ತಾಲ್ಲೂಕಿನಲ್ಲಿ 76 ಗ್ರಾಮಗಳು: ಜನರ ಹೋರಾಟಕ್ಕೆ ಸಿಕ್ಕ ಫಲ

ಕಮಲನಗರ ತಾಲ್ಲೂಕು ಕೇಂದ್ರಕ್ಕೆ ಸಿದ್ಧತೆ

ರಾಜ್ಯ ಸರ್ಕಾರ ಹೊಸ ವರ್ಷದ ಆರಂಭದಿಂದ ಕಮಲನಗರ ಸ್ವತಂತ್ರ ತಾಲ್ಲೂಕು ಆಗಿ ಕಾರ್ಯನಿರ್ವಹಿಸಲು ಅಧಿಸೂಚನೆ ಹೊರಡಿಸಿದ್ದು, ಇದಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ.

ಕಮಲನಗರ ತಾಲ್ಲೂಕು ಕೇಂದ್ರಕ್ಕೆ ಸಿದ್ಧತೆ

ಕಮಲನಗರ: ರಾಜ್ಯ ಸರ್ಕಾರ ಹೊಸ ವರ್ಷದ ಆರಂಭದಿಂದ ಕಮಲನಗರ ಸ್ವತಂತ್ರ ತಾಲ್ಲೂಕು ಆಗಿ ಕಾರ್ಯನಿರ್ವಹಿಸಲು ಅಧಿಸೂಚನೆ ಹೊರಡಿಸಿದ್ದು, ಇದಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ.

ಕಮಲನಗರವು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಪ್ರಮುಖ ಶೈಕ್ಷಣಿಕ ಹಾಗೂ ವ್ಯಾಪಾರ ಕೇಂದ್ರವಾಗಿದೆ. ನಿಜಾಮನ ದುರಾಡಳಿತದ ಕಾಲದಲ್ಲಿ ಹೊರಗಡೆ ಉರ್ದು ನಾಮಫಲಕ ಹಾಕಿ ಒಳಗಡೆ ಕನ್ನಡ ಶಾಲೆ ನಡೆಸಿದ ಡಾ.ಚನ್ನಬಸವ ಪಟ್ಟದ್ದೇವರು ಜನಿಸಿದ ಪುಣ್ಯಭೂಮಿಯಾಗಿದೆ. ಮೂವತ್ತು ವರ್ಷಗಳ ಕಾಲ ಧರಣಿ, ಪ್ರತಿಭಟನೆ, ರಸ್ತೆ ತಡೆ, ರೈಲು ತಡೆ, ಸಹಿ ಸಂಗ್ರಹ, ವಿವಿಧ ಆಯಾಮಗಳಲ್ಲಿ ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ಲಭಿಸಿದೆ.

ಕಮಲನಗರದಲ್ಲಿ ನಾಡ ಕಚೇರಿ, ಸರ್ಕಲ್‌ ಪೊಲೀಸ್‌ ಠಾಣೆ, ರೈಲ್ವೆ ನಿಲ್ದಾಣ, ಸಮುದಾಯ ಆರೋಗ್ಯ ಕೇಂದ್ರ, ರೈತ ಸಂಪರ್ಕ ಕೇಂದ್ರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ, ಲೋಕೋಪಯೋಗಿ ಇಲಾಖೆ, ಜೆಸ್ಕಾಂ ಕಚೇರಿ, ಪಶು ವೈದ್ಯಕೀಯ ಆಸ್ಪತ್ರೆ, ಒಂದು ಪದವಿ ಕಾಲೇಜು, ಎರಡು ಪದವಿ ಪೂರ್ವ ಕಾಲೇಜುಗಳು, ನಾಲ್ಕು ಪ್ರೌಢಶಾಲೆಗಳು, 12 ಪ್ರಾಥಮಿಕ ಶಾಲೆಗಳು ಇವೆ.

ಸುಮಾರು 24.43 ಚ.ಕಿ.ಮೀ ವಿಸ್ತೀರ್ಣ ಹೊಂದಿರುವ ಕಮಲನಗರ ಗ್ರಾಮ ಪಂಚಾಯಿತಿಯು ಹನ್ನೊಂದು ವಾರ್ಡ್ ಗಳನ್ನು ಹೊಂದಿದೆ. ಕಮಲನಗರ ತಾಲ್ಲೂಕು ಕೇಂದ್ರವು ಒಟ್ಟು 663.86 ಚ.ಕಿ.ಮೀ ವಿಸ್ತೀರ್ಣದಲ್ಲಿದೆ.

