ಅನಾಮಧೇಯ ವಹಿವಾಟು ತಡೆಗೆ ದಕ್ಷಿಣ ಕೊರಿಯಾ ಸರ್ಕಾರದ ನಿರ್ಧಾರ

ಡಿಜಿಟಲ್‌ ಕರೆನ್ಸಿ ಮೇಲೆ ನಿಷೇಧ

ಕಾನೂನಿನ ನಿಯಂತ್ರಣಕ್ಕೆ ಸಿಗದೆ ಅನಾಮಧೇಯವಾಗಿ  ನಡೆಯುವ ಡಿಜಿಟಲ್‌ ಕರೆನ್ಸಿಗಳ ವಹಿವಾಟಿನ ಮೇಲೆ ನಿಷೇಧ ವಿಧಿಸಲು ದಕ್ಷಿಣ ಕೊರಿಯಾ ಮುಂದಾಗಿದೆ.

ಡಿಜಿಟಲ್‌ ಕರೆನ್ಸಿ ಮೇಲೆ ನಿಷೇಧ

ಸೋಲ್‌: ಕಾನೂನಿನ ನಿಯಂತ್ರಣಕ್ಕೆ ಸಿಗದೆ ಅನಾಮಧೇಯವಾಗಿ  ನಡೆಯುವ ಡಿಜಿಟಲ್‌ ಕರೆನ್ಸಿಗಳ ವಹಿವಾಟಿನ ಮೇಲೆ ನಿಷೇಧ ವಿಧಿಸಲು ದಕ್ಷಿಣ ಕೊರಿಯಾ ಮುಂದಾಗಿದೆ.

ಇಂತಹ ಕರೆನ್ಸಿಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಮತ್ತು ತೀವ್ರ ಏರಿಳಿತದ ಬೆಲೆಗಳು ನೀರುಗುಳ್ಳೆಯಂತಾಗಿ ಆತಂಕ ಸೃಷ್ಟಿಸಿರುವುದರಿಂದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ವಿಶ್ವದಾದ್ಯಂತ ನಡೆಯುತ್ತಿರುವ ಕ್ರಿಪ್ಟೊ ಕರೆನ್ಸಿಗಳ ವಹಿವಾಟಿನಲ್ಲಿ ಶೇ 20ರಷ್ಟು ದಕ್ಷಿಣ ಕೊರಿಯಾದಲ್ಲಿಯೇ ನಡೆಯುತ್ತಿದೆ.

ಅನಾಮಧೇಯ ಕ್ರಿಪ್ಟೊ ಕರೆನ್ಸಿಯಲ್ಲಿ ಹೊಸದಾಗಿ ಖಾತೆ ತೆರೆಯುವುದರ ಮೇಲೆ ನಿಷೇಧ ವಿಧಿಸಲಾಗಿದೆ. ಅಗತ್ಯ ಬಿದ್ದರೆ ಇಂತಹ ಕರೆನ್ಸಿಗಳ ವಹಿವಾಟು ನಡೆಸುವ ವಿನಿಮಯ ಕೇಂದ್ರಗಳನ್ನು ಮುಚ್ಚಲು ನಿಯಂತ್ರಣ ಸಂಸ್ಥೆಗಳಿಗೆ ಅಧಿಕಾರ ನೀಡುವ ಹೊಸ ಕಾಯ್ದೆಯನ್ನೂ ಜಾರಿಗೆ ತರಲಾಗುತ್ತಿದೆ.

ಈ ಕರೆನ್ಸಿಗಳ ವಹಿವಾಟು ಅಸಾಮಾನ್ಯ ಊಹಾತ್ಮಕ ಬಗೆಯಲ್ಲಿ ನಡೆಯುತ್ತಿದೆ. ಸದ್ಯಕ್ಕೆ ಚಾಲ್ತಿಯಲ್ಲಿ ಇರುವ ಎಲ್ಲ ಅನಾಮಧೇಯ ಖಾತೆಗಳನ್ನು ಮುಂದಿನ ತಿಂಗಳು ಸ್ಥಗಿತಗೊಳಿಸಲಾಗುವುದು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ವಹಿವಾಟು ಮತ್ತು ಹಣಕಾಸು ವಂಚನೆಗಳಿಗೆ ಕಡಿವಾಣ ಹಾಕುವ, ಬೆಲೆ ಏರಿಳಿತದಲ್ಲಿ ಕೈಚೆಳಕ ತೋರುವುದನ್ನು ನಿಯಂತ್ರಿಸಲೂ ಸರ್ಕಾರ ಉದ್ದೇಶಿಸಿದೆ.

