ಶಕ್ತಿನಗರ

ನೌಕರರ ಬೇಡಿಕೆ ಪಟ್ಟಿ ಸಲ್ಲಿಸಲು ನಿರ್ಣಯ

ಪಾಳಿ ಭತ್ಯೆಯ ದರವನ್ನು ಶೇ 10ಕ್ಕೆ ಹೆಚ್ಚಿಸಬೇಕು. ಪಾಳಿಗಳ ಗರಿಷ್ಠ ಮಿತಿಯನ್ನು ತೆಗೆದು ಹಾಕಬೇಕು. ಆರ್‌ಟಿಪಿಎಸ್, ಬಿಟಿಪಿಎಸ್‌, ವೈಟಿಪಿಎಸ್‌ನಲ್ಲಿನ ದೂಳು ಭತ್ಯೆಯನ್ನು ಹೆಚ್ಚಿಸಬೇಕು.

ಶಕ್ತಿನಗರ: ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಮತ್ತು ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ( ಆರ್‌ಟಿಪಿಎಸ್‌) ನೌಕರರ ಸಂಘಗಳ ಜಂಟಿ ಸಹಯೋಗದಲ್ಲಿ ಈಚೆಗೆ ನಡೆದ ಎರಡನೇ ಮಹಾಸಭೆಯಲ್ಲಿ ನೌಕರರ ವಿವಿಧ ಬೇಡಿಕೆಗಳ ಪರಿಹಾರದ ಪಟ್ಟಿಯನ್ನು ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರನಾಯಕ ಅವರಿಗೆ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.

ಪರಿಷ್ಕೃತ ವೇತನವನ್ನು ಹೊಸ ವೇತನ ಶ್ರೇಣಿಗಳಲ್ಲಿ ನಿಗದಿ ಮಾಡಬೇಕು. ಮನೆ ಬಾಡಿಗೆ ಭತ್ಯೆ, ರಿಮೋಟ್‌ ಏರಿಯಾ ಭತ್ಯೆ, ಅನ್ವೇಷಣಾ ಕ್ಷೇತ್ರ ಭತ್ಯೆ, ಪ್ಯಾಕೇಜ್‌ ಸೌಲಭ್ಯ, ವಿಕಲಚೇತನ ಭತ್ಯೆ, ಮಲೇರಿಯಾ ನಿರ್ಮೂಲನಾ ಭತ್ಯೆ, ರಿಸ್ಕ್‌ ಭತ್ಯೆ, ಪೋಲ್‌ ಕ್ಲೈಂಬಿಂಗ್‌ ಭತ್ಯೆ, ಲೆಕ್ಕಪತ್ರ ವಿಶೇಷ ಭತ್ಯೆ,ಸಾರಿಗೆ ಭತ್ಯೆ, ಶಿಕ್ಷಣ ಭತ್ಯೆ
ನೀಡಬೇಕು.

