆ ತೆಗೆಯಲು ಸಾಧ್ಯವಾಗಿರಲಿಲ್ಲ.

ಬುಧವಾರ ಬೆಳಿಗ್ಗೆ ಮೃತರ ದೇಹಗಳನ್ನು ತೆಗೆಯುವ ಪ್ರಯತ್ನವನ್ನು ಮುಂದುವರೆಸಲಾಗುವುದು.

ದುರಂತದ ಸುದ್ದಿ ನಗರಕ್ಕೆ ತಲುಪಿದ ಕೂಡಲೆ ನಿನ್ನೆಯೇ ಬೆಂಗಳೂರು–ಕನಕಪುರ ರಸ್ತೆಯಲ್ಲಿ ಸುಮಾರು 13 ಮೈಲಿ ದೂರದಲ್ಲಿರುವ ಅಲ್ಲಿಗೆ ಪೊಲೀಸ್ ಮತ್ತು ಅಗ್ನಿ ಶಾಮಕಗಳು ಧಾವಿಸಿದವು.

ಬಾವಿಯ ದಡಗಳು ಬಿರುಕು ಬಿಟ್ಟಿರುವುದು ಮಣ್ಣನ್ನು ಎತ್ತುವ ಕೆಲಸ ತಡವಾಗಲು ಮುಖ್ಯ ಕಾರಣವಾಗಿದೆ. ಮಣ್ಣೆತ್ತುವ ಕಾರ್ಯ ತಡವಾದಂತೆಲ್ಲಾ, ಅವರು ಬದುಕಿರಬಹುದೆಂಬ ಆಸೆಯನ್ನು ಕೈಬಿಡಲಾಯಿತು.

*

ಹಿಂದಿ ವಿರೋಧಿ ಪ್ರದರ್ಶಕರ ಹಾವಳಿ

ಮಧುರೆ, ಡಿ. 26– ರಾಮನಾಥ್ ಜಿಲ್ಲೆಯ ಶಿವಗಂಗ ಮತ್ತು ಕಾರೈಕುಡಿಯ ಕಾಲೇಜಿಗೆ ಸೇರಿದ 50ಕ್ಕೂ ಹೆಚ್ಚು ಮಂದಿ ಹಿಂದಿ ವಿರೋಧಿ ವಿದ್ಯಾರ್ಥಿ ಪ್ರದರ್ಶನಕಾರರು ಇಂದು ರಾಮೇಶ್ವರದ ಸುಪ್ರಸಿದ್ಧ ರಾಮನಾಥಸ್ವಾಮಿ ದೇವಾಲಯಕ್ಕೆ ನುಗ್ಗಿ ಹಿಂದಿ ನಾಮಫಲಕಗಳ ಮೇಲೆ ಟಾರು ಬಳಿದರಲ್ಲದೆ ಹೊರ ಪ್ರಾಕಾರದ ಮೇಲೆ ಕೆತ್ತಿದ್ದ ಸಂಸ್ಕೃತ ಶ್ಲೋಕಗಳನ್ನು ಅಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ದಿನದ ನೆನಪು
ಭಾನುವಾರ, 21–1–1968

ಕಾಶ್ಮೀರದ ವಿಮೋಚನೆಗೆ ಪಾಕಿಸ್ತಾನದ ಮಿಲಿಟರಿ ಶಕ್ತಿಯನ್ನು ಅವಲಂಬಿಸಿರುವುದರಿಂದ ರಕ್ಷಣಾ ಪಡೆಗಳನ್ನು ಬಲಪಡಿಸುವುದೇ ಪಾಕಿಸ್ತಾನದ ಮುಖ್ಯ ಕರ್ತವ್ಯವಾಗಿದೆ ಎಂದು ಪಶ್ಚಿಮ ಪಾಕಿಸ್ತಾನದ ಗವರ್ನರ್ ಜ. ಮೂಸಾ...

21 Jan, 2018

ದಿನದ ನೆನಪು
ಶನಿವಾರ, 20–1–1968

ಭೂಮ್ಯಂತರ್ಗತ ಅಣುಸ್ಫೋಟ ಪ್ರಯೋಗವನ್ನು ಅಮೆರಿಕವು ನಡೆಸಿದೆ. ಇದರಿಂದ ವಾತಾವರಣದಲ್ಲಿ ಅಣು ವಿಕಿರಣ ಕ್ರಿಯೆ ತಲೆದೋರಿದೆಯೆಂದು ಅಣು ಶಕ್ತಿ ಆಯೋಗ ನಿನ್ನೆ ತಿಳಿಸಿತು.

20 Jan, 2018

50 ವರ್ಷಗಳ ಹಿಂದೆ
ಗುರುವಾರ, 18–1–1968

ಕಛ್‌ನ ರಣ್ ಪ್ರದೇಶ ಕುರಿತ ತ್ರಿಸದಸ್ಯ ನ್ಯಾಯಮಂಡಲಿ ತೀರ್ಪು ಭಾರತಕ್ಕೆ ವಿರುದ್ಧವಾಗಿರಬಹುದೆಂಬ ಕಳವಳಕಾರಕ ಸುದ್ದಿ ಜಿನೀವಾದಿಂದ ಬಂದಿದೆ.

18 Jan, 2018

50 ವರ್ಷಗಳ ಹಿಂದೆ
ಬುಧವಾರ, 17–1–1968

ಸಿಸಿಲಿಯಲ್ಲಿ ಭಾನುವಾರ ಮತ್ತು ಸೋಮವಾರ ಸಂಭವಿಸಿದ ಭೂಕಂಪದಲ್ಲಿ ಕೊನೆಯಪಕ್ಷ 600 ಮಂದಿ ಸತ್ತಿದ್ದಾರೆಂದು ಇಟಲಿ ಸರ್ಕಾರದ ವೃತ್ತಗಳು ತಿಳಿಸಿವೆ.

17 Jan, 2018

ದಿನದ ನೆನಪು
ಸೋಮವಾರ, 15–1–1968

ಆರು ಮಂದಿ ಕಾಂಗ್ರೆಸ್ ಶಾಸಕರು ಸಚಿವರಾಗಿ ನಾಳೆ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಪಶ್ಚಿಮ ಬಂಗಾಳದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ಹಾಗೂ ‍ಪ್ರಗತಿಶೀಲ ಜನತಂತ್ರರಂಗದ ಸಮ್ಮಿಶ್ರ...

15 Jan, 2018