ಸೈಬರ್ ದಾಳಿಯಲ್ಲಿ ಶೇ 17ರಷ್ಟು ಬಿಟ್‌ಕಾಯಿನ್‌ ಕದ್ದ ಘಟನೆ ನಡೆದ ನಂತರ ಇಲ್ಲಿಯ ಯೂಬಟ್‌ (Youbut) ವಿನಿಮಯ ಕೇಂದ್ರ ಕಳೆದ ವಾರವೇ ಬಾಗಿಲು ಹಾಕಿದೆ.

**

10 ಲಕ್ಷ: ದಕ್ಷಿಣ ಕೊರಿಯಾದಲ್ಲಿ ಬಿಟ್‌ಕಾಯಿನ್‌ ಹೊಂದಿದ ಸಣ್ಣ ಹೂಡಿಕೆದಾರರು

20%: ಅಮೆರಿಕದಲ್ಲಿನ ಬೆಲೆಗಿಂತ ಹೆಚ್ಚಿನ ಬೆಲೆ ನಿಗದಿ

17 %: ಯೂಬಟ್‌ ಷೇರುಪೇಟೆಯಲ್ಲಿ ಕದ್ದ ಬಿಟ್‌ಕಾಯಿನ್‌  ಪ್ರಮಾಣ

Comments
ಈ ವಿಭಾಗದಿಂದ ಇನ್ನಷ್ಟು

ನವದೆಹಲಿ
ಮೂರು ವಿಮಾ ಕಂಪನಿಗಳ ವಿಲೀನ ಪ್ರಕ್ರಿಯೆ ಆರಂಭ

ನ್ಯಾಷನಲ್‌ ಇನ್ಶುರನ್ಸ್ ಕಂಪನಿ ಲಿಮಿಟೆಡ್‌, ಯುನೈಟೆಡ್‌ ಇಂಡಿಯಾ ಅಶ್ಯುರನ್ಸ್‌ ಕಂಪನಿ ಲಿಮಿಟೆಡ್‌ ಮತ್ತು ಓರಿಯಂಟಲ್‌ ಇಂಡಿಯಾ ಇನ್ಶುರನ್ಸ್‌ ಕಂಪನಿ ಲಿಮಿಟೆಡ್‌ ಈ ಮೂರು ಕಂಪನಿಗಳು 2016–17ರಲ್ಲಿ...

25 Apr, 2018

ನವದೆಹಲಿ
ಫೋರ್ಟಿಸ್‌ ಷೇರು ಖರೀದಿ ತೀವ್ರ ಪೈಪೋಟಿ

ಫೋರ್ಟಿಸ್‌ ಹೆಲ್ತ್‌ಕೇರ್‌ ಸಂಸ್ಥೆಯ ಷೇರು ಖರೀದಿ ವಿಷಯವು ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸಂಸ್ಥೆಗಳು ಹೂಡಿಕೆ ಮೊತ್ತವನ್ನು ಹೆಚ್ಚಿಸುತ್ತಲೇ ಇವೆ.

25 Apr, 2018

ನವದೆಹಲಿ
₹ 11 ಲಕ್ಷ ಕೋಟಿ ಕೃಷಿ ಸಾಲ ಗುರಿ

ಪ್ರಸಕ್ತ ಆರ್ಥಿಕ ವರ್ಷದಲ್ಲಿ (2018–19) ₹ 11 ಲಕ್ಷ ಕೋಟಿ ಕೃಷಿ ಸಾಲ ನೀಡುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ...

25 Apr, 2018

ಹೈದರಾಬಾದ್‌
ವಿಲೀನಕ್ಕೆ ‘ಸೆಬಿ’ ಒಪ್ಪಿಗೆ ಕೇಳಿದ ಬಿಎಫ್‌ಐಎಲ್‌

ಕಿರು ಹಣಕಾಸು ಸಂಸ್ಥೆಯಾಗಿರುವ ಭಾರತ್ ಫೈನಾನ್ಶಿಯಲ್‌ ಇನ್‌ಕ್ಲೂಷನ್‌ ಲಿಮಿಟೆಡ್‌ (ಬಿಎಫ್‌ಐಎಲ್‌), ಇಂಡಸ್‌ ಇಂಡ್‌ ಬ್ಯಾಂಕ್‌ ಜತೆ ವಿಲೀನಗೊಳ್ಳಲು ನಿರ್ಧರಿಸಿದೆ. ಇದಕ್ಕಾಗಿ ಭಾರತೀಯ ಷೇರುಪೇಟೆ ನಿಯಂತ್ರಣ...

25 Apr, 2018

ಚಂಡೀಗಡ
ಕೈಗಾರಿಕಾ ನೀತಿ ಗ್ರಾಮೀಣ ಪ್ರದೇಶಕ್ಕೆ ಆದ್ಯತೆ: ಪ್ರಭು

‘ಹೊಸ ಕೈಗಾರಿಕಾ ನೀತಿಯನ್ನು ಅಂತಿಮಗೊಳಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ...

25 Apr, 2018