ಚಿತ್ರೀಕರಣ

‘ಬಟರ್‌ಫ್ಲೈ’ ಚಿತ್ರತಂಡದ ಜೊತೆ...

ಹಿಂದಿಯ ‘ಕ್ವೀನ್‌’ ಚಿತ್ರದ ರಿಮೇಕ್ ಆಗಿರುವ ಈ ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಪಾರುಲ್, ರಮೇಶ್ ಸೇರಿದಂತೆ ಇಡೀ ತಂಡ ಅಲ್ಲಿ ಸೇರಿತ್ತು.

ರಮೇಶ್ ಅರವಿಂದ್ ಮತ್ತು ಪಾರುಲ್ ಯಾದವ್

‘ಬಟರ್‌ಫ್ಲೈ’ ಚಿತ್ರಕ್ಕೆ ನಟ ರಮೇಶ್ ಅರವಿಂದ್ ಅವರು ಆ್ಯಕ್ಷನ್–ಕಟ್‌ ಹೇಳಲು ಸಿದ್ಧವಾಗಿದ್ದು ಈಗ ಹಳೆಯ ಸುದ್ದಿ. ಆ ಚಿತ್ರದ ಘೋಷಣೆಯನ್ನು ರಮೇಶ್ ಅವರು, ನಟಿ ಪಾರುಲ್ ಯಾದವ್ ಅವರ ಹುಟ್ಟುಹಬ್ಬದ ಸಂಭ್ರಮದ ನಡುವೆಯೇ ಘೋಷಿಸಿದ್ದರು. ಈಗ ಸಿನಿಮಾದ ಹಲವು ಭಾಗಗಳ ಚಿತ್ರೀಕರಣ ಪೂರ್ಣಗೊಂಡಿದೆ.

ಹಿಂದಿಯ ‘ಕ್ವೀನ್‌’ ಚಿತ್ರದ ರಿಮೇಕ್ ಆಗಿರುವ ಈ ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಪಾರುಲ್, ರಮೇಶ್ ಸೇರಿದಂತೆ ಇಡೀ ತಂಡ ಅಲ್ಲಿ ಸೇರಿತ್ತು.

‘ಇದು ಅದ್ದೂರಿ ಸಿನಿಮಾ. ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ’ ಎಂದರು ನಿರ್ಮಾಪಕ ಮನು ಕುಮಾರನ್. ಕನ್ನಡ ಮತ್ತು ತಮಿಳು ಸಿನಿಮಾಗಳ ನಿರ್ದೇಶನ ರಮೇಶ್ ಅವರದ್ದು.

‘ನಿರ್ಮಾಪಕರು ಧೈರ್ಯವಂತರು. ಹಾಗಾಗಿ ಫ್ರಾನ್ಸ್‌ನಲ್ಲಿ 45 ದಿನಗಳ ಶೂಟಿಂಗ್ ಸಾಧ್ಯವಾಗಿದೆ. ಅದು ದುಬಾರಿ ದೇಶ. ಅಲ್ಲಿನ ಖರ್ಚುಗಳನ್ನು ನೆನೆಸಿಕೊಂಡರೆ ಭಯ ಕೂಡ ಆಗಬಹುದು’ ಎನ್ನುತ್ತ ಮಾತು ಆರಂಭಿಸಿದರು ರಮೇಶ್.

‘ಖರ್ಚುಗಳು ಇಷ್ಟೆಲ್ಲ ಇದ್ದರೂ, ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ನಿರ್ಮಾಪಕರು ಮಾಡಿದ್ದಾರೆ. ಅಲ್ಲಿ ಸಸ್ಯಾಹಾರಿಗಳು ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಅಲ್ಲಿ ಎಲ್ಲರಿಗೂ ಭಾರತೀಯ ಅಡುಗೆ ಮಾಡಿ ಬಡಿಸುವ ವ್ಯವಸ್ಥೆ ಮಾಡಿದ್ದರು’ ಎಂದು ನಿರ್ಮಾಪಕರ ಬಗ್ಗೆ ಮೆಚ್ಚುಗೆಯ ಮಾತು ಹೇಳಿದರು ರಮೇಶ್.