ಕಮಲನಗರ ಹೋಬಳಿಯ ಮುರ್ಗ್‌ (ಕೆ), ಬಾಲೂರ್‌, ರಂಡ್ಯಾಳ್‌, ಡೋಣಗಾಂವ್‌(ಎಂ), ಕೊಟಗ್ಯಾಳ್‌, ಮದನೂರ, ಖತಗಾಂವ್‌, ರಾಂಪುರ, ಚಾಂಡೇಶ್ವರ, ಡಿಗ್ಗಿ, ತೋರಣಾ, ಹಕ್ಯಾಳ್‌, ಹೊಳಸಮುದ್ರ, ಬಸನಾಳ್‌, ಕೋರಯಾಳ್‌, ಸಾವಳಿ, ಹೊರಂಡಿ, ಸೋನಾಳ, ಕಳಗಾಪುರ, ಹುಲಸೂರ್‌, ಭೋಪಾಳಗಡ್‌, ಖೇಡ್‌್, ಸಂಗಮ, ಸಂಗನಾಳ, ಕರ್ಕ್ಯಾಳ್‌, ಬೆಳಕುಣಿ (ಭೋ), ಭವಾನಿ ಬಿಜಲಗಾಂವ್‌ ಹೊಸ ತಾಲ್ಲೂಕಿನಲ್ಲಿ ಸೇರಲಿವೆ.

ದಾಬಕಾ ಹೋಬಳಿಯ ಚಿಕಲಿ (ಯು), ಮುತಖೇಡ್‌, ನಂದಿಬಿಜಲಗಾಂವ್‌, ಚೊಂಡಿ ಮುಖೇಡ್‌, ಬಾದಲಗಾಂವ್‌, ಹೊಕ್ರಾಣಾ, ಅಕನಾಪುರ, ಗಂಗನಬೀಡ್‌, ಗಣೇಶಪುರ (ಯು), ಚವರ ದಾಬಕಾ, ವಾಗನಗೇರಾ, ಮುರ್ಕಿ, ಧರೆಗಾಂವ್‌, ಹಕ್ಯಾಳ್‌, ಚಿಮ್ಮೆಗಾಂವ್‌, ಹಂದಿಖೇರಾ, ಮಾಳೆಗಾಂವ್‌. ಹಂಗರಗಾ (ಬಿ), ಖೇರ್ಡಾ (ಬಿ), ಬೊಂತಿ, ಕರಕ್ಯಾಳ್‌, ಡೊಂಗರಗಾಂವ್‌, ಭಂಡಾರ ಕುಮಟಾ, ಬಾವಳಗಾಂವ್‌, ಸಾವರಗಾಂವ್‌, ಸಂಗನಾಳ್‌, ಡೋರಗಾಂವ್‌, ಲಿಂಗಿ, ಗಂಗನಬೀಡ್‌, ಠಾಣಾಕುನೂರ್‌ ಹೋಬಳಿಯ ರಕ್ಷಾಳ (ಬಿ), ನಿಡೋದಾ, ಮುಧೋಳ (ಬಿ), ಲಿಂಗದಳ್ಳಿ, ಬೇಂಬ್ರಾ, ಹಸ್ಸಿಕೇರಿ, ಚಾಂದೋರಿ, ಹಾಲಹಳ್ಳಿ, ತಪಶ್ಯಾಳ್‌, ಬಳತ (ಕೆ), ಬಳತ (ಬಿ). ಮಸ್ಕಲ್‌, ನಾಗೂರ್‌ (ಬಿ), ಬೆಳಕುಣಿ (ಚೌ), ರಕ್ಷ್ಯಾಳ್‌, ಧೂಪತ್‌ಮಹಾಗಾಂವ್‌, ಮಣಿಗೆಂಪುರ, ಬೆಡಕುಂದಾ, ಹಿಪ್ಪಳಗಾಂವ್‌, ಲಾಧಾ, ಬಾಚೆಪಳ್ಳಿ, ಬಾಬಳಿ, ಹಡಗಾಪುರ, ನಿಟ್ಟೂರ್‌ (ಕೆ), ಕೋರೆಕಲ್‌, ಲಿಂಗದಳ್ಳಿ (ಯು), ಮುಧೋಳ (ಕೆ), ಸಂಗಮ್‌ ಗ್ರಾಮಗಳು ತಾಲ್ಲೂಕಿನಲ್ಲಿ ಸೇರ್ಪಡೆ ಆಗಲಿವೆ.

