ಸುಳ್ಯ

ಸುಳ್ಯ ಮೀಸಲಾತಿ ರದ್ದು ಹೋರಾಟಕ್ಕೆ ಪ್ರತಿ ಹೋರಾಟ

ಸುಳ್ಯ ಕ್ಷೇತ್ರದಲ್ಲಿ ಮೀಸಲಾತಿ ಇದ್ದರೂ, ದಲಿತರು ಬೇರೆಯಲ್ಲ, ಇತರರು ಬೇರೆಯಲ್ಲ ಎಂಬ ರೀತಿಯಲ್ಲಿ ನಾವು ಬದುಕುತ್ತಿದ್ದೇವೆ. ಆದರೆ ಕೆಲವರು ಸೇರಿಕೊಂಡು ಮೀಸಲಾತಿ ತೆಗೆಯಲು ಹೋರಾಟ ಆರಂಭಿಸಿದ್ದಾರೆ.

ಸುಳ್ಯ: ’ಇಲ್ಲಿನ ವಿಧಾನಸಭಾ ಕ್ಷೇತ್ರದ ಮೀಸಲಾತಿ ರದ್ದುಗೊಳಿಸಬೇಕೆಂಬ ಹೋರಾಟ ಆರಂಭಗೊಂಡಿರುವುದು ಗಮನಕ್ಕೆ ಬಂದಿದ್ದು, ಇಂತಹ ಹೋರಾಟ ನಡೆದರೆ ನಾವು ಕೂಡಾ ಪ್ರತಿ ಹೋರಾಟ ನಡೆಸುತ್ತೇವೆ' ಎಂದು ದಲಿತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರ ಉಪಸ್ಥಿತಿಯಲ್ಲಿ ಮಂಗಳವಾರ ಸುಳ್ಯದಲ್ಲಿ ನಡೆದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಜಿಲ್ಲಾ ಮಟ್ಟದ ಸಭೆಯಲ್ಲಿ ಮುಖಂಡರು ಹೇಳಿದರು.

ಆನಂದ ಬೆಳ್ಳಾರೆ ಮಾತನಾಡಿ ಸುಳ್ಯ ಕ್ಷೇತ್ರದಲ್ಲಿ ಮೀಸಲಾತಿ ಇದ್ದರೂ, ದಲಿತರು ಬೇರೆಯಲ್ಲ, ಇತರರು ಬೇರೆಯಲ್ಲ ಎಂಬ ರೀತಿಯಲ್ಲಿ ನಾವು ಬದುಕುತ್ತಿದ್ದೇವೆ. ಆದರೆ ಕೆಲವರು ಸೇರಿಕೊಂಡು ಮೀಸಲಾತಿ ತೆಗೆಯಲು ಹೋರಾಟ ಆರಂಭಿಸಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ.  ಎಂದರು. ಬೆಂಬಲಿಸಿ ಮಾತನಾಡಿದ ಕೆ.ಎಂ.ಬಾಬು  ‘ಮೀಸಲಾತಿ ತೆಗೆಯುವ ಹುನ್ನಾರದ ವಿರುದ್ಧ ನಮ್ಮದು ಆಕ್ರೋಶವಿದೆ’ ಎಂದು ಹೇಳಿದರು.

ದಲಿತ ದೌರ್ಜನ್ಯ ಕಾಯಿದೆ ದುರುಪಯೋಗವಾಗದಂತೆ ಹೆಚ್ಚಿನ ಗಮನ ಕೊಡಬೇಕು ಎಂಬ ಸಲಹೆಗಳನ್ನು ನಂದರಾಜ ಸಂಕೇಶ ನೀಡಿದರು. ಸುಬ್ರಹ್ಮಣ್ಯದಲ್ಲಿ ಗೃಹರಕ್ಷಕರು ಹೆಚ್ಚಾಗಿ ದಲಿತ ಸಮುದಾಯವರೇ ಇದ್ದುದರಿಂದ ಅವರನ್ನು ತೆಗೆದುಹಾಕಲಾಗಿದೆ. ಅವರನ್ನು ಪುನರ್ ನೇಮಕವಾಗಬೇಕು ಎಂದು ಅಚ್ಚುತ ಮಲ್ಕಜೆ ಹೇಳಿದಾಗ ಎಸ್‌ಪಿ ಮತ್ತೊಮ್ಮೆ ಪರಿಶೀಲಿಸುವುದಾಗಿ ತಿಳಿಸಿದರು.