‘ಪಾರುಲ್ ಅದ್ಭುತ ನಟಿ. ಫ್ರಾನ್ಸ್‌ನಲ್ಲಿ ಜೇಮ್ಸ್ ಬಾಂಡ್ ಸಿನಿಮಾ ಚಿತ್ರೀಕರಣ ನಡೆದ ಸ್ಥಳಗಳಲ್ಲಿ ನಮಗೂ ಚಿತ್ರೀಕರಣದ ಅವಕಾಶ ಸಿಕ್ಕಿದ್ದು ಮರೆಯಲಾಗದ ಸಂಗತಿ’ ಎಂದು ಖುಷಿ ಹಂಚಿಕೊಂಡರು. ಸಾಮಾನ್ಯ ಸಂದರ್ಭಗಳಲ್ಲಿ ಹೆಚ್ಚು ಮಾತನಾಡದ ಛಾಯಾಗ್ರಾಹಕ ಸತ್ಯ ಹೆಗಡೆ ಅವರಿಗೂ ಅಂದು ಮಾತನಾಡಬೇಕು ಅನಿಸಿತು. ‘ರಮೇಶ್ ಅವರಂತಹ ನಿರ್ದೇಶಕರನ್ನು ನಾನು ಕಂಡಿಲ್ಲ. ಬಹಳ ಶಾಂತವಾಗಿ ಇರುತ್ತಾರೆ. ಅವರು ಸಹನಾಮೂರ್ತಿ’ ಎಂದು ನಿರ್ದೇಶಕರನ್ನು ಶ್ಲಾಘಿಸಿದರು.

‘ನನಗೆ ಸಿಕ್ಕಿರುವ ಪಾತ್ರದ ಬಗ್ಗೆ ಹೆಮ್ಮೆ ಇದೆ. ಕನ್ನಡದಲ್ಲಿ ಮಾಲಾಶ್ರೀ ಸೇರಿದಂತೆ ಹಲವರು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಕ್ವೀನ್ ಚಿತ್ರದಲ್ಲಿ ಕಂಗನಾ ರನೋಟ್ ನಿಭಾಯಿಸಿದ್ದ ಪಾತ್ರವನ್ನು ನಾನು ಕನ್ನಡದಲ್ಲಿ ಮಾಡುತ್ತಿರುವುದು ಖುಷಿ ಕೊಟ್ಟಿದೆ’ ಎಂದರು ಪಾರುಲ್.

Comments
ಈ ವಿಭಾಗದಿಂದ ಇನ್ನಷ್ಟು
ಮನೆ ಬಾಡಿಗೆ ವಿವಾದ; ಫೇಸ್‍ಬುಕ್ ಲೈವ್ ಮೂಲಕ ವಾಸ್ತವ ಸಂಗತಿ ವಿವರಿಸಿದ ಯಶ್

ಮನೆ ಮಾಲೀಕನಿಗೆ ಬೆದರಿಕೆ ಹಾಕಿದ ಆರೋಪ ಪ್ರಕರಣ
ಮನೆ ಬಾಡಿಗೆ ವಿವಾದ; ಫೇಸ್‍ಬುಕ್ ಲೈವ್ ಮೂಲಕ ವಾಸ್ತವ ಸಂಗತಿ ವಿವರಿಸಿದ ಯಶ್

18 Apr, 2018
ಯಶಸ್ಸಿನತ್ತ ಪ್ರೇಮಬರಹ

ಸಿನಿ ಹನಿ
ಯಶಸ್ಸಿನತ್ತ ಪ್ರೇಮಬರಹ

17 Apr, 2018
‘ರಂಗಸ್ಥಲಂ ಆಸ್ಕರ್‌ಗೆ ಅರ್ಹ’

ಟಾಲಿವುಡ್‌
‘ರಂಗಸ್ಥಲಂ ಆಸ್ಕರ್‌ಗೆ ಅರ್ಹ’

17 Apr, 2018
‘ಅಭಿನಯ ತಾರೆ’ಗೆ ಭಾರತದ ಗೌರವ

ನವದೆಹಲಿ
‘ಅಭಿನಯ ತಾರೆ’ಗೆ ಭಾರತದ ಗೌರವ

14 Apr, 2018
ಸೀಜರ್‌ ಅಂದರೆ ಸೇಡಿನ ಕಥೆ

ಸಿನಿಮಾ ವಿಮರ್ಶೆ / ಸೀಜರ್
ಸೀಜರ್‌ ಅಂದರೆ ಸೇಡಿನ ಕಥೆ

13 Apr, 2018