‘ಹೊಸ ಕಚೇರಿಗಳಿಗೆ ಶಾಶ್ವತ ನಿವೇಶನ ಗುರುತಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ತಹಶೀಲ್ದಾರ್‌ ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

***

ಕಮಲನಗರ ತಾಲ್ಲೂಕಿಗೆ ಸೇರಲಿರುವ ಗ್ರಾಮಗಳ ವಿವರ

ಹೋಬಳಿ ಗ್ರಾಮಗಳ ಸಂಖ್ಯೆ

ದಾಬಕಾ         29

ಕಮಲನಗರ      28

ಠಾಣಾಕುಶನೂರ  29

ಒಟ್ಟು            76

***

ತಾಲ್ಲೂಕಿಗೆ ಸಂಬಂಧಿಸಿದ ಕಚೇರಿಗಳನ್ನು ಶೀಘ್ರ ಆರಂಭಿಸಲು ಜಿಲ್ಲಾಡಳಿತ ಸಮರೋಪಾದಿಯಲ್ಲಿ ಸಿದ್ಧತೆ ಕೈಗೊಳ್ಳಬೇಕು
ಬಸವರಾಜ ಪಾಟೀಲ, ಹೊಸ ತಾಲ್ಲೂಕುಗಳ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ

Comments
ಈ ವಿಭಾಗದಿಂದ ಇನ್ನಷ್ಟು
ಸಂಸ್ಕೃತಿ ಅರಿವಿಗೆ ಜಾನಪದ ಅಧ್ಯಯನ ಅಗತ್ಯ: ಪಟ್ಟದ್ದೇವರು

ಕಮಲನಗರ
ಸಂಸ್ಕೃತಿ ಅರಿವಿಗೆ ಜಾನಪದ ಅಧ್ಯಯನ ಅಗತ್ಯ: ಪಟ್ಟದ್ದೇವರು

23 Jan, 2018

ಬೀದರ್
ಚಿಕ್ಕಪೇಟ್‌ ನಿವೇಶನ ಸ್ಥಳದಿಂದ ಸರ್ವಾಧ್ಯಕ್ಷರ ಮೆರವಣಿಗೆ

ಕನ್ನಡ ಸಾಹಿತ್ಯ ಪರಿಷತ್ತಿನ ಬೀದರ್‌ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಇಲ್ಲಿಯ ಜಿಲ್ಲಾ ರಂಗ ಮಂದಿರದಲ್ಲಿ ಜನವರಿ 23 ರಂದು ನಡೆಯಲಿದೆ.

23 Jan, 2018
ಊರ ನೆಮ್ಮದಿ ಕೆಡಿಸಿದ ತ್ಯಾಜ್ಯ ವಿಲೇವಾರಿ ಘಟಕ

ಹುಮನಾಬಾದ್‌
ಊರ ನೆಮ್ಮದಿ ಕೆಡಿಸಿದ ತ್ಯಾಜ್ಯ ವಿಲೇವಾರಿ ಘಟಕ

23 Jan, 2018
ಅಂಕ ಪಡೆಯಲು ಸ್ವಚ್ಛತಾ ಕಾರ್ಯದ ಕಸರತ್ತು

ಬೀದರ್‌
ಅಂಕ ಪಡೆಯಲು ಸ್ವಚ್ಛತಾ ಕಾರ್ಯದ ಕಸರತ್ತು

22 Jan, 2018
ಸಮಾನತೆಯಿಂದ ಬಲಿಷ್ಠ ಸಮಾಜ ನಿರ್ಮಾಣ

ಬೀದರ್
ಸಮಾನತೆಯಿಂದ ಬಲಿಷ್ಠ ಸಮಾಜ ನಿರ್ಮಾಣ

22 Jan, 2018