ಪಾಳಿ ಭತ್ಯೆಯ ದರವನ್ನು ಶೇ 10ಕ್ಕೆ ಹೆಚ್ಚಿಸಬೇಕು. ಪಾಳಿಗಳ ಗರಿಷ್ಠ ಮಿತಿಯನ್ನು ತೆಗೆದು ಹಾಕಬೇಕು. ಆರ್‌ಟಿಪಿಎಸ್, ಬಿಟಿಪಿಎಸ್‌, ವೈಟಿಪಿಎಸ್‌ನಲ್ಲಿನ ದೂಳು ಭತ್ಯೆಯನ್ನು ಹೆಚ್ಚಿಸಬೇಕು. ಉಷ್ಣತಾ ಭತ್ಯೆಯನ್ನು ₹1,500 ಸಾವಿರಕ್ಕೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮಟ್ಟದಲ್ಲಿ ಒತ್ತಡ ಹಾಕಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಆರ್‌ಟಿಪಿಎಸ್‌ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ, ಕೆಪಿಸಿಎಲ್ ನೌಕರರ ಸಂಘದ ಅಧ್ಯಕ್ಷ ಚಂದ್ರು ಚೋಟಣ್ಣನವರ್, ವಿವಿಧ ನೌಕರರ ಸಂಘದ ಪದಾಧಿಕಾರಿಗಳಾದ ತಿಪ್ಪಣ್ಣ, ಉರುಕುಂದಪ್ಪ, ಖಾಜಾಹುಸೇನ, ಜಿ.ಸಿದ್ಧಪ್ಪ, ರವೀಂದ್ರ, ನಾಗರಾಜ ಬಾಳೆ, ಮಧುಸೂಧನ್, ಉಮೇಶಭಜಂತ್ರಿ, ಮಹಾದೇವ ಸೂರ್ಯವಂಶಿ, ಮಾರೆಪ್ಪ, ಟಿ.ಸೂಗಪ್ಪ, ಸತ್ಯನಾಥ, ಶ್ರೀನಿವಾಸದಳಪತಿ, ನಜೀರ್‌ಅಹ್ಮದ್‌, ಮಾರೆಪ್ಪ, ಸೂಗಮ್ಮ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ರಾಯಚೂರು
ಬಿಜೆಪಿಗೆ ನಷ್ಟ: ಇಬ್ಬರು ನಾಯಕರ ರಾಜೀನಾಮೆ

ಮಸ್ಕಿ ಹಾಗೂ ಸಿಂಧನೂರು ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್‌ಗಾಗಿ ಕಾದು ಕುಳಿತಿದ್ದ ಇಬ್ಬರು ಪ್ರಬಲ ನಾಯಕರು ಇದೀಗ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಹೊರಬಂದಿರುವುದು...

22 Apr, 2018
ಚುನಾವಣಾ ಕರ್ತವ್ಯ ಆದೇಶ ಪುನರ್‌ ಪರಿಶೀಲಿಸಿ

ಲಿಂಗಸುಗೂರು
ಚುನಾವಣಾ ಕರ್ತವ್ಯ ಆದೇಶ ಪುನರ್‌ ಪರಿಶೀಲಿಸಿ

22 Apr, 2018

ಮಸ್ಕಿ
ಮಸ್ಕಿ : ಚೆಕ್‌ ಪೊಸ್ಟ್ ನಿರ್ವಹಣೆ ಸೇನಾ ವಶಕ್ಕೆ

ಮೇ 12ರಂದು ನಡೆಯುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿಯುತ ಹಾಗೂ ಮುಕ್ತ ಚುನಾವಣೆ ನಡೆಸಲು ಸನ್ನದ್ಧವಾಗಿರುವ ಚುನಾವಣೆ ಆಯೋಗವು ಅಕ್ರಮ ಹಣ ಹಾಗೂ ಮದ್ಯ...

22 Apr, 2018

ರಾಯಚೂರು
ಮದ್ಯ ನಿಷೇಧ ಹೋರಾಟಕ್ಕೆ ರೈತ ಸಂಘ ಬೆಂಬಲ

ರಾಜ್ಯದಲ್ಲಿ ಮದ್ಯ ನಿಷೇಧ ಮಾಡಲು ಒತ್ತಾಯಿಸಿ ಮದ್ಯ ನಿಷೇಧ ಆಂದೋಲನ ಕರ್ನಾಟಕದಿಂದ ನಡೆಸುತ್ತಿರುವ 71 ದಿನಗಳ ಅಹೋರಾತ್ರಿ ಸತ್ಯಾಗ್ರಹಕ್ಕೆ ಕರ್ನಾಟಕ ರಾಜ್ಯ ರೈತ ಸಂಘ...

22 Apr, 2018
ಕಾಯಕಲ್ಪದ ನಿರೀಕ್ಷೆಯಲ್ಲಿ ಖಾಸ ಬಾವಿ

ದೇವದುರ್ಗ
ಕಾಯಕಲ್ಪದ ನಿರೀಕ್ಷೆಯಲ್ಲಿ ಖಾಸ ಬಾವಿ

21 Apr, 2018