ಅಚ್ಚುತ ಮಲ್ಕಜೆ, ಸರಸ್ವತಿ ಬೊಳಿಯಮಜಲು, ವಿಶ್ವನಾಥ ಅಲೆಕ್ಕಾಡಿ ಮಾತನಾಡಿದರು. ಈ ಸಭೆಯ ಹಲವು ವಿಚಾರಗಳನ್ನು ಜಿಲ್ಲಾ ಮಟ್ಟದಲ್ಲಿ ನಡೆಯುವ ಜಾಗೃತಿ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳಲಾಗುವುದೆಂದು ಪೊಲೀಸ್ ವರಿಷ್ಠಾಧಿಕಾರಿ ಸುಧೀರ್‌ಕುಮಾರ್ ರೆಡ್ಡಿ ಭರವಸೆ ನೀಡಿದರು. ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್, ಸರ್ಕಲ್ ಇನ್ಸ್‌ಪೆಕ್ಟರ್ ಸತೀಶ್‌ಕುಮಾರ್, ಎಸ್.ಐ. ಮಂಜುನಾಥ್ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಬಜ್ಪೆ
ಕಳವಾಗಿದ್ದ ದೈವದ ಮೊಗ ಬಾವಿಯಲ್ಲಿ ಪತ್ತೆ

ನಾಲ್ಕು ವರ್ಷಗಳ ಹಿಂದೆ ಪೆರ್ಮುದೆಯ ಗರ್ಭಗುಡಿಯಿಂದ ಕಳವಿಗೀಡಾಗಿದ್ದ  ದೈವದ ಮೊಗ ಪೆರ್ಮುದೆಯ ರಾಯಲ್ ಗಾರ್ಡನ್ ಬಸ್‍ ನಿಲ್ದಾಣ ಬಳಿಯ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ.

18 Apr, 2018

ವಿಟ್ಲ
ವಿಟ್ಲದಲ್ಲಿ ಕಾಂಗ್ರೆಸ್ ಮೌನ ಪ್ರತಿಭಟನೆ

ಜಮ್ಮು ಕಾಶ್ಮೀರದ ಕಠುವಾ  ಬಾಲಕಿಯ ಅತ್ಯಾಚಾರ ಮತ್ತು ಕೊಲೆ, ಉತ್ತರ ಪ್ರದೇಶದ ಉನ್ನಾವ್ ಅತ್ಯಾಚಾರ ಸೇರಿದಂತೆ ಎಲ್ಲಾ ಅತ್ಯಾಚಾರ ಪ್ರಕರಣದ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ...

18 Apr, 2018
‘ಪುತ್ತೂರು ಬೆಡಿ’ಯ ಬಣ್ಣದ ಚಿತ್ತಾರ

ಪುತ್ತೂರು
‘ಪುತ್ತೂರು ಬೆಡಿ’ಯ ಬಣ್ಣದ ಚಿತ್ತಾರ

18 Apr, 2018

ಮಂಗಳೂರು
ಬ್ಯಾಂಕ್‌ ವಹಿವಾಟಿನ ಮೇಲೆ ನಿಗಾ

ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಜಿಲ್ಲೆಯ ಎಲ್ಲ ಬ್ಯಾಂಕ್‌ಗಳಲ್ಲಿ ನಡೆಯುವ ವಹಿವಾಟಿನ ಮೇಲೆ ತೀವ್ರ ನಿಗಾ ಇರಿಸಬೇಕು. ಹವಾಲಾ ಹಣ ವರ್ಗಾವಣೆ ಬಗ್ಗೆಯೂ ಕಟ್ಟೆಚ್ಚರ ವಹಿಸಬೇಕು...

18 Apr, 2018

ಮಂಗಳೂರು
ಎತ್ತಿನಹೊಳೆ ವಿರುದ್ಧದ ಹೋರಾಟ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೊಮ್ಮೆ ತೀವ್ರಗೊಂಡಿದ್ದ ಎತ್ತಿನಹೊಳೆ ಯೋಜನೆ ವಿರುದ್ಧದ ಹೋರಾಟ ಇದೀಗ ಚುನಾವಣಾ ಸಂದರ್ಭದಲ್ಲಿ ಯಾವುದೇ ಸದ್ದು ಮಾಡದೇ ಮೌನವಾಗಿದೆ.

17 Apr, 2018